ಡಿಜಿಟಲ್ ಕನ್ನಡ ಟೀಮ್:
ಕೊಡಗು, ಉಡುಪಿ, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಇನ್ನು ನೆರೆಯ ಕೇರಳ ರಾಜ್ಯದ ಪ್ರವಾಹ ಹಾಗೇ ಮುಂದುವರಿದಿದೆ.
ಪರಿಸ್ಥಿತಿ ನಿಭಾಯಿಸಲು ಸರ್ಕಾರಗಳು ಹರಸಾಹಸ ಪಡುತ್ತಿದ್ದು, ಎನ್ ಡಿಆರ್ ಎಫ್ ಪಡೆ ರಕ್ಷಣಾ ಕಾರ್ಯ ಮುಂದುವರಿಸಿದೆ. ಕರ್ನಾಟಕ ಮತ್ತು ಕೇರಳದಲ್ಲಿನ ಪ್ರವಾಹಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು ಹೀಗಿವೆ…
ಕರ್ನಾಟಕ…
- ಮಡಿಕೇರಿ ವರುಣನ ಅಬ್ಬರ ಮುಂದುವರೆದಿದೆ.
- ತಂತಿತಾಲ, ಹಟ್ಟಿಹೊಳೆ, ಎಮ್ಮೆತಾಳ, ಮೇಘತಾಳ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 80 ಜನರನ್ನ ರಕ್ಷಣೆ ಮಾಡಲಾಗಿದೆ.
- ಮಡಿಕೇರಿಯ ಕಾಟಿಕೇರಿಯಲ್ಲಿ ಸಿಲುಕಿದ್ದವರ ಪೈಕಿ 200 ಜನರನ್ನ ರಕ್ಷಿಸಲಾಗಿದೆ.
- ಕಾಂಡನಕೊಲ್ಲಿಯಲ್ಲಿ ಸಿಲುಕಿರುವ 200 ಮಂದಿಯ ರಕ್ಷಣೆಗಾಗಿ ಎನ್ಡಿಆರ್ಎಫ್ ಸೇರಿದಂತೆ ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ.
- ಮುಕ್ಕೊಡ್ಲುವಿನಲ್ಲಿ 30ಕ್ಕೂ ಹೆಚ್ಚು ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ.
- ಕೊಡಗಿನಲ್ಲಿ ಪ್ರವಾಹ ಮಳೆ ಹಿನ್ನೆಲೆ ಮುಂಜಾನೆ 7 ಗಂಟೆಯಿಂದಲೇ NDRF, SDRF ಸಿಬ್ಬಂದಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
- ಮಂಗಳೂರಿನಿಂದ ರಾತ್ರಿಯೇ ನೌಕಾಪಡೆ ಕೊಡಗಿಗೆ ಬಂದಿದೆ. ಹೆಲಿಕ್ಯಾಪ್ಟರ್ ಮೂಲಕ ಸಿಲಿಕಿರುವವರನ್ನು ರಕ್ಷಿಸಲು ಸರ್ಕಾರ ಮುಂದಾಗಿದೆ.
- ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು ಕೊಪ್ಪ ತಾಲೂಕಿನ ಹೇರೂರು, ಮೇಗೂರು, ಅಂಬಳೆ ಗ್ರಾಮದಲ್ಲಿ 3 ಮನೆಗಳು ಕುಸಿದು ಬಿದ್ದಿವೆ.
- ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ತಗ್ಗಿದ್ರೂ ಪ್ರವಾಹ ಮಾತ್ರ ನಿಂತಿಲ್ಲ. ಭದ್ರಾ , ತುಂಗಾ , ಶರವಾತಿ ನದಿಗಳ ಹರಿವು ಜೋರಾಗಿದೆ. ಭದ್ರಾವತಿ ತಾಲೂಕಿನ ಕವಲಗುಂದಿ ಗ್ರಾಮದಲ್ಲಿ ಭದ್ರಾ ನದಿಯ ನೀರು ನೆರೆ ಸಂಕಷ್ಟ ತಂದೊಡ್ಡಿದೆ.
- ಪ್ರವಾಹ ಪರಿಸ್ಥಿತಿಯಲ್ಲಿರುವ ಜನರ ನೆರವಿಗಾಗಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಮುಂದಾಗಿವೆ.
- ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
- ಹವಾಮಾನ ಸುಧಾರಣೆಯಾಗದ ಕಾರಣ, ಸಿಎಂ ಅವರ ವೈಮಾನಿಕ ಸಮೀಕ್ಷೆ ರದ್ದು.
ಕೇರಳ…
- ನಿರಂತರ ಮಳೆಯಿಂದಾಗಿ ಕೇರಳದ 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮುಂದುವರಿಕೆ.
- ಈವರೆಗೂ 324 ಜನರು ಬಲಿಯಾಗಿದ್ದು, ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ.
- ಸೇನಾಪಡೆಯ 11 ಹೆಲಿಕಾಪ್ಟರ್ಗಳು ಹಾಗೂ ಸೇನಾಪಡೆಯ ಮೋಟರ್ ಬೋಟ್ಗಳಿಂದ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ.
- ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ.
- ಕೇರಳ ಸಿಎಂ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಕೆ.ಜೆ.ಆಲ್ಫೋನ್ಸ್ ಹಾಗೂ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿದ ಮೋದಿ.
- ಕೇರಳಕ್ಕೆ ಮಧ್ಯಂತರ ಪರಿಹಾರವಾಗಿ ₹ 500 ಕೋಟಿ ಪರಿಹಾರ ನಿಧಿ ಘೋಷಣೆ ಮಾಡಿದ ಪ್ರಧಾನಿ ಮೋದಿ.