ಏಷ್ಯನ್ ಗೇಮ್ಸ್ ನಲ್ಲಿ ಮುಂದುವರಿದ ಭಾರತದ ಚಿನ್ನದ ದಂಗಲ್!

ಡಿಜಿಟಲ್ ಕನ್ನಡ ಟೀಮ್:

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಚಿನ್ನದ ಬೇಟೆ ಮುಂದುವರಿಸಿದೆ.

ಭಾನುವಾರ ಪುರುಷರ 65 ಕೆ.ಜಿ ಕುಸ್ತಿ ವಿಭಾಗದಲ್ಲಿ ಬಜರಂಗ್ ಪುನೀಯಾ ಚಿನ್ನ ಗೆದ್ದ ಬೆನ್ನಲ್ಲೇ ಇಂದು ಮಹಿಳೆಯರ 50 ಕೆ.ಜಿ ಕುಸ್ತಿಯಲ್ಲಿ ವಿನೇಶ್ ಫೋಗತ್ ಸ್ವರ್ಣ ಗೆದ್ದಿದ್ದಾರೆ.

ಅಂತಿಮ ಸುತ್ತಿನಲ್ಲಿ ಜಪಾನ್‍ನ ಯುಕಿ ಐರೀ ವಿರುದ್ಧ 6-2 ಅಂಕಗಳ ಮುನ್ನಡೆ ಸಾಧಿಸಿ ವಿನೇಶ್ ಭಾರತಕ್ಕೆ ಚಿನ್ನ ತಂದುಕೊಟ್ಟರು.

ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತ 2 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಬಂದಿದೆ. ಇದಕ್ಕೂ ಮುನ್ನ ಸೋಮವಾರ 10 ಮೀ. ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ದೀಪಕ್ ಕುಮಾರ್ ಹಾಗೂ ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಲಕ್ಷ್ಯ ಶೆರೋನ್ ಬೆಳ್ಳಿ ಪದಕ ಪಡೆದಿದ್ದಾರೆ. ಇನ್ನು ಭಾನುವಾರ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಅಪೂರ್ವಿ ಚಾಂಡೆಲಾ ಹಾಗೂ ರವಿಕುಮಾರ್ ಕಂಚಿನ ಪದಕ ಪಡೆದಿದ್ದರು.

Leave a Reply