ಅಟಲ್​ ಸ್ಥಿತಿ ಗಂಭೀರ: ವೈದ್ಯರಿಂದ ಅಧಿಕೃತ ಮಾಹಿತಿ

ಡಿಜಿಟಲ್ ಕನ್ನಡ ಟೀಮ್:

ಕಳೆದ 9 ವಾರಗಳಿಂದ ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಜೀವ ರಕ್ಷಕ ಸಾಧನದ ಮೂಲಕ ಚಿಕಿತ್ಸೆ ನೀಡಲಾಗ್ತಿದೆ. ಆದರೆ ಈಗ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

40 ದಿನಗಳಿಂದ ಏಮ್ಸ್​ ಆಸ್ಪತ್ರೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ​ಗೆ ಚಿಕಿತ್ಸೆ ನೀಡಲಾಗ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವೆ ಸೃತಿ ಇರಾನಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ರು. ಒಂದು ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಮೃತಿ ಇರಾನಿ ಏಮ್ಸ್​ ತಜ್ಞ ವೈದ್ಯರ ಜೊತೆ ಸಮಗ್ರವಾಗಿ ಚರ್ಚೆ ನಡೆಸಿದ್ರು..

ಇದೀಗ ಏಮ್ಸ್​ ಆಸ್ಪತ್ರೆ ವೈದ್ಯರ ತಂಡ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಬಗ್ಗೆ ಹೆಲ್ತ್​​ ಬುಲೆಟಿನ್​ ಬಿಡುಗಡೆ ಮಾಡಿದ್ದು, ಅಟಲ್​ ಸ್ಥಿತಿ ಗಂಭೀರವಾಗಿದ್ದು, ಕಳೆದ 24 ಗಂಟೆಗಳಿಂದ ವಾಜಪೇಯಿ ಅವರಿಗೆ ಜೀವ ರಕ್ಷಕ ಸಾಧನ ಅಳವಡಿಕೆ ಮಾಡಿದ್ದೇವೆ. ಕೃತಕ ಉಸಿರಾಟ ಯಂತ್ರ ಅಳವಡಿಸುವ ಮೂಲಕ ಅಜಾತಶತ್ರುಗೆ ಚಿಕಿತ್ಸೆ ನೀಡಲಾಗ್ತಿದೆ ಎಂದು ಬುಲೆಟಿನ್​ ಹೊರಡಿಸಿದ್ದಾರೆ.

ಆದ್ರೀಗ ದೆಹಲಿ ಏಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆಯಾದ ಬಳಿಕ ಬಿಜೆಪಿ ಹಿರಿಯ ನಾಯಕರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಅಟಲ್​ ಬಿಹಾರಿ ವಾಜಪೇಯಿ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಮೂಡಿಸುತ್ತಿದೆ.. ಪ್ರಧಾನಿ ಬ್ಯುಸಿ ಸೆಡ್ಯೂಲ್​ನ ನಡುವೆಯೂ ಒಂದು ಗಂಟೆಗಳ ಕಾಲ ವೈದ್ಯರ ಜೊತೆ ಚರ್ಚಿಸಿದ್ದು ಮತ್ತಷ್ಟು ಆತಂಕ ಉಂಟು ಮಾಡಿದೆ.

Leave a Reply