ಯಶ್ ಗಡ್ಡಕ್ಕೆ ಸಿಕ್ತು ಮುಕ್ತಿ, ಖುಷಿಪಟ್ಟ ರಾಧಿಕಾ ಪಂಡಿತ್!

ಡಿಜಿಟಲ್ ಕನ್ನಡ ಟೀಮ್:

ರಾಕಿಂಗ್ ಸ್ಟಾರ್ ಯಶ್ ತಮ್ಮ ಬಹು ನಿರೀಕ್ಷಿತ ಕೆಜಿಎಫ್ ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗೆ ಮುಕ್ತಾಯಗೊಳಿಸಿದ್ದು, ಈಗ ಚಿತ್ರಕ್ಕಾಗಿ ಬಿಟ್ಟಿದ್ದ ಉದ್ದನೆಯ ಗಡ್ಡಕ್ಕೆ ಮುಕ್ತಿ ನೀಡಿದ್ದಾರೆ.

ಶನಿವಾರ ತಮ್ಮ ಗಡ್ಡ ತೆಗೆದು ಮಾಸ್ ಲುಕ್ ನಿಂದ ಮತ್ತೆ ತಮ್ಮ ಕ್ಲಾಸಿ ಲುಕ್ ಪಡೆಯುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಪತ್ನಿ ರಾಧಿಕಾ ಪಂಡಿತ್ ಸಖತ್ ಖುಷಿ ಪಟ್ಟಿದ್ದಾರೆ.

ಯಶ್ ತಮ್ಮ ಮುಂದಿನ ಚಿತ್ರ ಕಿರಾತಕ2 ಗಾಗಿ ಲುಕ್ ಬಡಲಾಯಿಸಿದ್ದು, ಈ ಚಿತ್ರ ತಂಡಕ್ಕೆ ರಾಧಿಕಾ ಧನ್ಯವಾದ ತಿಳಿಸಿದ್ದಾರೆ. ಅನೇಕ ಸಾರ್ವಜನಿಕ ವೇದಿಕೆಗಳಲ್ಲೇ ಯಶ್ ಗಡ್ಡದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ರಾಧಿಕಾ, ಈಗ ಪತಿಯ ಹೊಸ ಲುಕ್ ನಿಂದ ಸಂತೋಷವಾಗಿದ್ದಾರೆ.

Leave a Reply