ಡಿಜಿಟಲ್ ಕನ್ನಡ ಟೀಮ್:
ಹಲವು ದಶಕಗಳಿಂದ ಉತ್ತರ ಕರ್ನಾಟಕದ ಜನರು ಹೋರಾಡುತ್ತಿರುವ ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಧಿಕರಣ ತೀರ್ಪು ಪ್ರಕಟಿಸಿದ್ದು, ಕರ್ನಾಟಕಕ್ಕೆ ಒಟ್ಟು 13.5 ಟಿಎಂಸಿ ನೀಡಿದೆ.
ಮಂಗಳವಾರ ತೀರ್ಪು ಪ್ರಕಟಿಸಿದ ನ್ಯಾಯಾಲಯ ಕುಡಿಯುವ ನೀರಿಗೆ 5.5 ಹಾಗೂ ನೀರಾವರಿಗೆ 8 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.
- ಆದೇಶದಲ್ಲಿನ ನೀರು ಹಂಚಿಕೆ ಹೀಗಿದೆ…
- ಕರ್ನಾಟಕಕ್ಕೆ ಒಟ್ಟು ನೀರು 13.5 ಟಿಎಂಸಿ.
- ಕುಡಿಯುವ ನೀರಿಗೆ 5.5 ಟಿಎಂಸಿ.
- ಕಳಸಾ ಬಂಡೂರಿಗೆ 4 ಟಿಎಂಸಿ.
- ಮಹದಾಯಿಯಿಂದ ನೀರಾವರಿಗೆ 8 ಟಿಎಂಸಿ.
- ಕಳಸಾ ವ್ಯಾಪ್ತಿಗೆ 1.12 ಟಿಎಂಸಿ.
- ಬಂಡೂರು ವ್ಯಾಪ್ತಿಗೆ 2.18 ಟಿಎಂಸಿ.
- ಮಹದಾಯಿ ವ್ಯಾಪ್ತಿಗೆ 1.5 ಟಿಎಂಸಿ.
- ವಿದ್ಯುತ್ ಉತ್ಪಾದನೆ ಗೆ 8.2 ಟಿಎಂಸಿ
ತೀರ್ಪಿನಲ್ಲಿ ಕರ್ನಾಟಕ ಕೇಳಿದ್ದಕ್ಕಿಂತ ಕಡಿಮೆ ಪ್ರಮಾಣದ ನೀರು ಹಂಚಿಕೆಯಾಗಿದ್ದು, ಈ ತೀರ್ಪಿನ ಬಗ್ಗೆ ಅಪಸ್ವರಗಳು ಕೇಳಿ ಬಂದಿವೆ. ಈ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯದ ಹಿರಿಯ ವಕೀಲರಾದ ಮೋಹನ್ ಕಾತರಕಿ, ‘ರಾಜ್ಯಕ್ಕೆ ಸಂತೋಷವಾಗಿಲ್ಲವಾದರು ತಾತ್ಕಾಲಿಕ ತೃಪ್ತಿ ತಂದಿದೆ’ ಎಂದು ತಿಳಿಸಿದ್ದಾರೆ. ಕರ್ನಾಟಕಕ್ಕೆ 13.5 ಟಿಎಂಸಿ ನೀರು ನೀಡಿರುವುದಕ್ಕೆ ಗೋವಾದಿಂದಲೂ ಅಪಸ್ವರ ಕೇಳಿ ಬರುತ್ತಿದ್ದು. ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಗೋವಾ ನಿರ್ಧರಿಸಿದೆ.