ಸಾವಿನಲ್ಲೂ ಶುರುವಾಯ್ತು ರಾಜಕೀಯ!

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನ ರಾಜಕಾರಣದಲ್ಲಿ ಆರು ದಶಕಗಳ ಕಾಲ ಸಾಮ್ರಾಟನಂತೆ ಮೆರೆದ ಎಂ ಕರುಣಾನಿಧಿ ಸಾವಿನ ಬಳಿಕ ರಾಜಕಾರಣ ಶುರುವಾಗಿದೆ. ಗಣ್ಯವ್ಯಕ್ತಿಗಳ ಸಮಾಧಿಗೆ ಚೆನ್ನೈನ ಮರಿನಾ ಬೀಚ್‌ನಲ್ಲಿ ಸ್ಥಳಾವಕಾಶ ಕಲ್ಪಿಸಲಾಗುತ್ತೆ. ಆದ್ರೆ ಕರುಣಾನಿಧಿ ಮಾಜಿ ಸಿಎಂ ಆಗಿರೋ ಕಾರಣಕ್ಕೆ ಮರಿನಾ ಬೀಚ್‌ನಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ. ಸ್ವತಃ ಸಿಎಂ ಪಳನಿಸ್ವಾಮಿ ಅವರನ್ನು ಭೇಟಿ ಮಾಡಿದ ಕರುಣಾನಿಧಿ ಪುತ್ರ ಎಂ.ಕೆ ಸ್ಟಾಲಿನ್, ಮರಿನಾ ಬೀಚ್‌ನಲ್ಲಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ರು. ಆದ್ರೆ ಗಿಂಡಿ ಪ್ರದೇಶದ ಗಾಂಧಿ ಮಂಟಪ ಸಮೀಪ ಎರಡು ಎಕರೆ ಜಾಗ ನೀಡಲು ಸರ್ಕಾರ ಸಿದ್ಧವಿದೆ, ಮರಿನಾ ಬೀಚ್‌ನಲ್ಲಿ ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದ್ರಿಂದ ನಿನ್ನೆ ರಾತ್ರಿಯೇ ಹೈಕೋರ್ಟ್ ಮೊರೆ ಹೋಗಿದ್ದರು. ಮಧ್ಯರಾತ್ರಿ ತನಕ ವಿಚಾರಣೆ ನಡೆಸಿದ ಕೋರ್ಟ್ ಇಂದು ಬೆಳಗ್ಗೆ 8 ಗಂಟೆಗೆ ಮುಂದೂಡಿತ್ತು..

ಸರ್ಕಾರದ ನಿಲುವಿನ ಹಿಂದೆ ಆರ್‌ಎಸ್‌ಎಸ್ ಅಜೆಂಡಾ ಕೆಲಸ ಮಾಡಿದೆ ಅನ್ನೋದು ಡಿಎಂಕೆ ನಾಯಕರ ಆರೋಪ. ಕರಾವಳಿ ಕೇಂದ್ರ ಸರ್ಕಾರ ವ್ಯಾಪ್ತಿಗೆ ಬರಲಿದ್ದು, ಜಯಲಲಿತಾ ಅವರ ಸಮಾಧಿಗೆ ಜಾಗ ನೀಡಿದ ಇದೇ ಕೆಂದ್ರ ಸರ್ಕಾರ, ಕರುಣಾನಿಧಿ ಅವರ ಸಾವಿನಲ್ಲಿ ಬೇರೆಯದೇ ಕಾರಣ ಹೇಳ್ತಿದೆ. ಯಾಕಂದ್ರೆ ಕರುಣಾನಿಧಿ ತನ್ನ ಜೀವಿತಾವಧಿಯಲ್ಲಿ ಬಿಜೆಪಿ ವಿರೋಧಿ ಬಣದಲ್ಲಿಯೇ ಗುರುತಿಸಿಕೊಂಡಿದ್ದ ವ್ಯಕ್ತಿ. ಅದೇ ಕಾರಣಕ್ಕಾಗಿ ಜಯಲಲಿತಾ ಹಾಗು ಕರುಣಾನಿಧಿ ನಡುವೆ ತಾರತಮ್ಯ ಮಾಡಲಾಗ್ತಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ.

ಇಂದು ಬೆಳಗ್ಗೆ ಮತ್ತೆ ವಿಚಾರಣೆ ಆರಂಭವಾದಾಗ ಸರ್ಕಾರ ತನ್ನ ನಿಲುವಿನ ಬಗ್ಗೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು, ಗಾಂಧಿ ಮಂಟಪ ಬಳಿ ಎರಡು ಎಕರೆ ಜಾಗ ನೀಡಲು ಸಿದ್ಧ ಎಂದು ಕೋರ್ಟ್ ತಿಳಿಸಿದೆ. ಒಂದು ವೇಳೆ ಮದ್ರಾಸ್ ಹೈಕೋರ್ಟ್‌ನಲ್ಲಿ ನ್ಯಾಯ ಸಿಗದೇ ಹೋದರೆ ಸುಪ್ರೀಂಕೋರ್ಟ್ ಮೊರೆ ಹೋಗಲು, ಡಿಎಂಕೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಚೆನ್ನೈ ಭೇಟಿಗಾಗಿ ದೆಹಲಿಯಿಂದ ತೆರಳಿದ್ದು, ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Leave a Reply