ಡಿಜಿಟಲ್ ಕನ್ನಡ ಟೀಮ್:
ನೀರ್ದೋಸೆ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ಸೆಳೆದಿದ್ದ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ ಪ್ರಕಾಶ್ ಜೋಡಿ ಈಗ ಮತ್ತೆ ಒಂದಾಗಿದ್ದು, ತೋತಾಪುರಿ ತಿನ್ನಿಸಲು ಸಿದ್ಧತೆ ನಡೆಸಿದ್ದಾರೆ.
ಹೌದು, ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಮುಂದಿನ ಚಿತ್ರದ ಹೆಸರು, ”ತೋತಾಪುರಿ’ ತೋಟ್ ಕೀಳ್ಬೇಕಷ್ಟೇ’. ತಮ್ಮ ಮುಂದಿನ ಚಿತ್ರದ ಬಗ್ಗೆ ಸ್ವತಃ ಜಗ್ಗೇಶ್ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ತಿಳಿಸಿದ್ದು, ಚಿತ್ರದಲ್ಲಿನ ತಮ್ಮ ಗೆಟಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಜಗ್ಗೇಶ್ ಅವರ ತೋತಾಪುರಿ ಲುಕ್ ಹೀಗಿದೆ…