ಕ್ರಿಕೆಟ್ ನ ‘ಡಾನ್’ ಬ್ರಾಡ್ಮನ್ ಗೆ ಗೂಗಲ್ ಡೂಡಲ್ ಗೌರವ! ಇವರ ಬಗ್ಗೆ ನಿಮಗೆಷ್ಟು ಗೊತ್ತು?

ಡಿಜಿಟಲ್ ಕನ್ನಡ ಟೀಮ್:

ಜಾಗತಿಕ ಕ್ರಿಕೆಟ್ ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮನ್ ಎಂದೇ ಖ್ಯಾತಿಗಳಿಸಿರುವ ಸರ್ ಡೊನಾಲ್ಡ್ ಜಾರ್ಜ್ ಬ್ರಾಡ್ಮನ್ (ಡಾನ್ ಬ್ರಾಡ್ಮನ್) ಅವರಿಗೆ ಇಂದು 110ನೇ ಜಯಂತಿ. ಅವರ ಹುಟ್ಟುಹಬ್ಬದ ಪ್ರಯುಕ್ತ ಗೂಗಲ್ ತನ್ನ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಈ ಸಂದರ್ಭದಲ್ಲಿ ಕ್ರಿಕೆಟ್ ಲೋಕದ ಡಾನ್ ಬಗ್ಗೆ ನೀವು ತಿಳಿಯಬೇಕಿರುವ ಪ್ರಮುಖ ಅಂಶಗಳು…

  • ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರರಾದ ಇವರು ಹುಟ್ಟಿದ್ದು ಆಗಸ್ಟ್ 27, 1908ರಂದು. ಟೆಸ್ಟ್ ಕ್ರಿಕೆಟ್ ನಲ್ಲಿ ಇವರ ಸರಾಸರಿ 99.94. ಈವರೆಗೂ ಯಾರು ಕೂಡ ಇವರ ಈ ದಾಖಲೆ ಮುರಿಯಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಇವರನ್ನು ಡಾನ್ ಎಂದು ಕರೆಯುತ್ತಾರೆ.
  • ಆರಂಭಿಕ ದಿನಗಳಲ್ಲಿ ವಿಕೆಟ್ ಹಾಗೂ ಗಾಲ್ಫ್ ಬಾಲ್ ಮೂಲಕ ಕ್ರಿಕೆಟ್ ಅನ್ನು ಅಭ್ಯಾಸ ಮಾಡಿದ ಬ್ರಾಡ್ಮನ್, ಕೇವಲ 2 ವರ್ಷಗಳ ಅವಧಿಯಲ್ಲಿ ಗಲ್ಲಿ ಕ್ರಿಕೆಟ್ ನಿಂದ ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಆಯ್ಕೆಯಾದರು.
  • 1920-21ನೇ ಸಾಲಿನ ಪ್ರಥಮ ದರ್ಜೆ ಪಂದ್ಯದಲ್ಲಿ ಬ್ರಾಡ್ಮನ್ ಅವರ ಸಂಬಂಧಿ ಜಾರ್ಜ್ ವಾಟ್ಮನ್ ಅವರು ಬೌರಲ್ ತಂಡದ ನಾಯಕರಾಗಿದ್ದಾಗ ಪಂದ್ಯದಲ್ಲಿ ಸ್ಕೋರರ್ ಆಗಿದ್ದರು. ಆ ಪಂದ್ಯದಲ್ಲಿ ಒಬ್ಬ ಆಟಗಾರನ ಕೊರತೆಯಿಂದ ಬ್ರಾಡ್ಮನ್ ಗೆ ಆಡಲು ಅವಕಾಶ ಸಿಕ್ಕಿತು. ಆ ಪಂದ್ಯದಲ್ಲಿ ಬ್ರಾಡ್ಮನ್ 37 ಹಾಗೂ 29 ರನ್ ಗಳಿಸಿ ಅಜೇಯರಾಗುಳಿದರು.
  • ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಐದನೇ ಆಶಸ್ ಸರಣಿಯ ಪಂದ್ಯವನ್ನು ತಂದೆಯ ಜತೆ ವೀಕ್ಷಿಸಿದ ಬ್ರಾಡ್ಮನ್ ಒಂದು ನಿರ್ಧಾರಕ್ಕೆ ಬಂದರು. ‘ನಾನು ಈ ಮೈದಾನದಲ್ಲಿ ಆಡುವವರೆಗೂ ನನ್ನ ಆಸೆ ತೀರುವುದಿಲ್ಲ’ ಎಂದು ತಂದೆಯ ಬಳಿ ಹೇಳಿಕೊಂಡರು.
  • 1922ರಲ್ಲಿ ಶಾಲೆಗೆ ಗುಡ್ ಬೈ ಹೇಳಿ ಸ್ಥಳೀಯ ಎಸ್ಟೇಟ್ ನಲ್ಲಿ ಕೆಲಸಕ್ಕೆ ಸೇರಿದ ಬ್ರಾಡ್ಮನ್ ಕ್ರಿಕೆಟ್ ಅಭ್ಯಾಸ ಆರಂಭಿಸಿದರು. ನಂತರ 2 ವರ್ಷ ಟೆನ್ನಿಸ್ ಆಡಲು ಕ್ರಿಕೆಟ್ ನಿಲ್ಲಿಸಿದರು. 1925-26ರಿಂದ ಮತ್ತೆ ಕ್ರಿಕೆಟ್ ಆರಂಭಿಸಿದರು.
  • ಬೌರಲ್ ತಂಡಕ್ಕೆ ಆಯ್ಕೆಯಾದ ನಂತರ ಅನೇಕ ಅತ್ಯುತ್ತಮ ಇನ್ನಿಂಗ್ಸ್ ಆಡಿದ ಬ್ರಾಡ್ಮನ್ ದ್ವಿಶತಕ (234) ಹಾಗೂ ತ್ರಿಶತಕ (320*) ಬಾರಿಸಿ ಗಮನ ಸೆಳೆದರು. 1926ರಲ್ಲಿ ಆಸ್ಟ್ರೇಲಿಯಾ ಆಶಸ್ ಸರಣಿ ಸೋತಾಗ ತಂಡಕ್ಕೆ ಹೊಸ ಆಟಗಾರರ ಹುಡುಕಾಟ ಆರಂಭವಾಯಿತು. ಆಗ ಬೌರಲ್ ತಂಡದ ಅಭ್ಯಾಸವನ್ನು ನೋಡಿದ ಆಯ್ಕೆಗಾರರು ಬ್ರಾಡ್ಮನ್ ಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಿದರು.
  • ಹೀಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಮೇಲೆ ಬ್ರಾಡ್ಮನ್ ಬರೆದಿದ್ದು ಇತಿಹಾಸ. 52 ಟೆಸ್ಟ್ ಪಂದ್ಯಗಳನ್ನಾಡಿ 99.94ರ ಸರಾಸರಿಯಲ್ಲಿ 29 ಶತಕ, 13 ಅರ್ಧ ಶತಕ ಸೇರಿದಂತೆ 6,996 ರನ್ ಪೇರಿಸಿದರು. ಟೆಸ್ಟ್ ನಲ್ಲಿ 334 ಹಾಗೂ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 452* ರನ್ ದಾಖಲಿಸಿ ದಾಖಲೆ ಬರೆದರು.
  • ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು 12 ದ್ವಿಶತಕ ಬಾರಿಸಿದ್ದು ಇದುವರೆಗೂ ಬೇರೆ ಯಾವುದೇ ಆಟಗಾರ ಈ ದಾಖಲೆ ಮುರಿಯಲು ಸಾಧ್ಯವಾಗಿಲ್ಲ.

Leave a Reply