ನವೀಕರಿಸಬಲ್ಲ ಇಂಧನ ಉತ್ಪಾದನೆಯಲ್ಲಿ ಡೆನ್ಮಾರ್ಕ್, ಹಾಲೆಂಡ್ ಹಿಂದಿಕ್ಕಿದ ಕರ್ನಾಟಕ ವಿಶ್ವಕ್ಕೆ ಮಾದರಿ!

ಡಿಜಿಟಲ್ ಕನ್ನಡ ಟೀಮ್:

ಹವಾಮಾನ ವೈಪರಿತ್ಯ, ತೈಲೋತ್ಪನ್ನ ಇಂಧನಗಳ ಪ್ರಮಾಣ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ವಿಶ್ವವೇ ನವೀಕರಿಸಬಹುದಾದ ಇಂಧನದತ್ತ ಮುಖ ಮಾಡುತ್ತಿದೆ. ಈ ವಿಚಾರದಲ್ಲಿ ಕರ್ನಾಟಕ ಡೆನ್ಮಾರ್ಕ್, ಹಾಲೆಂಡ್ ನಂತಹ ರಾಷ್ಟ್ರಗಳನ್ನೇ ಹಿಂದಿಕ್ಕಿ ಕರ್ನಾಟಕ ರಾಜ್ಯ ವಿಶ್ವಕ್ಕೆ ಮಾದರಿ ಯಾಗಿದೆ.

ಹೌದು, ಕಳೆದ ವರ್ಷವೊಂದರಲ್ಲೇ 5 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡಿದ ಕರ್ನಾಟಕ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಹಾಲೆಂಡ್ ಹಾಗೂ ಡೆನ್ಮಾರ್ಕ್ ರಾಷ್ಟ್ರಗಳನ್ನು ಹಿಂದಿಕ್ಕಿದೆ. ಸದ್ಯ ಕರ್ನಾಟಕ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಾಗುತ್ತಿರುವ ವೇಗ ನೋಡಿದರೆ 2028ರ ವೇಳೆಗೆ ಕರ್ನಾಟಕದ ಇಂಧನ ಉತ್ಪಾದನೆಯಲ್ಲಿ ಶೇ.60ರಷ್ಟು ನವೀಕರಿಸಬಹುದಾದ ಇಂಧನವಾಗಿದೆ.

ಪಾವಗಡದಲ್ಲಿ ವಿಶ್ವದ ಅತಿ ದೊಡ್ಡ ಸೌರಶಕ್ತಿ ವಿದ್ಯುತ್ ಉತ್ಪಾದನೆ ಕೇಂದ್ರ ನಿರ್ಮಾಣದ ಹಂತದಲ್ಲಿದ್ದು ಇದು ಪೂರ್ಣಗೊಂಡರೆ 2 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.

ಕರ್ನಾಟಕದ ನವೀಕರಿಸಬಹುದಾದ ಇಂಧನ ಉತ್ಪಾದನೆ ಹೇಗೆ?

  • ನವೀಕರಿಸಬಹುದಾದ ಇಂಧನ ಉತ್ಪಾದನೆ ಒಟ್ಟು ಪ್ರಮಾಣ 12.3 ಗಿಗಾವ್ಯಾಟ್.
  • 21%ರಷ್ಟು (2.6 ಗಿಗಾವ್ಯಾಟ್) ನವೀಕರಿಸಬಹುದಾದ ಇಂಧನ ಹೈಡ್ರೋ, ಬಯೋಮಾಸ್, ಉಷ್ಣ ವಿದ್ಯುತ್ ಕೇಂದ್ರಗಳಿಂದ ಉತ್ಪಾದನೆ.
  • 38%ರಷ್ಟು (4.7 ಗಿಗಾವ್ಯಾಟ್) ವಿಂಡ್ ಮಿಲ್ ಮೂಲಕ ಉತ್ಪಾದನೆ.
  • 41%ರಷ್ಟು (5 ಗಿಗಾವ್ಯಾಟ್) ಸೋಲಾರ್ ವಿದ್ಯುತ್ ಉತ್ಪಾದನೆ.

ಇತರೆ ಪ್ರಮುಖ ಅಂಶಗಳು…

  • 2018 ಫೆಬ್ರವರಿವರೆಗೂ 10.8 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡುತ್ತಿದ್ದ ತಮಿಳುನಾಡು ಭಾರತದ ರಾಜ್ಯಗಳ ಪೈಕಿ ಅಗ್ರಸ್ಥಾನದಲ್ಲಿತ್ತು. ಈಗ ಎರಡನೇ ಸ್ಥಾನ.
  • ಹಾಲೆಂಡ್ ಹಾಗೂ ಡೆನ್ಮಾರ್ಕ್ ನಂತಹ ರಾಷ್ಟ್ರಗಳು 7.7 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡುತ್ತವೆ.
  • ಇನ್ನು ದಕ್ಷಿಣ ಕೊರಿಯಾ 10.8, ಗ್ರೀಸ್ 8.7, ಬೆಲ್ಜಿಯಂ 7.4, ನ್ಯೂಜಿಲೆಂಡ್ 7.2 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸುತ್ತವೆ.
  • ಭಾರತದ ಇತರೆ ರಾಜ್ಯಗಳ ಪೈಕಿ ಮಹಾರಾಷ್ಟ್ರ 8.6, ಗುಜರಾತ್ 7.3, ರಾಜಸ್ಥಾನ 6.8 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸುತ್ತವೆ.

Leave a Reply