16 ವರ್ಷದ ರೈತನ ಮಗ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ!

ಡಿಜಿಟಲ್ ಕನ್ನಡ ಟೀಮ್:

16 ವರ್ಷದ ರೈತನ ಮಗ ಸೌರಬ್ ಚೌಧರಿ ಇಂದು ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾನೆ. ಇದೇ ಮೊದಲ ಬಾರಿಗೆ ಈತ ಹಿರಿಯರ ಜತೆ ಸೆಣಸಿದ್ದು, ತನ್ನ ಪದಾರ್ಪಣೆ ಸ್ಪರ್ಧೆಯಲ್ಲೇ ಈ ಸಾಧನೆ ಮಾಡಿರೋದು ವಿಶೇಷ.

ಮೂರು ವರ್ಷಗಳ ಹಿಂದೆ ಅಂದರೆ 2015ರಲ್ಲಿ ಶೂಟಿಂಗ್ ಅಭ್ಯಾಸ ಮಾಡಲು ಆರಂಭಿಸಿದ ಸೌರಬ್, ಇಂದು ನಡೆದ ಸ್ಪರ್ಧೆಯಲ್ಲಿ ಕ್ರೀಡಾಕೂಟ ದಾಖಲೆಯ 240.7 ಅಂಕಗಳನ್ನು ಸಂಪಾದಿಸಿ ಚಿನ್ನ ಗೆದ್ದರು.

ಜಪಾನಿನ 42 ವರ್ಷದ ಮಾಜಿ ವಿಶ್ವ ಹಾಗೂ ಒಲಿಂಪಿಕ್ ಚಾಂಪಿಯನ್ ಮತ್ಸುಡಾ ಅವರನ್ನು ಹಿಂದಿಕ್ಕಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದಾನೆ. ಮೀರತ್ ನ ಕಳಿನಾ ಎಂಬ ಗ್ರಾಮದ ರೈತನ ಮಗ, ಕೆಲವು ತಿಂಗಳ ಹಿಂದೆಯಷ್ಟೇ ವಿಶ್ವ ಕಿರಿಯರ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ವಿಶ್ವ ದಾಖಲೆ ಬರೆದಿದ್ದ. ಹೀಗಾಗಿ ಈತನ ಮೇಲೆ ಹಿರಿಯರ ಮಟ್ಟದ ಸ್ಪರ್ಧೆಯಲ್ಲೂ ನಿರೀಕ್ಷೆ ಹೆಚ್ಚಾಗಿತ್ತು.

ಈ ಸ್ಪರ್ಧೆಯಲ್ಲಿ ಮತ್ಸುಡಾ ಬೆಳ್ಳಿ ಪದಕ ಪಡೆದರೆ, ಭಾರತದ ಮತ್ತೊಬ್ಬ ಶೂಟರ್ ಅಭಿಷೇಕ್ ವರ್ಮಾ ಕೂಡ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿ ಖಾನ್

Leave a Reply