ತವರಿಗೆ ವಾಪಸ್ ಹೋಗ್ತಾರಂತೆ ಮೋದಿ?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ 2014ರ ಲೋಕಸಭಾ ಚುನಾವಣೆ ವೇಳೆ ತಮ್ಮ ತವರು ರಾಜ್ಯ ಗುಜರಾತ್ ಬಿಟ್ಟು ಹೊರಕ್ಕೆ ಬಂದಿದ್ರು. ಗುಜರಾತ್‌ನಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರೂ ದೇಶದಲ್ಲಿ ಅಷ್ಟೊಂದು ಪ್ರಭಾವಿ ನಾಯಕನೆಂದು ಗುರುತಿಸಿಕೊಂಡಿರಲಿಲ್ಲ. ಆದರೆ ಲೋಕಸಭೆ ಚುನಾವಣೆ ಘೋಷಣೆಯಾಗ್ತಿದ್ದ ಹಾಗೆ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದ ಬಳಿಕ ತನ್ನ ಮಾತಿನ ಮೋಡಿಯಿಂದ ಜನಮನಗೆದ್ದ ನಾಯಕನಾಗಿ ಹೊರಹೊಮ್ಮಿದ್ರು. ಇದೇ ವೇಳೆ ಗುಜರಾತ್‌ಗೆ ಸೀಮಿತವಾಗಿದ್ದ ನರೇಂದ್ರ ಮೋದಿ ತವರು ರಾಜ್ಯ ಬಿಟ್ಟು ಹೊರಗೂ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾದ್ರು, ಗೆಲವನ್ನೂ ಸಾಧಿಸಿ ಬಿಟ್ರು. ಇದೀಗ ಮತ್ತೆ ಬೇರೊಂದು ಕ್ಷೇತ್ರದ ಕಡೆಗೆ ಪ್ರಧಾನಿ ನರೇಂದ್ರ ಮೋದಿ ಚಿತ್ತ ಹೊರಳಿದೆ ಅನ್ನೋ ಗುಸುಗುಸು ಕೇಳಿಬರುತ್ತಿದೆ.

ಮೊದಲಿಗೆ ಗುಜರಾತ್‌ನ ವಢೋದರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಇಚ್ಛೆ ಹೊಂದಿದ್ದ ನರೇಂದ್ರಮೋದಿ ನಂತರ ಉತ್ತರ ಪ್ರದೇಶದ ವಾರಣಸಿಕ್ಷೇತ್ರದಿಂದಲೂ ಅದೃಷ್ಟ ಪರೀಕ್ಷೆಗೆ ಮುಂದಾದ್ರು. ಜನರು ಕೂಡ ಎರಡೂ ಕ್ಷೇತ್ರದಲ್ಲಿ ಅತ್ಯಧಿಕ ಮತಗಳನ್ನು ಕೊಟ್ಟು ಗೆಲುವು ದಕ್ಕಿಸಿಕೊಟ್ರು. ಬಳಿಕ ಉತ್ತರ ಪ್ರದೇಶದ ವಾರಣಸಿ ಕ್ಷೇತ್ರದಲ್ಲಿ ಸಂಸದನಾಗಿ ಮುಂದುವರಿಗೆ ಪ್ರಧಾನಿ ಮೋದಿ ತನ್ನ ತವರು ರಾಜ್ಯದ ವಢೋದರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ರು. ಆದ್ರೀಗ ವಾರಣಸಿ ಕ್ಷೇತ್ರದಿಂದಲೂ ಹೊರಡುವ ಸಮಯ ಬಂದಿದೆ ಎನ್ನಲಾಗ್ತಿದೆ. ಇದೀಗ ಮತ್ತೊಂದು ಕ್ಷೇತ್ರಕ್ಕೆ ಹೆಜ್ಜೆ ಹಿಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಸೋಲುವ ಭೀತಿ.

ಇದೀಗ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಅಷ್ಟೇ ಅಲ್ಲದೆ ವಿಶ್ವದಲ್ಲೂ ಭಾರೀ ಜನಪ್ರಿಯ ವ್ಯಕ್ತಿ. ಅಂಥಹ ಪ್ರಧಾನಿ ಅಭ್ಯರ್ಥಿ ಕ್ಷೇತ್ರ ಹುಡುಕುತ್ತಿರೋದು ಯಾಕೆ ಅನ್ನೋ ಅನುಮಾನ ಕಾಡ್ತಿದೆ. ವಾರಣಾಸಿಯಲ್ಲಿ ಕೂಡ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮೋದಿ ಮಾಡಿದ್ದಾರೆ. ಹಾಗಿದ್ದರೂ ಜನ ಮೋದಿಯನ್ನು ಯಾಕೆ ಸೋಲಿಸ್ತಾರೆ ಅನ್ನೋ ದ್ವಂದ್ವ ಕೂಡ ಮನೆ ಮಾಡುತ್ತೆ. ಕ್ಷೇತ್ರ ಬಿಟ್ಟು ಬೇರೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಇರುವ ಬಲವಾದ ಕಾರಣ ಅಂದ್ರೆ ಎಸ್‌ಪಿ – ಬಿಎಸ್‌ಪಿ ನಡುವಿನ ಚುನಾವಣಾ ಪೂರ್ವ ಮೈತ್ರಿ ನಿರ್ಧಾರ. ಉತ್ತರ ಪ್ರದೇಶದಲ್ಲಿ ಎರಡು ದೊಡ್ಡ ರಾಜಕೀಯ ಶಕ್ತಿಗಳಾದ ಎಸ್‌ಪಿ ಹಾಗೂ ಬಿಎಸ್‌ಪಿ ಒಗ್ಗಟ್ಟು ಪ್ರದರ್ಶನ ಮಾಡ್ತಿದ್ದು, ಇಬ್ಬರು ಹೊಂದಾಣಿಕೆ ಮಾಡಿಕೊಂಡು ಮೋದಿ ಎಂಬ ದೈತ್ಯ ಶಕ್ತಿಯನ್ನು ಕೆಡವಲು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಮೈತ್ರಿ ಶಕ್ತಿ ಏನೆಂಬುದನ್ನೂ ತೋರಿಸಿದ್ದಾರೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್ ಗೆ ಮರಳಲು ನಿರ್ಧಾರ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

Leave a Reply