ಕಿಚ್ಚನ ವಿರುದ್ಧ ವಂಚನೆ ಆರೋಪ: ಸಿಎಂ ಹಾಗೂ ಫಿಲ್ಮ್ ಚೇಂಬರ್ ಗೆ ದೂರು!

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್​ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಮುಖ್ಯಮಂತ್ರಿ ಅವರಿಗೆ ದೂರು ನೀಡಲಾಗಿದೆ. ಚಿಕ್ಕಮಗಳೂರಿನ ಕಾಫಿ ಎಸ್ಟೇಟ್​ ಮಾಲೀಕ ದೀಪಕ್ ಅವರು ಸುದೀಪ್ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ.

ಏನಿದು ಪ್ರಕರಣ?

ಕಿಚ್ಚ ಕ್ರಿಯೇಷನ್ಸ್​ ಅಡಿ ನಿರ್ಮಾಣಗೊಂಡಿದ್ದ ವಾರಸ್ದಾರ ಧಾರಾವಾಹಿಯ ಚಿತ್ರೀಕರಣವನ್ನು ಚಿಕ್ಕಮಗಳೂರಿನ ಕಾಫಿ ಎಸ್ಟೇಟ್​ನ ದೊಡ್ಮನೆಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಚಿತ್ರೀಕರಣ ಮಾಡಿದ ತಂಡ ಬಾಡಿಗೆ ಹಣವನ್ನು ಪಾವತಿ ಮಾಡಿಲ್ಲ ಎಂಬುದು ಎಸ್ಟೇಟ್​ ಮಾಲೀಕ ದೀಪಕ್​ ಮಯೂರ್​ ಅವರ ಆರೋಪ.

ಚಿತ್ರೀಕರಣದ ವೇಳೆ ಎಸ್ಟೇಟ್​ನಲ್ಲಿದ್ದ ಗಿಡ, ಮರಗಳನ್ನು ನಾಶ ಮಾಡಲಾಗಿದೆ. ಇದಕ್ಕೆ ಪರಿಹಾರ ನೀಡಿಲ್ಲ. ಜತೆಗೆ ಲಕ್ಷಾಂತರ ರೂಪಾಯಿ ಬಾಡಿಗೆ ನೀಡಿಲ್ಲ ಎಂದು ಆರೋಪ ಮಾಡಿದ್ದಾರೆ ಎಂದು ನ್ಯೂಸ್18 ವರದಿ ಮಾಡಿದೆ.

 

Leave a Reply