ಬಿಗ್ ಬಾಸ್ 6ನೇ ಸೀಸನ್ ನಲ್ಲಿ ಇರ್ತಾರಾ ಈ ಸೆಲೆಬ್ರಿಟಿಗಳು?

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಕಿರುತೆರೆಯಲ್ಲಿ ಹೊಸ ಕ್ರೇಜ್ ಹುಟ್ಟಿಸಿರುವ ಬಿಗ್ ಬಾಸ್ ರಿಯಾಲಿಟಿ ಶೋ ಈಗ ಮತ್ತೆ ಜನರ ಮುಂದೆ ಬರಲು ಸಜ್ಜಾಗಿದೆ. ಬಿಗ್ ಬಾಸ್ 6ನೇ ಆವೃತ್ತಿ ಸಮೀಪಿಸುತ್ತಿರುವ ಹೊತ್ತಲ್ಲಿ ಪ್ರೇಕ್ಷಕರ ಮನದಲ್ಲಿ ಈ ಬಾರಿ ಈ ರಂಗಿನ ಮನೆಗೆ ಯಾರೆಲ್ಲಾ ಬರಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.

ಸದ್ಯ ಈಗಿನ ಟ್ರೆಂಡ್ ಹಾಗೂ ಗುಸುಗುಸು ಚರ್ಚೆಯಲ್ಲಿ ಕೇಳಿ ಬರುತ್ತಿರುವ ಸೆಲೆಬ್ರಿಟಿಗಳ ಪಟ್ಟಿ ಹೀಗಿದೆ…

ದಿಗಂತ್: ಸದ್ಯ ದಿಗಂತ್ ಅವರ ಅಭಿನಯದ ಕಥೆಯೊಂದು ಶುರುವಾಗಿದೆ ಚಿತ್ರ ಬಿಡುಗಡೆಯಾಗಿದ್ದು, ಡಿಸೆಂಬರ್ ನಲ್ಲಿ ದಿಗ್ಗಿ ಮತ್ತು ಐಂದ್ರಿತಾ ಮದುವೆಯಾಗ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲು ಮುಂದಾಗುವ ಸಾಧ್ಯತೆ ಇದೆ.

ಪ್ರೇಮಾ: ಕನ್ನಡ ಚಿತ್ರರಂಗದಲ್ಲಿ ದಶಕಗಳ ನಂ.1 ನಟಿಯಾಗಿ ಮೆರೆದಿದ್ದ ನಟಿ ಪ್ರೇಮಾ ಕಳೆದ ವರ್ಷ ಉಪೇಂದ್ರ ಮತ್ತೆ ಹುಟ್ಟಿ ಬಾ ಚಿತ್ರದ ಮೂಲಕ ರೀಎಂಟ್ರಿ ಕೊಟ್ಟಿದ್ದಾರೆ. ಮತ್ತೆ ಬಣ್ಣ ಹಚ್ಚಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಪ್ರೇಮಾಗೆ ಬಿಗ್ ಬಾಸ್ ಉತ್ತಮ ವೇದಿಕೆ ಕಲ್ಪಿಸಿಕೊಡುವ ನಿರೀಕ್ಷೆ ಹುಟ್ಟಿಸಿದೆ.

ನವೀನ್ ಕೃಷ್ಣ: ಎರಡನೇ ಸೀಸನ್ ನಿಂದ ಕೇಳಿಬತ್ತಿರುವ ಹೆಸರು ನವೀನ್ ಕೃಷ್ಣ. ಪ್ರತಿ ಬಾರಿ ಇವರ ಹೆಸರು ಕೇಳಿಬಂದಂತೆ ಈ ಬಾರಿಯೂ ಕೇಳಿ ಬಂದಿದೆ.

ಎಸ್.ನಾರಾಯಣ್: ಬಿಗ್ ಬಾಸ್ ಮನೆಯಲ್ಲಿ ಹಿರಿಯ ವ್ಯಕ್ತಿಯೊಬ್ಬರು ಎಂಟ್ರಿ ಕೊಡೋದು ಸಹಜ ಆ ಸ್ಥಾನವನ್ನು ಈ ಬಾರಿ ನಟ ಹಾಗೂ ನಿರ್ದೇಶಕ ಎಸ್.ನಾರಾಯಣ್ ತುಂಬಲಿದ್ದಾರೆ ಅನ್ನೋ ಮಾತು ದಟ್ಟವಾಗಿ ಕೇಳಿಬರುತ್ತಿದೆ.

ಮುರಳಿ: ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಅವರ ಹೆಸರು ಜೋರಾಗಿ ಕೇಳಿಬರುತ್ತಿದ್ದು, ಕಳೆದ ಬಾರಿ ಸಿಹಿಕಹಿ ಚಂದ್ರು ಅವರಂತೆ ಈ ಬಾರಿ ಮುರಳಿ ಅವರು ಎಂಟ್ರಿ ಕೊಟ್ಟರೆ ಪವರ್ ಸೆಂಟರ್ ಅಡುಗೆ ಮನೆಯನ್ನು ನಿಯಂತ್ರಿಸುವರೆ ಎಂಬ ನಿರೀಕ್ಷೆ ಮೂಡಿದೆ.

ಸುಮನ್ ರಂಗನಾಥ್: ವಯಸ್ಸನ್ನೇ ನಾಚಿಸುವ ಸೌಂದರ್ಯ ಹೊಂದಿರುವ ನಟಿ ಸುಮನ್ ರಂಗನಾಥ್ ಈ ಬಾರಿ ಬಿಗ್ ಬಾಸ್ ಮನೆ ರಂಗು ಹೆಚ್ಚಿಸುವ ಸಾಧ್ಯತೆ ಇದೆ.

ಉಳಿದಂತೆ ಹೇಮಲತಾ (ಸುದ್ದಿ ನಿರೂಪಕಿ), ಪ್ರೇಮಾಕುಮಾರಿ (ವಿವಾದದಿಂದ ಸುದ್ದಿಯಾಗಿದ್ದವರು), ಗುರುಕಿರಣ್ (ಸಂಗೀತ ನಿರ್ದೇಶಕ), ಇಂದ್ರಜಿತ್ ಲಂಕೇಶ್ (ನಿರ್ದೇಶಕ). ಇನ್ನು ಕೆಲವು ಧಾರಾವಾಹಿ ನಟಿಯರು ಸಿನಿಮಾ ನಟರ ಹೆಸರು ಕೇಳಿಬರುತ್ತಿದೆ.

ಇವರ ಜತೆ ಕಾಮನ್ ಮ್ಯಾನ್ ಕೋಟಾದಲ್ಲಿ ಬರುವವರು ಮನೆ ಸೇರಲಿದ್ದಾರೆ. ಈ ಬಾರಿ ಮನೆಯಲ್ಲಿ ಸೆಲೆಬ್ರಿಟಿ ವರ್ಸಸ್ ಕಾಮನ್ ಮ್ಯಾನ್ ಸದ್ದು ಕೇಳಿ ಬರುತ್ತಾ ಇಲ್ಲವಾ ಎಂಬುದನ್ನು ಬಿಗ್ ಬಾಸ್ ಆರಂಭವಾಗುವವರೆಗೂ ಕಾಯಬೇಕು.

Leave a Reply