ಕೆಜಿಎಫ್ ನಲ್ಲಿ ಯಶ್ ಜೊತೆ ಸೊಂಟ ಬಳುಕಿಸಲಿದ್ದಾರೆ ತಮನ್ನಾ!

ಡಿಜಿಟಲ್ ಕನ್ನಡ ಟೀಮ್:

ದಿನೇ ದಿನೆ ಹವಾ ಹೆಚ್ಚಿಸುತ್ತಿರೋ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರದಲ್ಲಿ ತಮಿಳು ಹಾಗೂ ತೆಲುಗಿನ ಸ್ಟಾರ್ ನಟಿ ತಮನ್ನಾ ಭಾಟಿಯಾ ಅವರು ಹೆಜ್ಜೆ ಹಾಕಲಿದ್ದಾರಂತೆ.

ಕನ್ನಡದ ಖ್ಯಾತ ಐಟಂ ಸಾಂಗ್ ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡಿನ ರೀಮಿಕ್ಸ್ ಹಾಡಿಗೆ ತಮನ್ನಾ ಭಾಟಿಯಾ ಹೆಜ್ಜೆ ಹಾಕಲಿದ್ದಾರೆ. ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಅವರ ಜಾಗ್ವಾರ್ ಚಿತ್ರದ ಹಾಡಿಗೆ ಕುಣಿದಿದ್ದ ಮಿಲ್ಕಿ ಬ್ಯುಟಿ ಈಗ ಯಶ್ ಚಿತ್ರದಲ್ಲಿ ಸೊಂಟ ಬಳುಕಿಸಲಿದ್ದಾರೆ.

ಈ ಚಿತ್ರದ ವಿಶೇಷ ಎಂಟ್ರಿಗಾಗಿ ತಮನ್ನಾ ಜತೆಗೆ ಕಾಜಲ್ ಅಗರ್ವಾಲ್, ಲಕ್ಷ್ಮಿ ರೈ ಅವರ ಹೆಸರು ಕೇಳಿಬಂದಿಟ್ಟಾದರೂ ಅಂತಿಮವಾಗಿ ತಮನ್ನಾ ಫಿಕ್ಸ್ ಆಗಿದ್ದಾರೆಂದು ಮೂಲಗಳು ತಿಳಿಸಿವೆ.

Leave a Reply