ಕೊನೆಯುಸಿರೆಳೆದ ಅಜಾತಶತ್ರು

ಡಿಜಿಟಲ್ ಕನ್ನಡ ಟೀಮ್:

ಅಜಾತಶತ್ರು ಎಂಬ ಪದದ ಪ್ರತಿರೂಪದಂತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ತಮ್ಮ ಕೊನೆಯುಸಿರೆಳೆದಿದ್ದಾರೆ.

ಕಿಡ್ನಿ ಸೇರಿದಂತೆ ಹಲವು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದ ವಾಜಪೇಯಿ ಅವರಿಗೆ ಕಳೆದ ಒಂಬತ್ತು ವಾರಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಅಟಲ್ ಅವರ ಆರೋಗ್ಯ ಸ್ಥಿತಿ ಬುಧವಾರ ಸಂಜೆ ಗಂಭೀರವಾಯಿತು ಎಂದು ಆಸ್ಪತ್ರೆಯ ಹೇಳಿಕೆಯಲ್ಲಿ ತಿಳಿಸಲಾಗಿತ್ತು. ಹೀಗಾಗಿ ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ, ಸಾಲು ಸಾಲಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಗಣ್ಯರು ಆಸ್ಪತ್ರೆಯತ್ತ ಭೇಟಿ ನೀಡಿದರು.

ದೇಶದಾದ್ಯಂತ ಎಲ್ಲಾ ಧರ್ಮದವರು, ದೇವಾಲಯಗಳಲ್ಲಿ ವಿಶೇಷ ಹೋಮ, ಪೂಜೆ ಹಾಗೂ ದರ್ಗಾದಿಂದ ಶಾಲೆಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಇದು ಅಟಲ್ ಜೀ ಅವರು ಅಜಾತಶತ್ರು ಎಂಬುದನ್ನು ಸಾಬೀತುಪಡಿಸಿತು.

ವಾಜಪೇಯಿ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ.

ವಾಜಪೇಯಿ ಅವರ ಹಾದಿ

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಡಿಸೆಂಬರ್​​ 25 1924ರಲ್ಲಿ ಜನಿಸಿದ ಅಟಲ್​ ಬಿಹಾರಿ ವಾಜಪೇಯಿ, ಗ್ವಾಲಿಯರ್‌ನ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ಪದವಿ ಪಡೆದ್ದಿದ್ದಾರೆ. ಜೊತೆಗೆ ಹಿಂದಿ, ಇಂಗ್ಲಿಷ್, ಸಂಸ್ಕೃತದಲ್ಲಿ ಡಿಸ್ಟಿಂಕ್ಷನ್‌ ಪಡೆದು, ಕಾನ್ಪುರದ DAV ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ MA ಮುಗಿಸಿದ್ದಾರೆ..

ವಿದ್ಯಾರ್ಥಿ ಜೀವನದಲ್ಲೇ ಸಮಾಜಮುಖಿ ಕೆಲಸ ಆರಂಭಿಸಿದ ವಾಜಪೇಯಿ, ಆರ್ಯ ಸಮಾಜದ ಯುವ ವಿಭಾಗದಲ್ಲಿ ಕೆಲಸ ಮಾಡಿದ್ರು.. 1944ರಲ್ಲಿ ಆರ್ಯ ಸಮಾಜದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಬಳಿಕ ಬಾಬಾ ಸಾಹೇಬ್ ಆಪ್ಟೆ ಪ್ರಭಾವಕ್ಕೆ ಒಳಗಾಗಿ 1939ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರ್ಪಡೆಯಾದ ಅವರನ್ನು 1947ರಲ್ಲಿ ಪೂರ್ಣಾವಧಿ ಪ್ರಚಾರಕರನ್ನಾಗಿ ನೇಮಿಸಲಾಯ್ತು.. ಕಾನೂನು ಪದವಿ ವ್ಯಾಸಂಗ ಮಾಡ್ತಿದ್ದ ವಾಜಪೇಯಿ ಅವರು ಕಾನೂನು ಅಧ್ಯಯನ ಭಾರತ-ಪಾಕಿಸ್ತಾನ ಬೇರ್ಪಟ್ಟಾಗ ದಂಗೆಯಿಂದ ಸ್ಥಗಿತವಾಯ್ತು..

ಅಟಲ್‌ ಜೀ ಅವರ ರಾಜಕೀಯ ಜೀವನದ ಬಗ್ಗೆ ನೋಡೋದಾದ್ರೆ.. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡು 23 ದಿನ ಜೈಲು ಶಿಕ್ಷೆ ಅನುಭವಿಸಿದ್ರು.. 1951ರಲ್ಲಿ RSS ಸ್ಥಾಪಿಸಿದ ‘ಭಾರತೀಯ ಜನಸಂಘ’ಕ್ಕೆ ಸೇರ್ಪಡೆಯಾದರು.. ಬಳಿಕ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಅವರು, 1954ರಲ್ಲಿ ಕಾಶ್ಮೀರೇತರ ವ್ಯಕ್ತಿಗಳ ಗೌರವಕ್ಕಾಗಿ ಶ್ಯಾಮ ಪ್ರಸಾದ್​ ಮುಖರ್ಜಿ ಜೊತೆ ಉಪವಾಸ ಸತ್ಯಾಗ್ರಹ ಮಾಡಿದ್ರು..

1957 ರಲ್ಲಿ ಮಥುರಾ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ ಅಟಲ್​ ಜೀಗೆ ಸೋಲಾಯ್ತು.. ಬಳಿಕ 1957ರಲ್ಲಿ ಬಲರಾಂಪುರದಿಂದ ಗೆಲುವು ಪಡೆದ ಅವರು, ದೀನದಯಾಳ್ ಉಪಾಧ್ಯಾಯರ ಅವರ ಸಾವಿನ ನಂತರ ಭಾರತೀಯ ಜನಸಂಘದ ನೇತೃತ್ವ ವಹಿಸಿಕೊಳ್ಳಬೇಕಾಯ್ತು.. 1968ರಲ್ಲಿ ಜನಸಂಘದ ಅಧ್ಯಕ್ಷರಾಗಿ ಆಯ್ಕೆಯಾದ್ರು.. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ವೇಳೆ 1975-1977 ರ ಅವಧಿಯಲ್ಲಿ ಜೈಲು ವಾಸವನ್ನೂ ಮಾಡಿದ್ರು..

ಜಯಪ್ರಕಾಶ್ ನಾರಾಯಣರ ಹೋರಾಟಕ್ಕೆ ಬೆಂಬಲ ಘೋಷಿಸಿದ ಅಟಲ್​ ಬಿಹಾರಿ ವಾಜಪೇಯಿ, 1977ರಲ್ಲಿ ಜನತಾ ಪಕ್ಷದ ಮಹಾಮೈತ್ರಿಯಲ್ಲಿ ಜನಸಂಘವನ್ನು ವಿಲೀನ ಮಾಡಿದ್ರು.. ಆ ಬಳಿಕ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ವಿದೇಶಾಂಗ ಸಚಿವ ಕೆಲಸ ಮಾಡಿದ ವಾಜಪೇಯಿ, ವಿಶ್ವಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ..

ಬಳಿಕ ಅಡ್ವಾಣಿ, ಭೈರಾನ್‌ಸಿಂಗ್ ಶೆಖಾವತ್ ಜೊತೆ 1980 ‘ಭಾರತೀಯ ಜನತಾಪಕ್ಷ’ ಸ್ಥಾಪಿಸಿದ ಅಟಲ್​ ಬಿಹಾರಿ ವಾಜಪೇಯಿ, ಭಾರತೀಯ ಜನತಾ ಪಕ್ಷದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದ್ರು.. ಕಾಂಗ್ರೆಸ್ ಸರ್ಕಾರದ ವಿರುದ್ಧ ಕಟು ಟೀಕೆ ಮಾಡುತ್ತಾ ರಾಜಕೀಯವಾಗಿ ಪ್ರಭಾವ ಶಾಲಿಯಾದ ವಾಜಪೇಯಿ, 1995ರಲ್ಲಿ ವಾಜಪೇಯಿ ಅವರನ್ನು ಮುಂದಿನ ಪ್ರಧಾನಿ ಎಂದು ಲಾಲ್​ ಕೃಷ್ಣ ಅಡ್ವಾಣಿ ಘೋಷಣೆ ಮಾಡಿದ್ರು..

1996ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಪಡೀತು.. ಪ್ರಥಮ ಬಾರಿಗೆ ಅಟಲ್​ ಬಿಹಾರಿ ವಾಜಪೇಯಿ, ಭಾರತದ 10ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ರು.. ಆದ್ರೆ ಬಹುಮತ ಸಾಬೀತಾಗದೇ ಕೇವಲ 13 ದಿನದಲ್ಲೇ ರಾಜೀನಾಮೆ ನೀಡಬೇಕಾಯ್ತು.. ರಾಜೀನಾಮೆ ಸಲ್ಲಿಕೆಗೂ ಮುನ್ನ ವಾಜಪೇಯಿ ನೀಡುವ ಸಂದರ್ಭ ಮಾಡಿದ ಭಾಷಣಕ್ಕೆ ಭಾರೀ ಮೆಚ್ಚುಗೆ ಪಾತ್ರವಾಯ್ತು..

1998ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದಾಗ 2ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ರು.. ಕೆಲ ದಿನಗಳ ಬಳಿಕ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಬೆಂಬಲ ವಾಪಸ್ ಪಡೆದಾಗ ಸರ್ಕಾರ ಪತನವಾಯ್ತು.. ನಂತ್ರ 1999ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ಬಂದಾಗ 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ್ರು.. ಉತ್ತಮ ಆಡಳಿತಗಾರ ಅನ್ನೋ ಹೆಗ್ಗಳಿಕೆ ಪಡೆದರೂ 2004ರಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರಕ್ಕೆ ಸೋಲಾಯ್ತು.. ಈ ಹಿನ್ನೆಲೆಯಲ್ಲಿ 2005ರಲ್ಲಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ರು..

ವಾಜಪೇಯಿ ವಿಶೇಷತೆಗಳು ಏನು ಅಂತಾ ನೋಡೋದಾರೆ..

ಅಟಲ್​ ವಿಶೇಷಗಳು

 • 5 ವರ್ಷ ಪ್ರಥಮ ಕಾಂಗ್ರೆಸ್ಸೇತರ ಪ್ರಧಾನಿ ಅನ್ನೋ ಹೆಗ್ಗಳಿಕೆ
 • 3 ಬಾರಿ ಪ್ರಧಾನಿ ಕೆಲಸ ಮಾಡಿದ ಅಜಾತಶತ್ರು ವಾಜಪೇಯಿ
 • 10 ಬಾರಿ ಲೋಕಸಭೆಗೆ ಹಾಗು 2 ಬಾರಿ ರಾಜ್ಯಸಭೆಗೆ ಆಯ್ಕೆ
 • ಒಟ್ಟು 40 ವರ್ಷಗಳ ಕಾಲ ಮಾದರಿ ಸಂಸದೀಯಪಟು
 • ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷಣ ಮಾಡಿದ ಮೊದಲ ಭಾರತೀಯ
 • ಅಟಲ್ ಜನ್ಮದಿನ ಡಿಸೆಂಬರ್ 25, ಉತ್ತಮ ಆಡಳಿತ ದಿನಾಚರಣೆ
 • ಅಟಲ್​ ಮಾತುಗಾರಿಕೆ ನೋಡಿ ಪ್ರಧಾನಿ ಆಗುವ ಭವಿಷ್ಯ ನುಡಿದಿದ್ದ ನೆಹರೂ
 • 3ನೇ ಬಾರಿ ಪ್ರಧಾನಿಯಾದಾಗ ದೇಶದ ಆರ್ಥಿಕತೆಯಲ್ಲಿ ಭಾರೀ ಅಭಿವೃದ್ಧಿ

ಮರೆಯಲಾಗದ ಅಟಲ್​ ತೀರ್ಮಾನಗಳು

 • ಮೇ, 1998ರಲ್ಲಿ ಫೋಕ್ರಾನ್‌ನಲ್ಲಿ ಪರಮಾಣು ಬಾಂಬ್‌ ಪರೀಕ್ಷೆ
 • ಜುಲೈ, 1999ರಲ್ಲಿ ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧ ಘೋಷಣೆ
 • 1998 ರಲ್ಲಿ ದೇಶದಲ್ಲಿ ರಾಷ್ಟ್ರೀಯ ಚತುಷ್ಪಥ ಯೋಜನೆ ಜಾರಿ

Leave a Reply