ಉತ್ತರ ಕರ್ನಾಟಕದ ಅಭಿವೃದ್ಧಿ ಜವಾಬ್ದಾರಿ ಹೊರುತ್ತೇನೆ: ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್:

‘ಪ್ರತ್ಯೇಕ ರಾಜ್ಯದ ಮಾತೇ ಬೇಡ. ಉತ್ತರ- ದಕ್ಷಿಣ ಎಂಬ ತಾರತಮ್ಯ ಮಾಡುವುದಿಲ್ಲ. ಕೆಲವೇ ದಿನಗಳಲ್ಲಿ ಉತ್ತರ ಭಾಗದ ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಈ ಭಾಗದ ಅಭಿವೃದ್ಧಿ ಜವಾಬ್ದಾರಿ ನಾನು ಹೊರುತ್ತೇನೆ…’ ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಜನರಿಗೆ ಕೊಟ್ಟ ಮಾತು!

ಮಂಗಳವಾರ ಉತ್ತರ ಕರ್ನಾಟಕದ ರೈತರ ನಿಯೋಗದ ಜತೆ ವಿಧಾನ ಸೌಧದಲ್ಲಿ ಭೇಟಿ ಮಾಡಿ ಮಾತನಾಡಿದ ಕುಮಾರಸ್ವಾಮಿ ಹೇಳಿದ್ದಿಷ್ಟು…

  • ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಸಾಲಮನ್ನಾ ಮಾಡಿರುವುದನ್ನು ಅರಗಿಸಿಕೊಳ್ಳಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ.
  • ಸಾಲಮನ್ನಾ ವಿಚಾರವಾಗಿ ಎರಡು ತಿಂಗಳಿಂದ ಬೆಂಗಳೂರಲ್ಲೇ ವಾಸ್ತವ್ಯ ಹೂಡಿದ್ದೇನೆ. ಶೀಘ್ರದಲ್ಲೇ ಉತ್ತರ ಕರ್ನಾಟಕ ಭಾಗದ ಪ್ರವಾಸ ಕೈಗೊಳ್ಳುತ್ತೇನೆ.
  • ಉತ್ತರ ಭಾಗದ ಸಂಪೂರ್ಣ ಅಭಿವೃದ್ಧಿ ಜವಾಬ್ದಾರಿ ಹೊರುತ್ತೇನೆ.
  • ಪ್ರತಿ ಜಿಲ್ಲೆಯಲ್ಲಿ ಎರಡೆರಡು ದಿನ ತಂಗುತ್ತೇನೆ.
  • ರಾಜ್ಯ ವಿಭಜಿಸಿ ಎಂದು ನಾನು ಹೇಳಿಲ್ಲ. ಕತ್ತಿ ಹಾಗೂ ಶ್ರೀರಾಮುಲು ಅವರ ಹೇಳಿಕೆಗೆ ದುಡ್ಡು ಎಲ್ಲಿಂದ ತರುತ್ತೀರಿ? ಎಂದಷ್ಟೇ ಕೇಳಿದೆ.
  • ಬೆಳಗಾವಿ ರಾಜಧಾನಿಯಾಗಬೇಕು ಎಂದು ಮೊದಲು ಹೇಳಿದವ ನಾನು. ಆನಂತರ 10 ವರ್ಷಗಳ ಕಾಲ ಯಾರು ಏನನ್ನೂ ಮಾಡಿಲ್ಲ.
  • 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕಕ್ಕೆ 20 ಬಾರಿ ಭೇಟಿ ಮಾಡಿದ್ದೆ. ನಾನು ನಿಮ್ಮವನು. ನಿಮಗೆ ಬೇಕಾದಾಗ ಬಂದು ಮಾತನಾಡಿ.
  • ಬೆಳಗಾವಿ ಸುವರ್ಣ ಸೌಧದಲ್ಲಿ ಶೀಘ್ರವೇ ಸಭೆ ಕರೆದು, ರೈತರು, ನಾಯಕರು, ಮಠಾಧೀಶರು, ಜನಪ್ರತಿನಿಧಿಗಳ ಜತೆ ಈ ಭಾಗದ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತೇನೆ.
  • ಕೆಲವು ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸುವ ಚಿಂತನೆಯೂ ನಡೆದಿದೆ.

Leave a Reply