ಅಟಲ್ ಅಂತ್ಯಕ್ರಿಯೆ ಬ್ರಾಹ್ಮಣ ಸಂಪ್ರದಾಯದಂತೆ ನಡೆದರೂ ಮೌಢ್ಯಕ್ಕೆ ಸಡ್ಡು ಹೊಡೆದ​ ದತ್ತು ಪುತ್ರಿ!

ಡಿಜಿಟಲ್ ಕನ್ನಡ ಟೀಮ್:

ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಶುಕ್ರವಾರ ದೆಹಲಿಯ ವಿಜಯ್​ ಘಾಟ್​​ನ ಸ್ಮೃತಿ ಸ್ಥಳದಲ್ಲಿ ದತ್ತು ಪುತ್ರಿ ನಮಿತಾ ಅವರು ಚಿತೆಗೆ ಕರ್ಪೂರದಿಂದ ಅಗ್ನಿ ಸ್ಪರ್ಶ ಮಾಡುವ ಮೂಲಕ ವಿಧಿ ವಿಧಾನ ಪೂರೈಸಿದ್ದಾರೆ.

ಬ್ರಾಹ್ಮಣ ಸಂಪ್ರದಾಯಂತೆ ನಡೆದ ವಿಧಿವಿಧಾನದಲ್ಲಿ ಅಟಲ್​ ಬಿಹಾರಿ ವಾಜಪೇಯಿ ಅವರ ಅಳಿಯ ಅಂತಿಮ ಕಾರ್ಯ ನಿರ್ವಹಿಸುವ ನಿರೀಕ್ಷೆ ಇತ್ತು. ಆದ್ರೆ ದತ್ತು ಪುತ್ರಿ ನಮಿತಾ ಅಗ್ನಿ ಸ್ಪರ್ಶ ಮಾಡುವ ಮೂಲಕ ಮಹಿಳೆಯರು ಸ್ಮಶಾಣಕ್ಕೆ ಬರಬಾರದು ಅನ್ನೋ ಕೆಲವೊಂದು ಸಮುದಾಯದಲ್ಲಿರುವ ಆಚರಣೆ. ಅದರಲ್ಲೂ ಅಂತಿಮ ವಿಧಿವಿಧಾನವನ್ನು ಗಂಡು ಮಕ್ಕಳು ಅಥವಾ ಮಗನ ಸಮಾನರಾದ ಅಳಿಯನೇ ಮಾಡಬೇಕೆಂಬ ಮೌಢ್ಯಕ್ಕೆ ಬ್ರೇಕ್ ಬಿದ್ದಿದ್ದು ವಿಶೇಷವಾಗಿತ್ತು.

ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ದತ್ತು ಪುತ್ರಿ ನಮಿತಾ ಅವರ ಮಗಳು ನಿಹಾರಿಕಾ ಸ್ವೀಕರಿಸಿದರು. ಇದಕ್ಕೂ ಮೊದಲು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಿಂದ ವಿಜಯ್​ ಘಾಟ್​ ತನಕ ನಡೆದ ಸುಮಾರು 6 ಕಿ.ಮೀ ವರೆಗಿನ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನರು, ಮುತ್ಸದ್ಧಿಗಳೊಂದಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಹೆಜ್ಜೆ ಹಾಕಿದರು.

ರಾಷ್ಟ್ರೀಯ ಸ್ಮೃತಿಸ್ಥಳದಲ್ಲಿ ಸೇನಾಪಡೆಗಳು ಅಂತಿಮ ಗೌರವ ನೀಡಿದವು. ಸೇನಾ ದಂಡನಾಯಕರಾದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಸೇರಿದಂತೆ ದೇಶದ ಗಣ್ಯಾತಿಗಣ್ಯರು ಅಂತಿಮ ವಿಧಿವಿಧಾನದಲ್ಲಿ ಭಾಗಿಯಾದ್ರು. ಅಂತ್ಯಸಂಸ್ಕಾರದಲ್ಲಿ ಸಾರ್ಕ್​ ರಾಷ್ಟ್ರಗಳ ಮುಖ್ಯಸ್ಥರು ಭಾಗಿಯಾಗಿ ಪುಷ್ಪನಮನ ಸಲ್ಲಿಸಿದ್ರು. ಕೊನೆಯಲ್ಲಿ ಸೇನಾಪಡೆಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅಂತಿಮ ಗೌರವ ಸಮರ್ಪಣೆ ಸಲ್ಲಿಸಿದ್ರು.

Leave a Reply