ಮಲ್ಯ ಜೈಲು ಸೇರಿದ್ರು ರಾಜ ಮರ್ಯಾದೆ ತಪ್ಪೋಲ್ಲ!

ಡಿಜಿಟಲ್ ಕನ್ನಡ ಟೀಮ್:

ಸಾವಿರಾರು ಕೋಟಿ ಸಾಲ ಮರುಪಾವತಿ ಮಾಡದೇ ಉದ್ದೇಶಿತ ಸುಸ್ಥಿದಾರನಾಗಿ ಲಂಡನ್ನಲ್ಲಿ ತಲೆ ಮರೆಸಿಕೊಂಡಿರುವ ವಿಜಯ್ ಮಲ್ಯ, ಭಾರತಕ್ಕೆ ಹಸ್ತಾಂತರವಾಗಿ ಜೈಲು ಸೇರಿದ್ರು ಆತನಿಗೆ ರಾಜ ಮರ್ಯಾದೆ ಸಿಗೋದು ಖಚಿತವಾಗಿದೆ.

ಹೌದು, ಮಲ್ಯನನ್ನು ಭಾರತಕ್ಕೆ ಹಸ್ತಾಂತರ ಮಾಡಿದರೆ ಆತನನ್ನು ಇರಿಸಲಾಗುವ ಜೈಲಿನ ವಿಡಿಯೋ ಕಳುಹಿಸಿ ಎಂದು ಬ್ರಿಟನ್ ಹೈ ಕೋರ್ಟ್ ತಿಳಿಸಿತ್ತು. ಅದರಂತೆ ಸಿಬಿಐ ಈಗ ಮುಂಬೈನ ಅರ್ಥರ್ ರೋಡ್‌ನಲ್ಲಿರುವ ಬ್ಯಾರಕ್ ನಂಬರ್ 12 ನ ಸೆಲ್ ನ ವಿಡಿಯೋ ಚಿತ್ರೀಕರಣ ಮಾಡಿ ಕಳುಹಿಸಿದ್ದು, ಅದರಲ್ಲಿ ಮಲ್ಯ ಬಂಧನವಾದ ನಂತರ ಒಂದು ಟಿವಿ ಸೆಟ್, ವೈಯಕ್ತಿಕ ಶೌಚಾಲಯ, ಹಾಸಿಗೆ, ಬಾತ್ ರೂಂ ಏರಿಯಾ, ಸೂರ್ಯನ ಬೆಳಕು ಬೀಳುವಂತೆ ಒಂದು ವರಾಂಡಾ ವ್ಯವಸ್ಥೆ ಮಾಡಲಾಗಿದೆ.

ಇದು ಮಲ್ಯನಿಗಾಗಿ ಮಾಡಿರುವ ಹೈಟೆಕ್ ಜೈಲು. ಇವಿಷ್ಟೇ ಅಲ್ಲದೆ ಈ ಜೈಲಿಗೆ ಅಂತಾರಾಷ್ಟ್ರೀಯ ಮಟ್ಟದ ಭದ್ರತೆಯನ್ನು ನೀಡಲಾಗುತ್ತದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಒಟ್ಟಿನಲ್ಲಿ ಮಲ್ಯ ಜೈಲು ಸೇರಿದರೂ ಆತನಿಗೆ ರಾಜ ಆತಿಥ್ಯ ಮಾತ್ರ ತಪ್ಪೋಲ್ಲ ಎಂಬುದು ಸ್ಪಷ್ಟವಾಗಿದೆ.

Leave a Reply