ನೀರಜ್ ಚೋಪ್ರಾರಿಂದ ಚಿನ್ನದ ಎಸೆತ! ಒಂದೇ ವರ್ಷ ಮೂರು ಸ್ವರ್ಣ ಗೆದ್ದದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಭಾರತದ ಯುವ ಜಾವ್ಲಿನ್ ಎಸೆತಗಾರ ನೀರಜ್ ಚೋಪ್ರಾ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಸೋಮವಾರ ನಡೆದ ಅಂತಿಮ ಸುತ್ತಿನಲ್ಲಿ 88.06 ಮೀ. ಎಸೆದ ನೀರಜ್ ಚಿನ್ನ ಬಾಚಿಕೊಂಡರು. ಕಳೆದ ವರ್ಷ ನಡೆದ ವಿಶ್ವ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ವಿಶ್ವ ದಾಖಲೆ ಬರೆದಿದ್ದ ನೀರಜ್, ಕೆಲ ತಿಂಗಳ ಹಿಂದೆ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು, ಈಗ ಏಷ್ಯನ್ ಗೇಮ್ಸ್ ನಲ್ಲೂ ಚಿನ್ನ ಗೆದ್ದು ಕಳೆದ ಒಂದು ವರ್ಷದ ಅವಧಿಯಲ್ಲಿ ಮೂರು ಸ್ವರ್ಣದ ಪದಕ ಗೆದ್ದು ಅಭೂತಪೂರ್ವ ಯಶಸ್ಸು ಸಾಧಿಸಿದ್ದಾರೆ.

ಇನ್ನು ಸೋಮವಾರ ಭಾರತಕ್ಕೆ ಒಟ್ಟು 5 ಪದಕ ಬಂದಿದ್ದು, ಅದರಲ್ಲಿ 1 ಚಿನ್ನ, ಮೂರು ಬೆಳ್ಳಿ ಹಾಗೂ 1 ಕಂಚು ಸಿಕ್ಕಿದೆ. ಮಹಿಳೆಯರ ಲಾಂಗ್ ಜಪ್ ನಲ್ಲಿ ನೀನಾ ವಾಲ್ಮೀಕಿ 6.51 ಮೀ. ಜಿಗಿದು ಬೆಳ್ಳಿ ಪದಕ ಪಡೆದರೆ, ಪುರುಷರ 400ಮೀ. ಹರ್ಡಲ್ಸ್ ನಲ್ಲಿ ಧರುನ್ ಅಯ್ಯಸ್ವಾಮಿ ಹಾಗೂ ಮಹಿಳೆಯರ 3000 ಸ್ಟೀಪಲ್ ಚೇಸ್ ನಲ್ಲಿ ಸುಧಾ ಸಿಂಗ್ ಬೆಳ್ಳಿ ಪದಕ ಪಡೆದಿದ್ದಾರೆ.

ಇನ್ನು ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕಂಚಿಗೆ ತೃಪ್ತಿ ಪಟ್ಟರು. ಇನ್ನು ಇದೇ ವಿಭಾಗದಲ್ಲಿ ಮತ್ತೋರ್ವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅಂತಿಮ ಸುತ್ತಿಗೆ ಪ್ರವೇಶಿಸಿದ್ದು, ಮಂಗಳವಾರ ಫೈನಲ್ ಪಂದ್ಯ ಆಡಲಿದ್ದಾರೆ.

Leave a Reply