ಸಾಯೋದಕ್ಕೆ ಕುಡಿತಾರೆ ಭಾರತೀಯರು! ಅಧ್ಯಯನದ ವರದಿಯಲ್ಲಿದೆ ಆಘಾತಕಾರಿ ಅಂಶ!

ಡಿಜಿಟಲ್ ಕನ್ನಡ ಟೀಮ್:

ಸರ್ವ ರೋಗಕ್ಕೂ ಸಾರಾಯಿ ಮದ್ದು ಎಂಬ ಮಾತು ನಮ್ಮಲ್ಲಿದೆ. ನಿಜ, ಮಿತಿಯಾದ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಭಾರತೀಯರು ಆರೋಗ್ಯಕ್ಕಾಗಿ ಕುಡಿಯುವ ಬದಲು ಸಾಯುವುದಕ್ಕಾಗಿಯೇ ಕುಡಿಯುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ.

ವಾಷಿಂಗ್ಟನ್ ನ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವ್ಯಾಲ್ಯೂಯೇಷನ್ ಸಂಸ್ಥೆ ಕುಡಿತ ಹಾಗೂ ಅವುಗಳಿಂದ ಎದುರಾಗುವ ಗಂಭೀರ ಆರೋಗ್ಯ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಿದ್ದು, ಇದರಲ್ಲಿ ಕುಡಿತದಿಂದ ಸಾಯುವವರ ಪ್ರಮಾಣದಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಮಿತಿ ಇಲ್ಲದ ಕುಡಿತವೇ ಈ ಪರಿಸ್ಥಿತಿಗೆ ಕಾರಣ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಈ ಪಟ್ಟಿಯಲ್ಲಿ ಚೀನಾ ಅಗ್ರ ಸ್ಥಾನದಲ್ಲಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. ಇನ್ನು ರಷ್ಯಾ ಮೂರನೇ ಸ್ಥಾನದಲ್ಲಿದೆ. ಇನ್ನು ಕುಡಿತದಿಂದ ಸಾಯುವವರ ಪ್ರಮಾಣದಲ್ಲಿ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ. ಈ ಕುರಿತ ವಿವರ ಹೀಗಿದೆ…

ದೇಶ      ಪುರುಷರು     ಮಹಿಳೆಯರು
ಚೀನಾ    6,50,822     59,064
ಭಾರತ    2,89,859    41,716
ರಷ್ಯಾ     1,82,609    42,990

ಇನ್ನು ಅತಿಹೆಚ್ಚು ಮದ್ಯಪಾನಿಗಳ ದೇಶಗಳನ್ನು ನೋಡುವುದಾದರೆ, ಡೆನ್ಮಾರ್ಕ್​(ಶೇ.97), ನಾರ್ವೆ, ಅರ್ಜೆಂಟಿನಾ, ಜರ್ಮನಿ ಮತ್ತು ಪೋಲೆಂಡ್ (ಶೇ.94) ಅಗ್ರ ಐದು ಸ್ಥಾನಗಳಲ್ಲಿವೆ.

Leave a Reply