ರಾಜಸ್ಥಾನದ ಬ್ರಹ್ಮ ದೇವಾಲಯ- ಅಜ್ಮೆರ್ ದರ್ಗಾಕ್ಕೆ ಸಿಎಂ ಕುಮಾರಸ್ವಾಮಿ, ದೇವೇಗೌಡರ ಭೇಟಿ!

ಡಿಜಿಟಲ್ ಕನ್ನಡ ಟೀಮ್:

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ದೇವಾಲಯಗಳಿಗೆ ಹೆಚ್ಚು ಭೇಟಿ ನೀಡುತ್ತಿದ್ದು, ಇಂದು ರಾಜಸ್ಥಾನಕ್ಕೆ ಭೇಟಿ ನೀಡಿ ಪುಷ್ಕರ್ ನಲ್ಲಿರುವ ಬ್ರಹ್ಮ ದೇವಾಲಯ ಹಾಗೂ ಅಜ್ಮೆರ್ ನಲ್ಲಿರುವ ದರ್ಗಾದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ್ದಾರೆ.

ಗುರುವಾರ ಬೆಳಗ್ಗೆ ವಿಶೇಷ ವಿಮಾನದ ಮೂಲಕ ಕುಮಾರಸ್ವಾಮಿ ಅವರ ಕುಟುಂಬ ಸೇರಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಕುಟುಂಬದ ಸದಸ್ಯರೂ ಅಜ್ಮೀರ್‍ಗೆ ತೆರಳಿದ್ದಾರೆ.

ಗೌಡರ ಪರಿವಾರ ರಾಜಸ್ಥಾನದ ಪುಷ್ಕರ್‍ ಪ್ರದೇಶದಲ್ಲಿರುವ ಬ್ರಹ್ಮ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಅಜ್ಮೀರ್ ದರ್ಗಾಗೆ ಭೇಟಿ ಚಾದರ ಅರ್ಪಿಸಿದ್ದಾರೆ.

ಕಳೆದ ತಿಂಗಳು ಹಾಸನ ಜಿಲ್ಲೆಯ ಹೊಳೆನರಸೀಪುರದ ಹರದನಹಳ್ಳಿಯ ಈಶ್ವರ ದೇಗುಲಕ್ಕೆ ಭೇಟಿ ಮಾಡಿದ್ದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ಆರಂಭದ 40 ದಿನಗಳಲ್ಲಿ 82 ದೇವಾಲಯಗಳಿಗೆ ಭೇಟಿ ನೀಡಿದ್ದರು. ಕೊಡಗು ಪ್ರವಾಹ ಹಿನ್ನೆಲೆಯಲ್ಲಿ ಹೆಚ್ಚು ಬ್ಯುಸಿ ಯಾಗಿದ್ದ ಸಿಎಂ ಈಗ ರಾಜಸ್ಥಾನಕ್ಕೆ ತೆರಳಿ ಅಲ್ಲಿನ ದೇವಾಲಯ ಹಾಗೂ ದರ್ಗಾಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Leave a Reply