ಡಾ.ಬಿ.ರಮೇಶ್
‘ಪಿಸಿಓಎಸ್‘ ಅಂದರೆ ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೊಮ್. ಸಂತಾನೋತ್ಪತ್ತಿ ಸಾಮರ್ಥ್ಯ ಹೊಂದಿರುವ ಮಹಿಳೆಯರಲ್ಲಿ ಕಂಡುಬರುವ ಒಂದು ಬಗೆಯ ಸಮಸ್ಯೆ. ಈ ಹಿಂದೆ 30ರ ಆಸುಪಾಸಿನ ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ 20ರ ಆಸುಪಾಸಿನ ಯುವತಿಯರಲ್ಲೂ ಇದು ಗೋಚರಿಸುತ್ತಿದೆ.
ಏನಿದು ಪಿಸಿಓಎಸ್?
ಮಹಿಳೆಯ ದೇಹದಲ್ಲಿ ಸ್ರವಿಸುವ ಹಾರ್ಮೊನಿನ ಏರುಪೇರಿನಿಂದಾಗಿ ಈ ಸಮಸ್ಯೆ ಉದ್ಭವಿಸುತ್ತದೆ. ಇದು ಋತುಚಕ್ರದ ಮೇಲೆ, ಹಾರ್ಮೊನಿನ ಉತ್ಪಾದನೆಯ ಮೇಲೆ, ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ. ಬಂಜೆತನಕ್ಕೆ ಪಿ.ಸಿ.ಒ.ಎಸ್ ಸಮಸ್ಯೆ ಈಗ ಪ್ರಮುಖ ಕಾರಣವಾಗಿದೆ.
ಏನೇನು ಲಕ್ಷಣಗಳು?
- ಪುರುಷ ಹಾರ್ಮೊನು ಆಂಡ್ರೊಜೆನ್ ಗಳ ಮಟ್ಟ ಅಧಿಕಗೊಳ್ಳುತ್ತದೆ.
- ಋತುಸ್ರಾವ ಆಗುವುದೇ ಇಲ್ಲ ಅಥವಾ ಅದು ಅನಿಯಮಿತವಾಗಿರುತ್ತದೆ.
- ಅಂಡಾಶಯಗಳಲ್ಲಿ ಅನೇಕ ಸಿಸ್ಟ್ ಗಳು ಅಂದರೆ ನೀರುಗುಳ್ಳೆಗಳಂಥವು ಇರುತ್ತವೆ.
- ಋತುಸ್ರಾವದ ಅವಧಿಯಲ್ಲಿ ಕೆಲವರಿಗೆ ಅತಿಯಾಗಿ ರಕ್ತಸ್ರಾವ ಉಂಟಾಗುತ್ತದೆ. ಇದರಿಂದಾಗಿ ಗರ್ಭಧಾರಣೆಗೆ ಕಷ್ಟವಾಗುತ್ತದೆ.
- ಕೆಲವರಿಗೆ ದೇಹದ ಮೇಲೆ ಅದರಲ್ಲೂ ಮುಖದ ಮೇಲೆ ಅತಿಯಾಗಿ ಕೂದಲು ಬೆಳೆಯುತ್ತವೆ.
- ತಲೆಯ ಕೂದಲು ಉದುರುತ್ತವೆ.
- ಕೆಲವರಿಗೆ ದೇಹದ ತೂಕ ಹೆಚ್ಚಳವಾಗುತ್ತದೆ.
- ಚರ್ಮ ಜಿಡ್ಡುಯುಕ್ತವಾಗುತ್ತದೆ.
- ಮೊಡವೆಗಳು ಕಾಣಿಸಿಕೊಳ್ಳಬಹುದು.
- ಕೆಲವರಲ್ಲಿ ಖಿನ್ನತೆ ಆವರಿಸಿಕೊಳ್ಳುತ್ತದೆ.
ಪಿಸಿಓಎಸ್ ಸಮಸ್ಯೆ ಇದ್ದಾಗ ಏನು ಮಾಡಬೇಕು?
- ಪಿಸಿಓಎಸ್ ಸಮಸ್ಯೆಯನ್ನು ಕೇವಲ ಗರ್ಭಧಾರಣೆಯ ಸಮಸ್ಯೆ ಎಂದು ಭಾವಿಸದೆ ಅದನ್ನೇ ಒಂದು ಸಮಗ್ರ ಸಮಸ್ಯೆಯೆಂಬಂತೆ ಭಾವಿಸಿ ಚಿಕಿತ್ಸೆ ನೀಡುವ ಕಡೆ ಗಮನಹರಿಸಬೇಕು.
- ಮಧುಮೇಹ ಇದ್ದರೆ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರ ಜತೆಗೆ ಸಮತೋಲಿತ ಆಹಾರ ಪದ್ದತಿ ಅನುಸರಿಸಿ ದೈನಂದಿನ ವ್ಯಾಯಾಮ ಮಾಡಬೇಕು.
- ಧೂಮಪಾನದ ಚಟದಿಂದ ದೂರಸರಿಯುವುದು ಈ ತೊಂದರೆಯ ಪ್ರಮಾಣವನ್ನು ಸಾಕಷ್ಟು ತಗ್ಗಿಸಲು ನೆರವಾಗುತ್ತದೆ.
ಯಾವ ಆಹಾರ ಸೇವಿಸಬೇಕು?
- ವೈದ್ಯರು ಸೂಚಿಸಿದ ಪ್ರಮಾಣದಲ್ಲಿಯೇ ಆಹಾರ ಸೇವನೆ ಮಾಡಬೇಕು.
- ಆಹಾರದ ಬಗ್ಗೆ ನಿಯಮಿತವಾಗಿ ಯೋಜನೆ ರೂಪಿಸಿಕೊಳ್ಳಬೇಕು.
- ಚಹ/ಕಾಫಿ ಆಲ್ಕೋಹಾಲ್ ಸೇವನೆ ಕಡಿಮೆ ಮಾಡಬೇಕು.
- ಒಂದೇ ಬಾರಿಗೆ ಹೆಚ್ಚು ಆಹಾರ ಸೇವಿಸದೆ, ಆಗಾಗ ಒಂದಿಷ್ಟು ಆಹಾರ ಸೇವಿಸುವುದು ಒಳ್ಳೆಯದು. ದಿನಕ್ಕೆ 5 – 6 ಸಲ ಮಿತ ಆಹಾರ ಸೇವನೆ ತಪ್ಪಲ್ಲ.
- ಪ್ರೋಟೀನ್ ಒಳಗೊಂಡಿರುವ ಕಾಳುಗಳು ನಿಮ್ಮ ಆಹಾರದ ಭಾಗವಾಗಲಿ.
- ಒಳ್ಳೆಯ ಕೊಬ್ಬು ಇರುವ ಆಹಾರ ಪದಾರ್ಥಗಳ ಸೇವನೆ ಹಿತಕರ ಪರಿಣಾಮ ಬೀರುತ್ತದೆ.
- ಸಕ್ಕರೆ ಪದಾರ್ಥಗಳನ್ನು ಅಂದರೆ ಕೇಕ್, ಬಿಸ್ಕತ್ತು, ಚಾಕ್ಲೇಟ್ ಗಳನ್ನು ಆದಷ್ಟು ದೂರ ಇಡಿ.
- ಸೇಬು, ಸೀಬೆ, ಮೂಸಂಬಿ, ಕಿತ್ತಳೆ, ದ್ರಾಕ್ಷಿ, ಒಣಹಣ್ಣುಗಳನ್ನುಸಾಧ್ಯವಾದಾಗೆಲ್ಲ ಸೇವಿಸಿ.
- ರಾತ್ರಿ 8ರ ಬಳಿಕ ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ. ವೈದ್ಯರ ಸೂಚನೆಗಳನ್ನು ಚಾಚೂತಪ್ಪದೇ ಪಾಲಿಸುವವರು ಆರೋಗ್ಯಕರ ಮಗುವನ್ನು ಪಡೆದು ನೆಮ್ಮದಿಯ ಜೀವನ ನಡೆಸಬಹುದು.
- ಜೀವನ ಶೈಲಿಯಲ್ಲಿ ಬದಲಾವಣೆ ಇರಲಿ.
- ಪ್ರತಿದಿನ 30 ನಿಮಿಷಗಳ ಕಾಲವೇಗದ ನಡಿಗೆ ಅನುಸರಿಸಿ. ಸೈಕ್ಲಿಂಗ್, ಈಜು ಕೂಡ ಒಳ್ಳೆಯ ವ್ಯಾಯಾಮಗಳಾಗಿವೆ.
- ತೂಕ ಕಡಿಮೆ ಮಾಡಿಕೊಳ್ಳುವ ಗುರಿ ನಿರ್ಧರಿಸಿ. ತಿಂಗಳಿಗೆ 1.5 ರಿಂದ 2 ಕಿಲೋ ತೂಕ ಕಡಿಮೆಯಾದರೆ ಅದು ಒಳ್ಳೆಯ ಬೆಳವಣಿಗೆ.
- ದಿನಕ್ಕೆ 6-7 ಗಂಟೆಯ ಸಮೃದ್ಧ ನಿದ್ರೆ ಅವಶ್ಯಕ. ಒತ್ತಡ ನಿವಾರಿಸಿಕೊಳ್ಳಲು ನಿಮಗೆ ನೀವೇ ಯೋಜನೆ ಹಾಕಿಕೊಳ್ಳಿ ಇಲ್ಲವೇ ಕುಟುಂಬದವರ, ಕೌನ್ಸಿಲರ್ ಗಳ ಸಹಾಯ ಪಡೆದುಕೊಳ್ಳಿ.
- ಯಾವಾಗಲಾದರೊಮ್ಮೆ ‘ಸ್ಪೈಸಿಫುಡ್‘ ಸೇವಿಸಬಹುದು. ಆದರೆ ಅದೇ ನಿಯಮಿತವಾಗಬಾರದು.
ಪಿಸಿಓಎಸ್ ನಿವಾರಣೆ ಆಗಲಾರದು. ಆದರೆ ಉತ್ತಮ ಆರೋಗ್ಯಕರ ವಿಧಾನಗಳ ಮೂಲಕ ಅದರ ಲಕ್ಷಣಗಳನ್ನು ಖಂಡಿತ ತಗ್ಗಿಸಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಡಾ.ಬಿ.ರಮೇಶ್
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ,
ಬೆಂಗಳೂರು-98.
ದೂರವಾಣಿ ಸಂಖ್ಯೆ: 9663311128 / 080-28606789
ಶಾಖೆ: ರಾಜಾಜಿನಗರ 9900031842/ 080-23151873