ಇಂದಿನಿಂದಲೇ ರೈತರ ಸಾಲ ಮನ್ನಾ ಜಾರಿ! ಸಚಿವ ಸಂಪುಟ ತೀರ್ಮಾನ ಏನು?

ಡಿಜಿಟಲ್ ಕನ್ನಡ ಟೀಮ್:

ಈ ವರ್ಷ ಜುಲೈ 10ರವರೆಗೆ ಸಹಕಾರಿ ಬ್ಯಾಂಕಿನ ₹ 1 ಲಕ್ಷವರೆಗಿನ ರೈತರ ಚಾಲ್ತಿ ಸಾಲ ಸಂಪೂರ್ಣ ಮನ್ನಾ ಮಾಡಲು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೀಡಿದ ಮಾಹಿತಿಯ ಪ್ರಮುಖ ಅಂಶಗಳು ಹೀಗಿವೆ…

  • ಒಟ್ಟು ₹10,734 ಕೋಟಿ.
  • ಇದರಲ್ಲಿ ₹9448 ಕೋಟಿ ಸಾಲ ಮನ್ನಾ ಆಗಲಿದೆ.
  • ಸಹಕಾರಿ ಸಂಘಗಳ ಸದಸ್ಯರಾಗಿರುವ 22 ಲಕ್ಷ ರೈತರಲ್ಲಿ 20.38 ಲಕ್ಷ ರೈತರಿಗೆ ಅನುಕೂಲ.
  • ಈ ಸಾಲ ಮನ್ನಾಕ್ಕೆ ಹಣದ ಕೊರತೆ ಇರುವುದಿಲ್ಲ.
  • ಸಾಲ ನವೀಕರಣ ಸಂದರ್ಭದಲ್ಲಿ ಸಹಕಾರ ಇಲಾಖೆ ಪ್ರತಿ ತಿಂಗಳು ಸಲ್ಲಿಸುವ ಬೇಡಿಕೆಗೆ ಅನುಗುಣವಾಗಿ ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡಲಿದೆ.
  • ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಎರಡನೇ ಹಂತವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ₹6500 ಕೋಟಿ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ತೀರ್ಮಾನ.
  • ಬಹುಶಃ ಸಾಲ ಮನ್ನಾದ ಪ್ರಕ್ರಿಯೆ 4 ವರ್ಷಗಳಿಗೆ ಬದಲಾಗಿ ಮುಂದಿನ ವರ್ಷವೇ ಪೂರ್ಣಗೊಳ್ಳಬಹುದು ಎಂಬ ಆಶಾಭಾವ ಸಿಎಂಗೆ.
  • ಸಾಲಮನ್ನಾ ಕುರಿತ ಮಾರ್ಗಸೂಚಿಗಳ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆ.
  • ಒಂದು ಕುಟುಂಬಕ್ಕೆ ಒಂದು ಲಕ್ಷ ರೂ. ವರೆಗಿನ ಸಾಲ ಮನ್ನಾ ಎಂಬ ಅಂಶವನ್ನು ಕೈಬಿಡಲಾಗಿದೆ.
  • 2018 ಫೆಬ್ರುವರಿಯಲ್ಲಿ ಮಂಡಿಸಲಾದ ಲೇಖಾನುದಾನ ಆಯವ್ಯಯದಲ್ಲಿನ ಯೋಜನೆಗಳನ್ನು ಕೈಬಿಟ್ಟಿಲ್ಲ.

Leave a Reply