ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ಎನ್ ಡಿಎಯ ಹರಿವಂಶ ಸಿಂಗ್ ಆಯ್ಕೆ! ವಿರೋಧ ಪಕ್ಷಗಳ ಒಗ್ಗಟ್ಟಿಗೆ ಮತ್ತೆ ಹಿನ್ನಡೆ!

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ಗಮನ ಸೆಳೆದಿದ್ದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಆಡಳಿತಾರೂಢ ಎನ್ ಡಿಎ ಹರಿವಂಶ ಸಿಂಗ್ ಅವರು ಗೆಲುವು ಸಾಧಿಸಿದ್ದಾರೆ.

ಪಿ.ಜೆ ಕುರಿಯನ್ ಅವರ ನಿವೃತ್ತಿ ಹಿನ್ನಲೆಯಲ್ಲಿ ಗುರುವಾರ ನಡೆದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಪ್ರತಿಪಕ್ಷದ ಅಭ್ಯರ್ಥಿಯಾಗಿ ಕರ್ನಾಟಕದ ಸಂಸದ ಬಿ.ಕೆ. ಹರಿಪ್ರಸಾದ್ ಅವರ ವಿರುದ್ಧ ಎನ್ ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಬಹುಮತ ಪಡೆಯಲು ಯಶಸ್ವಿಯಾಗಿದ್ದಾರೆ.

ಚುನಾವಣೆಯಲ್ಲಿ ಹರಿವಂಶ ಅವರು 125 ಮತಗಳನ್ನು ಪಡೆದರೆ, ಹರಿಪ್ರಸಾದ್ ಅವರು 105 ಮತಗಳನ್ನು ಪಡೆದರು.

245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಅದರ ನೇತೃತ್ವದ ಎನ್ ಡಿಎಗೆ ಬಹುಮತವಿರಲಿಲ್ಲ. ಹೀಗಾಗಿ ಅನ್ಯಪಕ್ಷಗಳನ್ನು ಅದು ನೆಚ್ಚಿಕೊಳ್ಳಬೇಕಾದ ಸ್ಥಿತಿಯಲ್ಲಿತ್ತು. ಇದನ್ನೇ ಬಳಸಿಕೊಂಡು ಕೇಂದ್ರದ ವಿರುದ್ಧ ಸಡ್ಡು ಹೊಡೆಯಲು ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಳು ಮುಂದಾದವು. ಹೀಗಾಗಿ ಈ ಚುನಾವಣೆ ವಿರೋಧ ಪಕ್ಷಗಳ ಒಗ್ಗಟ್ಟಿನ ಪರೀಕ್ಷೆಗೆ ವೇದಿಕೆಯಾಗಿತ್ತು. ಬಹುಮತಕ್ಕೆ 123 ಸದಸ್ಯ ಬಲ ಬೇಕಿತ್ತು. ಆದರೆ ನಿರೀಕ್ಷೆ ಮಾಡಿದ ರೀತಿ ವಿರೋಧ ಪಕ್ಷಗಳಲ್ಲಿ ಒಮ್ಮತಬಾರದ ಕಾರಣ ಈ ಸೋಲು ಕಾಣಬೇಕಾಯಿತು. ಕಳೆದ ತಿಂಗಳು ನಡೆದ ಅವಿಶ್ವಾಸ ನಿರ್ಣಯ ಮಂಡನೆ ಬಳಿಕ ರಾಜ್ಯಸಭಾ ಉಪಸಭಾಪತಿ ಸ್ಥಾನ ಆಯ್ಕೆಯಲ್ಲೂ ವಿರೋಧ ಪಕ್ಷಗಳಿಗೆ ಸೋಲು ಎದುರಾಗಿ ಎನ್ ಡಿಎ ಮೈತ್ರಿಗೆ ಜಯ ಸಿಕ್ಕಂತಾಗಿದೆ.

Leave a Reply