ಲೋಕಸಭೆ ಸಮರಕ್ಕೆ ಕೈ ಪಡೆ ಸಿದ್ಧ! ಪ್ರಚಾರ ಸಮಿತಿಯಲ್ಲಿ ಸ್ಥಾನ ಪಡೆದ ರಮ್ಯಾ!

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆ ಸಮರ ಎದುರಿಸಲು ಕಾಂಗ್ರೆಸ್ ಮೂರು ಸಮಿತಿಗಳ ಪಡೆ ಕಟ್ಟಿದೆ. ಕೋರ್ ಕಮಿಟಿ, ಪ್ರಣಾಳಿಕೆ ಸಮಿತಿ ಹಾಗೂ ಪ್ರಚಾರ ಸಮಿತಿಯನ್ನು ರಚಿಸಿದ್ದು, ಇವುಗಳ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಮಣಿಸಿ ಮತ್ತೆ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ನ ಈ ಮೂರು ಪಡೆಗಳು ಶ್ರಮಿಸಲಿವೆ.

ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೋರ್ ಕಮಿಟಿಯಲ್ಲಿ ಆಯ್ಕೆ ಮಾಡಿದರೆ, ರಾಜೀವ್ ಗೌಡ ಅವರನ್ನು ಪ್ರಣಾಳಿಕೆ ಸಮಿತಿಯಲ್ಲಿ ಹಾಗೂ ಮಾಜಿ ಸಂಸದೆ ರಮ್ಯಾ ಅವರನ್ನು ಪ್ರಚಾರ ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ. ಪಿ.ಚಿದಂಬರಂ, ರಣದೀಪ ಸಿಂಗ್ ಸುರ್ಜೆವಾಲ, ಜೈರಾಮ್ ರಮೇಶ್ ಅವರನ್ನು ಎರಡು ಸಮಿತಿಗಳ ಜವಾಬ್ದಾರಿ ವಹಿಸಲಾಗಿದೆ.

ಕಾಂಗ್ರೆಸ್ ನೂತನ ಸಮಿತಿಗಳ ಪಟ್ಟಿ ಹೀಗಿದೆ…

ಕೋರ್‌ ಕಮಿಟಿ: ಪಿ.ಚಿದಂಬರಂ, ಗುಲಾಮ್ ನಬಿ ಅಜಾದ್‌, ಮಲ್ಲಿಕಾರ್ಜುನ್‌ ಖರ್ಗೆ, ಎ.ಕೆ.ಆಟೋನಿ, ಅಶೋಕ್‌ ಗೆಲ್ಹೋಟ್‌, ಅಹಮದ್‌ ಪಟೇಲ್‌, ಜೈರಾಮ್‌ ರಮೇಶ್‌ , ರಣದೀಪ ಸಿಂಗ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್.

ಪ್ರಣಾಳಿಕೆ ಸಮಿತಿ: ಪಿ.ಚಿದಂಬರಂ,ಸ್ಯಾಮ್ ಪಿತ್ರೋಡಾ, ರಾಜೀವ್‌ ಗೌಡ, ಮನ್‌ಪ್ರೀತ್‌ ಬಾದಲ್‌, ಸುಷ್ಮಿತಾ ದೇವ್‌, ಭೂಪೇಂದ್ರ ಸಿಂಗ್ ಹೂಡಾ, ಜೈರಾಮ್‌ ರಮೇಶ್‌, ಸಲ್ಮಾನ್‌ ಖುರ್ಷಿದ್‌, ಬಿಂದು ಕೃಷ್ಣನ್‌, ಸೆಲ್ಜಾ ಕುಮಾರಿ, ರಘುವೀರ್‌ ಮೀನಾ, ಬಾಲಚಂದ್ರ ಮುಂಗೇಕರ್‌, ಸಚಿನ್‌ ರಾವ್‌, ತಮ್ರದ್ವಾಜ್‌ ಸಾಹು, ಮೀನಾಕ್ಷಿ ನಟರಾಜನ್‌, ರಂಜಿನಿ ಪಾಟೀಲ್‌, ಮುಕುಲ್‌ ಸಂಗ್ರಾಮ್‌, ಶಶಿತರೂರ್‌, ಮತ್ತು ಲಲಿತೇಶ್‌ ತ್ರಿಪಾರ್ಟಿ.

ಪ್ರಚಾರ ಸಮಿತಿ: ಚರಣ್‌ ದಾಸ್‌ ಭಕ್ತ, ಪ್ರವೀಣ್‌ ಚಕ್ರವರ್ತಿ, ಮಿಲಿಂದ್‌ ಡೇರಾ, ಕೇತ್ಕರ್‌ ಕುಮಾರ್‌, ಪವನ್‌ ಖೇರಾ, ವಿ.ಡಿ.ಸತೀಸನ್‌, ಆನಂದ್‌ ಶರ್ಮಾ, ಜೈವೀರ್‌, ರಾಜೀವ್‌ ಶುಕ್ಲಾ, ದಿವ್ಯಾ ಸ್ಪಂದನ (ರಮ್ಯಾ), ಮನೀಶ್‌ ತಿವಾರಿ, ಪ್ರಮೋದ್‌ ತಿವಾರಿ ಮತ್ತು ರಣದೀಪ ಸಿಂಗ್ ಸುರ್ಜೆವಾಲಾ.

Leave a Reply