ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ವಿಧಿವಶ

ಡಿಜಿಟಲ್ ಕನ್ನಡ ಟೀಮ್:

ಅನಾರೋಗ್ಯದಿಂದ ಬಳಲುತ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಮಂಗಳವಾರ ವಿಧಿವಾಶರಾಗಿದ್ದಾರೆ.

ಅನೇಕ ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ಸಿಲುಕಿದ್ದ ಕರುಣಾನಿಧಿ ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಪರಿಣಾಮ 10 ದಿನಗಳ ಹಿಂದೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
94 ವರ್ಷದ ಕರುಣಾನಿಧಿ ಅವರ ಆರೋಗ್ಯ ಕ್ಷೀಣಿಸಿತ್ತು.
ಮಂಗಳವಾರ ಅಂಗಾಂಗಳ ಕಾರ್ಯನಿರ್ವಹಣೆಯೂ
ಹದಗೆಟ್ಟಿತು. ವೈದ್ಯರ ಚಿಕಿತ್ಸೆಗೆ ಅವರು ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಡಿಎಂಕೆ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆ ಬಳಿ ಜಮಾಯಿಸಿದ್ದು, ಆಸ್ಪತ್ರೆ ಒಳಗೆ ಮತ್ತು ಹೊರಗೆ ಭದ್ರತೆಗಾಗಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಕರುಣಾನಿಧಿ ಅವರ ಜೀವನದ ಬಗ್ಗೆ ನೋಡೋದಾದ್ರೆ..

 • ಜೂನ್ 3, 1924 ರಲ್ಲಿ ತಮಿಳುನಾಡಿನ ತಿರುಕ್ಕುವಲೈನಲ್ಲಿ ಜನನ.
 • ತಿರು ಮುತುವೇಳರ್, ತಿರುಮತಿ ಅಂಜುಗಂ ದಂಪತಿ ಪುತ್ರ.
 • ಇಸೈ ವೆಳ್ಳಲಾರ್ ಸಮುದಾಯಕ್ಕೆ ಸೇರಿದ ಕರುಣಾನಿಧಿ.
 • ಕರುಣಾನಿಧಿಯ ಮೂಲ ಹೆಸರು ದಕ್ಷಿಣಾಮೂರ್ತಿ.
 • ಪದ್ಮಾವತಿ , ದಯಾಳು , ರಾಜಥಿಯವರನ್ನ ಮದುವೆಯಾಗಿದ್ದ ಎಂ. ಕರುಣಾನಿಧಿ.
 • ಎಂ. ಕೆ. ಮುತ್ತು, ಎಂ. ಕೆ. ಅಳಗಿರಿ, ಎಂ. ಕೆ. ಸ್ಟಾಲಿನ್, ಎಂ.ಕೆ ತಮಿಳರಸು, ಎಂ.ಕೆ ಸೆಲ್ವಿ, ಎಂ. ಕೆ ಕನಿಮೋಳಿ ಇವರ ಮಕ್ಕಳು.
 • 1957ರಲ್ಲಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದ ಎಂ. ಕರುಣಾನಿಧಿ.
 • ಅಳಗಿರಿ ಸ್ವಾಮಿ ಭಾಷಣದಿಂದ ಪ್ರೇರಿತರಾಗಿ ರಾಜಕೀಯ ಪ್ರವೇಶ.
 • ತಮಿಳುನಾಡಿನ ಕುಳಿತಲೈ ವಿಧಾನಸಭಾ ಕ್ಷೇತ್ರದಿಂದ ಮೊದಲು ಸ್ಪರ್ಧಿಸಿದ್ದ ಕ್ಷೇತ್ರ.
 • ದಾಲ್ಮಿಯಾಪುರಂ ಹೆಸರನ್ನು ಮತ್ತೆ ಕಲ್ಲಕುಡಿ ಎಂದು ಬದಲಾವಣೆಗಾಗಿ ನಡೆದ ಚಳುವಳಿಯಲ್ಲಿ ಜೈಲುವಾಸ.
 • 1957ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ
 • 1961ರಲ್ಲಿ ಡಿಎಂಕೆ ಪಕ್ಷದ ಕೋಶಾಧಿಕಾರಿಯಾಗಿ ಅಧಿಕಾರ.
 • 1962 ರಲ್ಲಿ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕನಾಗಿ ಆಯ್ಕೆ.
 • 1967ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಾಗ ಲೋಕೋಪಯೋಗಿ ಇಲಾಖೆ ಮಂತ್ರಿ.
 • ಡಿಎಂಕೆ ಸಂಸ್ಥಾಪಕ ಸಿ. ಎನ್. ಅಣ್ಣಾದೊರೆ ನಿಧನ ನಂತರ ಡಿಎಂಕೆ ನಾಯಕತ್ವ.
 • 1969ರಲ್ಲಿ ಮೊದಲ ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಆಯ್ಕೆ.
 • ತಮಿಳುನಾಡಿನ ಮುಖ್ಯಮಂತ್ರಿಯಾಗಿ 5 ಬಾರಿ ಅಧಿಕಾರ (1969-71, 1971-76, 1989-91,1996 -2001, 2006-2011ರಲ್ಲಿ ಮುಖ್ಯಮಂತ್ರಿ).
 • 2006ರಲ್ಲಿ ಜೆ.ಜಯಲಲಿತಾ ವಿರುದ್ದ ರೋಚಕ ಜಯ.
 • ಸೋಲಿಲ್ಲದ ಸರದಾರನಾಗಿ ತಮಿಳುನಾಡು ವಿಧಾನಸಭೆಗೆ ದಾಖಲೆಯ 13 ಬಾರಿ ಆಯ್ಕೆ.

Leave a Reply