ವಿಶ್ವವೇ ಭಾರತೀಯರ ಮೇಲೆ ಅವಲಂಭಿತ! ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿಯ ಮಾತುಗಳು

101

ಡಿಜಿಟಲ್ ಕನ್ನಡ ಟೀಮ್:

‘ಇಂದು ಭಾರತ ವಿಶ್ವದ ಭೂಪಟದಲ್ಲಿ ಛಾಪು ಮೂಡಿಸಿದೆ. ಇಂದು ಭಾರತ ಸಾಮಾನ್ಯ ಭಾರತ ಬದಲಿಗೆ ಬಲಿಷ್ಠ ಭಾರತವಾಗಿ ಪ್ರಜ್ವಲಿಸುತ್ತಿದೆ. ವಿಶ್ವದ ಅನೇಕ ರಾಷ್ಟ್ರಗಳು ಭಾರತೀಯರ ಮೇಲೆ ಅವಲಭಿತವಾಗಿವೆ…’ ಇದು ದೆಹಲಿಯ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು 72ನೇ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣ ಮಾಡಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪರಿ.

ದೇಶ ಹಾಗೂ ಸೇನೆಯನ್ನು ಶ್ಲಾಘಿಸಿರುವ ಮೋದಿ, ‘ದೇಶದಲ್ಲಿ ಯಾವುದೇ ಮೂಲೆಯಲ್ಲಿ ಅತಿವೃಷ್ಠಿ, ಅನಾವೃಷ್ಠಿ ಸಂಭವಿಸಿದರೆ ಅಲ್ಲಿನ ಜನರ ನೆರವಿಗೆ ಮೊದಲು ಹೋಗುವುದು ನಮ್ಮ ಯೋಧರು. ಇದರ ಜತೆಗೆ ದೇಶದ ರಕ್ಷಣೆ ವಿಷಯ ಬಂದಾಗ ಗಡಿದಾಟಿ ಸರ್ಜಿಕಲ್ ಸ್ಟ್ರೈಕ್ ಮಾಡುವ ತಾಕತ್ತು ನಮ್ಮ ಸೇನೆಗಿದೆ ಎಂದು ಯೋಧರನ್ನು ಸ್ಮರಿಸಿದರು.

ಪ್ರಧಾನಿ ಮೋದಿ ಅವರ ಭಾಷಣ ಮುಖ್ಯ ಅಂಶಗಳು:

ಮಹಿಳೆಯರು

  • ಸದ್ಯ ಸುಪ್ರೀಂಕೋರ್ಟ್​ನಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಮಹಿಳೆಯರಿಗೆ ಆದ್ಯತೆ, ಗ್ರಾಮ ಪಂಚಾಯಿತಿಯಿಂದ ಸಂಸತ್ ವರೆಗೆ ಮಹಿಳೆಯರು ಅಧಿಕಾರ ನಡೆಸಬೇಕು.
  • ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರಾಕ್ಷಿಸಿ ಕೃತ್ಯಗಳನ್ನ ಸರ್ಕಾರ ಸಹಿಸುವುದಿಲ್ಲ. ರಾಜಸ್ಥಾನದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದವರಿಗೆ ಕಠಿಣ ಶಿಕ್ಷೆ ನೀಡಲಾಗಿದೆ.

ಆಡಳಿತ ಮತ್ತು ಅಭಿವೃದ್ಧಿ

  • ಬಡವರಿಗೆ ನೀಡುವ ಅಕ್ಕಿ, ಗೋದಿಯಲ್ಲೂ ಗೋಲ್​ಮಾಲ್​ ನಡೆಯುತ್ತಿತ್ತು. ಇದಕ್ಕೆ ಬ್ರೇಕ್​ ಹಾಕಿದೆ.
  • ಭಾರತೀಯರ ಆತ್ಮವಿಶ್ವಾಸ ಹೆಚ್ಚಿದೆ. ದೊಡ್ಡ ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುತ್ತಿವೆ.
  • ರೆಡ್​ ಟೇಪ್​ ಆಡಳಿತಕ್ಕೆ ಬ್ರೇಕ್​ ಬಿದ್ದಿದೆ. ಇಂದು ವಿಶ್ವವೇ ಭಾರತದತ್ತ ನೋಡುತ್ತಿದೆ.
  • ಈಶಾನ್ಯ ರಾಜ್ಯಗಳ ಅಭಿವೃದ್ಧಿ ವೇಗವಾಗಿ ಸಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ, ಏರ್​ವೇಸ್​ ಸೇರಿದಂತೆ ಎಲ್ಲ ಸೌಲಭ್ಯಗಳು ಈ ಭಾಗದ ಜನರಿಗೆ ಸಿಗುತ್ತಿವೆ.ಸ್ಟಾರ್ಟ್​ ಅಪ್​, ಈ ಕಾಮರ್ಸ್​ ಹೀಗೆ ಎಲ್ಲ ರಂಗಗಳಲ್ಲಿ ಬದಲಾವಣೆ ಆಗಿದೆ.
  • ಪಿಂಚಣಿ ಲಾಭ ಎಲ್ಲರಿಗೂ ಸಿಗುವಂತಾಗಿದೆ.
  • ನಾವು ಭ್ರಷ್ಟಾಚಾರ- ಕಪ್ಪು ಹಣಕ್ಕೆ ಬ್ರೇಕ್​ ಹಾಕಿದ್ದೇವೆ. ಸರ್ಕಾರ ನಕಲಿ ಕಂಪನಿಗಳನ್ನ ನಿರ್ಮೂಲನೆ ಮಾಡಿದೆ. 3 ಲಕ್ಷ ನಕಲಿ ಕಂಪನಿಗಳು ಬಾಗಿಲು ಹಾಕಿವೆ. ಇಂತಹವರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಸಾಧನೆ

  • ಒಂದೇ ಬಾರಿ 104 ಉಪಗ್ರಹ ಹಾರಿಸಿ ವಿಶ್ವಕ್ಕೆ ಸವಾಲು ಹಾಕಿದ್ದಾರೆ ನಮ್ಮ ಇಸ್ರೋ ವಿಜ್ಞಾನಿಗಳು. ನಾವು ಮಂಗಳನ ಅಂಗಳ ಮುಟ್ಟಿದ್ದೇವೆ. ಇದು ನಮ್ಮ ದೇಶದ ವಿಜ್ಞಾನಿಗಳ ಮಹಾನ್​ ಸಾಧನೆ.
  • ಬಾಹ್ಯಾಕಾಶದಲ್ಲಿ ದೇಶ ಮಹತ್ತರ ಸಾಧನೆ ಮಾಡಿದೆ. 2022 ಕ್ಕೆ ಭಾರತದ ಪುತ್ರ ಅಥವಾ ಪುತ್ರಿ ಅಂತರಿಕ್ಷ ಯಾತ್ರೆ ಕೈಗೊಳ್ಳಲಿದ್ದಾರೆ. ಇದು ನಮ್ಮ ಸಂಕಲ್ಪ.

ಸರ್ಕಾರದ ಯೋಜನೆಗಳು

  • ಜಿಎಸ್​ಟಿ ಬಂದ ಮೇಲೆ ಎಲ್ಲರೂ ಪ್ರಾಮಾಣಿಕತೆಯಿಂದ ತೆರಿಗೆ ಕಟ್ಟುತ್ತಿದ್ದಾರೆ. 2014ಕ್ಕೆ ಮೊದಲು ನಾಲ್ಕು ಕೋಟಿ ಜನ ತೆರಿಗೆ ಕಟ್ಟುತ್ತಿದ್ದರು. ಈಗ 7 ಕೋಟಿಗೆ ಹೆಚ್ಚು ಜನ ನೇರ ತೆರಿಗೆ ಪಾವತಿಸುತ್ತಿದ್ದಾರೆ.
  • ಕೇವಲ 60 ಲಕ್ಷ ಜನ ಮಾತ್ರ 60 ವರ್ಷದಿಂದ ತೆರಿಗೆ ಕಟ್ಟುತ್ತಿದ್ದರು. ಈಗ ಅದು ಏರಿಕೆಯಾಗಿದೆ.
  • ಉಜ್ವಲಾ ಯೋಜನೆ ಮೂಲಕ ಬಡವರ ಮನೆಗೆ ಗ್ಯಾಸ್​, ದೇಶದ ಎಲ್ಲ ಹಳ್ಳಿಗಳಿಗೆ ವಿದ್ಯುತ್​ ಸಿಕ್ಕಿದೆ. ಮನೆ ಮನೆಗೆ ನೀರು ತಲುಪುತ್ತಿದೆ.
  • ಡಬ್ಲ್ಯೂಎಚ್​ಒ ವರದಿ ಪ್ರಕಾರ ಸ್ವಚ್ಛ ಭಾರತ ಯೋಜನೆಯಿಂದ ವರ್ಷಕ್ಕೆ 3 ಲಕ್ಷ ಮಕ್ಕಳು ಬದುಕುಳಿದಿದ್ದಾರೆ.
  • ಗಾಂಧಿಜೀ ಅವರು ಸತ್ಯಾಗ್ರಹಿಗಳನ್ನ ತಯಾರಿಸಿದರು. ಪೂಜ್ಯ ಗಾಂಧಿ ಅವರಿಗೆ ಸ್ವಚ್ಛತಾ ಆಂದೋಲನದ ಮೂಲಕ ಅವರ ಕನಸನ್ನು ಈಡೇರಿಸಿದ್ದೇವೆ.
  • ಎಲ್ಲರಿಗೂ ಶೌಚಾಲಯ ನೀಡಿದ್ದೇವೆ. 100ರಷ್ಟು ನಮ್ಮ ಸಾಧನೆ ಮುಟ್ಟಿದೆ.
  • 2 ಮತ್ತು 3ನೇ ಹಂತದ ನಗರಗಳಲ್ಲಿ ಹೊಸ ಆಸ್ಪತ್ರೆಗಳ ನಿರ್ಮಾಣ.
  • ಮುದ್ರಾ ಯೋಜನೆ ಮೂಲಕ 12 ಕೋಟಿ ಜನರಿಗೆ ವ್ಯಾಪಾರ ಮಾಡಲು ಸಾಲ ನೀಡಲಾಗಿದೆ. ಯುವಕರು ಸ್ವಾವಲಂಬಿಗಳಾಗಿದ್ದಾರೆ.
  • ದೇಶಾದ್ಯಂತ ಐಟಿಯ ಲಾಭ ಪಡೆದಿದ್ದಾರೆ.

ಸೇನೆ ಯಶೋಗಾಥೆ

  • ನಮ್ಮ ಸೇನೆ ದೇಶದ ರಕ್ಷಣೆಗೆ ಬದ್ಧವಾಗಿದೆ. ಇದಕ್ಕಾಗಿ ಹಗಲಿರಳು ಶ್ರಮಿಸುತ್ತಿದೆ.
  • ವೀರ ಸೈನಿಕರಿಗೆ ನಾನು ಶ್ರದ್ಧಾಪೂರ್ವಕ ನಮನ ಸಲ್ಲಿಸುತ್ತೇನೆ.
  • ಸೇನೆ ಮತ್ತು ಪೊಲೀಸರು ಹಗಲಿರಳು ದೇಶದ ಸೇವೆಯಲ್ಲಿ ನಿರತರಾಗಿದ್ದಾರೆ. ದೇಶದ ಜನರ ರಕ್ಷಣೆಗೆ ಜೀವ ತ್ಯಾಗ ಮಾಡಿದ್ದಾರೆ. ಇವರ ಸೇವೆಯಿಂದ ನಾವು ನೆಮ್ಮದಿ ಹಾಗೂ ಸುರಕ್ಷಿತವಾಗಿದ್ದೇವೆ.
  • ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿಗೆ ತಂದು ಸೈನಿಕರ ಆಶಯ ಈಡೇರಿಸಿದ್ದೇವೆ.

ಇತರೆ

  • ನಮ್ಮ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸಲು ಬದ್ಧ.
  • ಎಲ್ಲರ ಹಕ್ಕುಗಳ ರಕ್ಷಣೆ ಮಾಡುವುದು ಸರ್ಕಾರದ ಪ್ರಮುಖ ಆದ್ಯತೆ.
  • ಭಾರತ ಮಲ್ಟಿ ಟ್ರಿಲಿಯನ್​ ಬಂಡವಾಳದ ಸಾಮರ್ಥ್ಯ ಹೊಂದಿದೆ. ಬಿಲಿಯನ್​ ಲೆಕ್ಕದ ಬಂಡವಾಳ ಮುಗಿದು ಈಗ ಟ್ರಿಲಿಯನ್​ ಮಟ್ಟದಲ್ಲಿ ನಮ್ಮ ಆರ್ಥಿಕತೆ ತಲುಪಿದೆ.
  • ಭಾರತ ವಿಕಾಸದ ಹೊಸ ಭಾಷ್ಯ ಬರೆದಿದೆ. ನಾವು ವಿಶ್ವದ ದೊಡ್ಡಣ್ಣನಾಗುವತ್ತ ದಾಪುಗಾಲಿಡುತ್ತಿದ್ದೇವೆ.
  • ದೇಶದಲ್ಲಿ ದಾಖಲೆಯ ಮೊಬೈಲ್​ ಫೋನ್​ಗಳ ಉತ್ಪಾದನೆಯಾಗಿದೆ.
  • ದೇಶಾದ್ಯಂತ ಹೊಸ ಹೊಸ ಐಐಟಿ, ಐಐಎಂಗಳ ಸ್ಥಾಪನೆಯಾಗಿದೆ.
  • ನಮ್ಮ ದೇಶದ ರೈತರು ವೈಜ್ಞಾನಿಕ ತಂತ್ರಜ್ಞಾನದ ಬಳಕೆ ಮಾಡುತ್ತಿದ್ದಾರೆ.
  • ಡಾ. ಅಂಬೇಡ್ಕರ್​ ಅವರ ನೇತೃತ್ವದಲ್ಲಿ ರಚನೆಯಾದ ದೇಶದ ಸಂವಿಧಾನದಿಂದ ಬಡವರು, ದಲಿತ ಸೇರಿದಂತೆ ಎಲ್ಲ ವರ್ಗದವರಿಗೆ ನ್ಯಾಯ ದೊರಕಿತು.

Leave a Reply