ರಿಲೀಸ್ ಆಯ್ತು ಜಿಲ್ಲಾ ಉಸ್ತುವಾರಿಗಳ ಪಟ್ಟಿ! ಯಾರಿಗೆ ಯಾವ ಜಿಲ್ಲೆ?

ಡಿಜಿಟಲ್ ಕನ್ನಡ ಟೀಮ್:

ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಸಾಕಷ್ಟು ಹೈಡ್ರಾಮಾ ನಡೆದು, ರಾಜ್ಯ ಸರ್ಕಾರ ರಚನೆಯಾಗಿತ್ತು. ಆ ಬಳಿಕ ಅಳೆದು ತೂಗಿ ಕುಮಾರಸ್ವಾಮಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ರು. ನಂತರ ಸಾಕಷ್ಟು ಭಿನ್ನಮತ ಸ್ಫೋಟವಾಗಿ, ಎಲ್ಲರನ್ನೂ ಸಮಾಧಾನ ಮಾಡುವಲ್ಲೇ ಸುಸ್ತಾಗಿ ಹೋಗಿದ್ರು. ಪ್ರಬಲ ವಿರೋಧ ಪಕ್ಷ ಬಿಜೆಪಿಯಂತು ಹಾದಿ ಬೀದಿಯಲ್ಲಿ ಉಸ್ತುವಾರಿ ಸಚಿವರ ನೇಮಕವಾಗಿಲ್ಲ ಎಂದು ಟೀಕಿಸುತ್ತಾ ಬಂದಿತ್ತು. ಇದೀಗ ಕೊನೆಗೂ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಯಾವ ಜಿಲ್ಲೆ ಯಾರಿಗೆ ಅನ್ನೋ ಪಟ್ಟಿ ನೋಡೋದಾದ್ರೆ..

ಬೆಂಗಳೂರು, ತುಮಕೂರು: ಜಿ.ಪರಮೇಶ್ವರ್
ಉತ್ತರ ಕನ್ನಡ, ಧಾರವಾಡ: ಆರ್.ವಿ.ದೇಶಪಾಂಡೆ
ರಾಮನಗರ, ಬಳ್ಳಾರಿ: ಡಿ.ಕೆ.ಶಿವಕುಮಾರ್
ಬೆಂಗಳೂರು ಗ್ರಾಮಾಂತರ, ಕೋಲಾರ: – ಕೃಷ್ಣಬೈರೇಗೌಡ
ಚಿಕ್ಕಮಗಳೂರು: ಕೆ.ಜೆ.ಜಾರ್ಜ್
ಬೆಳಗಾವಿ: ರಮೇಶ್ ಜಾರಕಿಹೋಳಿ
ಬಾಗಲಕೋಟೆ: ಶಿವಾನಂದ ಪಾಟೀಲ್
ಕಲಬುರ್ಗಿ: ಪ್ರಿಯಾಂಕ್ ಖರ್ಗೆ
ಯಾದಗಿರಿ: ರಾಜಶೇಖರ ಪಾಟೀಲ್
ಚಿತ್ರದುರ್ಗ: ವೆಂಕಟರಮಣಪ್ಪ
ಚಿಕ್ಕಬಳ್ಳಾಪುರ: ಎನ್.ಹೆಚ್. ಶಿವಶಂಕರ ರೆಡ್ಡಿ
ದಕ್ಷಿಣ ಕನ್ನಡ: ಯು.ಟಿ. ಖಾದರ್
ಚಾಮರಾಜನಗರ: ಸಿ.ಪುಟ್ಟರಂಗಶೆಟ್ಟಿ
ಹಾವೇರಿ: ಜಮೀರ್​ ಅಹ್ಮದ್​
ಉಡುಪಿ: ಜಯಮಾಲ
ಕೊಪ್ಪಳ: ಆರ್.ಶಂಕರ್
ಗದಗ: ಎನ್.ಮಹೇಶ್
ರಾಯಚೂರು: ವೆಂಕಟರಾವ್ ನಾಡಗೌಡ
ದಾವಣಗೆರೆ: ಎಸ್.ಆರ್. ಶ್ರೀನಿವಾಸ್(ವಾಸು)
ಮಂಡ್ಯ: ಸಿ.ಎಸ್. ಪುಟ್ಟರಾಜು
ಕೊಡಗು: ಸಾ.ರಾ.ಮಹೇಶ್
ಬೀದರ್: ಬಂಡೆಪ್ಪ ಕಾಶೆಂಪೂರ್
ಹಾಸನ: ಹೆಚ್.ಡಿ. ರೇವಣ್ಣ
ಶಿವಮೊಗ್ಗ: ಡಿ.ಸಿ. ತಮ್ಮಣ್ಣ
ವಿಜಯಪುರ: ಎಂ.ಸಿ. ಮನಗೂಳಿ
ಮೈಸೂರು: ಜಿ.ಟಿ.ದೇವೇಗೌಡ

Leave a Reply