ರಾಜಕೀಯಕ್ಕೆ ಬರ್ತಾರಾ ಕೂಲ್ ಕ್ಯಾಪ್ಟನ್ ಧೋನಿ?

ಡಿಜಿಟಲ್ ಕನ್ನಡ ಟೀಮ್:

2019 ಲೋಕಸಭಾ ಚುನಾವಣೆಯಲ್ಲಿ ಆದಷ್ಟು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕು ಅನ್ನೋ ಹಠಕ್ಕೆ ಬಿದ್ದಿರುವ ಬಿಜೆಪಿ ಈಗಾಗಲೇ ಚುನಾವಣಾ ತಯಾರಿ ನಡೆಸಿದೆ. ‘ಸಂಪರ್ಕ್ ಫಾರ್ ಸಮರ್ಥನ್’ ಅನ್ನೋ ಆಂದೋಲನದ ಮೂಲಕ ದೇಶದ ಖ್ಯಾತನಾಮರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಸಾಧನೆಗಳ ಪುಸ್ತಕ ನೀಡುವ ಮೂಲಕ ಕೇಂದ್ರ ಸರ್ಕಾರದ ಕೆಲಸಗಳನ್ನು ಸಮರ್ಥನೆ ಮಾಡಿಕೊಳ್ಳುವುದು ಹಾಗು ವಿರೋಧ ಪಕ್ಷಗಳ ಆರೋಪಗಳು ಜನರನ್ನು ತಲುಪದಂತೆ ಮಾಡುವುದು ಈ ಆಂದೋಲನದ ಮುಖ್ಯ ಉದ್ದೇಶ ಅನ್ನೋದು ಬಿಜೆಪಿ ಪಕ್ಷದ ಹೇಳಿಕೆ. ಆದರೆ ಬಿಜೆಪಿ ಪಕ್ಷದ ಹೇಳಿಕೆಗೂ ಉದ್ದೇಶಕ್ಕೂ ಭಾರೀ ವ್ಯತ್ಯಾಸವಿದೆ ಅನ್ನೋದು ಬಿಜೆಪಿ ನಾಯಕರ ಮನಸ್ಸಿನ ಮಾತು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಬಿಜೆಪಿ ಸಚಿವರು, ಸಂಸದರು ಕೂಡ ಸ್ಥಳೀಯ ನಾಯಕರು, ವಿಜ್ಞಾನಿಗಳು, ಕ್ರೀಡಾಪಟುಗಳು, ಲೇಖಕರು ಸೇರಿದಂತೆ ಸಮಾಜದ ಹಲವಾರು ವಿಭಿನ್ನ ಕ್ಷೇತ್ರದ ಜನರನ್ನು ಭೇಟಿ ಮಾಡಿ ಸರ್ಕಾರದ ಬಗ್ಗೆ ಸಾಧನಾ ಪುಸ್ತಕ ನೀಡ್ತಿದ್ದಾರೆ. ಅಮಿತ್ ಶಾ ಕೂಡ ಇದೇ ರೀತಿ ನಿನ್ನೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿ ಮಾಡಿದ್ರು. ಅವರು ದೇಶದ ಒಳೆಯ ಮ್ಯಾಚ್ ಫಿನಿಷರ್ ಭೇಟಿ ಮಾಡಿದ್ದು ಸಂತೋಷ ತಂದಿದೆ ಅಂತ ಟ್ವೀಟ್ ಮಾಡಿದ್ರು. ಅಮಿತ್ ಶಾ ಅವರ ಹೇಳಿಕೆ ಗಮನಿಸಿದ್ರೆ ರಾಂಚಿ ರ‌್ಯಾಂಬೋ ಮಹೇಂದ್ರ ಸಿಂಗ್ ಧೋನಿ ರಾಜಕೀಯಕ್ಕೆ ಕಾಲಿಡ್ತಾರಾ ಅನ್ನೋ ಅನುಮಾನವನ್ನು ಹುಟ್ಟು ಹಾಕಿದೆ. ಈ ಅನುಮಾನಕ್ಕೆ ಕಾರಣ ಅಂದ್ರೆ ಬಿಜೆಪಿ ಈ ಹಿಂದೆ ತೆಗೆದುಕೊಂಡಿರುವ ಹಲವು ನಿರ್ಧಾರಗಳು.

ಬಿಜೆಪಿ ಕಾಂಗ್ರೆಸ್ ಸೇರಿದಂತೆ ಈ ಹಿಂದೆ ಹಲವು ಕ್ರೀಡಾಪಟುಗಳನ್ನು ರಾಜಕಾರಣಿಗಳನ್ನಾಗಿ ಮಾಡಿರುವ ಇತಿಹಾಸ ನಮ್ನ ಕಣ್ಣ ಮುಂದಿದೆ. ಉದಾಹರಣೆಗೆ ಬಿಜೆಪಿಯಿಂದ ಕೀರ್ತಿ ಅಜಾದ್, ನವಜೋತ್ ಸಿಂಗ್ ಸಿಧು, ರಾಜವರ್ಧನ್ ಸಿಂಗ್ ರಾಥೋಡ್ ಸೇರಿದಂತೆ ಹಲವು ಶಾಸಕರು, ಸಚಿವರಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ನಿಂದಲೂ ಅಜರುದ್ದೀನ್ ಸೇರಿದಂತೆ ಸಾಕಷ್ಟು ಮಂದಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಖ್ಯಾತ ನಾಮರನ್ನು ಭೇಟಿ ಮಾಡುವ ಮೂಲಕ ವೀಕ್ ಇರುವ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನಾಗಿ ಮಾಡುವ ಉದ್ದೇಶ ಬಿಜೆಪಿಗೆ ಇದೆ ಎನ್ನಲಾಗ್ತಿದೆ‌. ಬಿಜೆಪಿಗೆ ಅಷ್ಟೊಂದು ಹೇಳಿಕೊಳ್ಳುವಂತಹ ಕಾರ್ಯಕರ್ತರ ಪಡೆ ಇಲ್ಲದ ಕ್ಷೇತ್ರಗಳಲ್ಲಿ ಕ್ರೀಡಾಪಟುಗಳು, ಸಿನಿಮಾ ಸ್ಟಾರ್‌ಗಳ ನಾಮಬಲವನ್ನೇ ಬಳಸಿಕೊಂಡು ಮತ ಕೇಳುವುದು. ಈ ಬಾರಿ ಗೆಲುವು ಧಕ್ಕದೇ ಇದ್ರು, ಒಂದಷ್ಟು ಕಾರ್ಯಕರ್ತರ ಪಡೆ ಸಜ್ಜಾಗಲಿದೆ. ಈ ತಂತ್ರಗಾರಿಗೆ ಮುಂದಿನ ಬಾರಿ ಗೆಲುವು ತಂದುಕೊಡಲಿದೆ ಅನ್ನೋದು ಭಾರತೀಯ ಜನತಾ ಪಾರ್ಟಿ ಅಚಲ ನಂಬಿಕೆಯಾಗಿದೆ. ಧೋನಿ ಕೂಡ ಈಗಾಗಲೇ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿರುವ ಮಹಿ, ಶೀಘ್ರದಲ್ಲೇ ವಿಶ್ವ ಕಪ್ ನಂತರ ಬಹುತೇಕ ಸೀಮಿತ ಓವರ್ ಕ್ರಿಕೆಟ್ ಗೂ ವಿದಾಯ ಹೇಳಲಿದ್ದು, ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ಮಾಡಿ ತಮ್ಮ ಎರಡನೇ ಇನ್ನಿಗ್ಸ್ ಆರಂಭಿಸಿದರೆ ಅಚ್ಚರಿ ಇಲ್ಲ.

Leave a Reply