ರಕ್ಷಾ ಬಂಧನ ದಿನ 55 ಖ್ಯಾತ ಮಹಿಳೆಯರನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡಿದ ಮೋದಿ! ಯಾರು ಆ ಮಹಿಳೆಯರು?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಟ್ವಿಟ್ಟರ್ ಖಾತೆ @narendramodi ಇಂದ ರಕ್ಷಾ ಬಂಧನ ಹಬ್ಬದ ದಿನದಂದು 55 ಖ್ಯಾತ ಭಾರತೀಯ ಮಹಿಳಾ ಸಾಧಕಿಯರನ್ನು ಹಿಂಬಾಲಿಸಲು ಆರಂಭಿಸಿದ್ದಾರೆ.

ಮೋದಿ ಅವರನ್ನು ಟ್ವಿಟ್ಟರ್ ನಲ್ಲಿ ಒಟ್ಟು 4.37 ಕೋಟಿ ಟ್ವಿಟಿಗರು ಹಿಂಬಾಲಿಸುತ್ತಿದ್ದು, ಮೋದಿ ಮಾತ್ರ ಸುಮಾರು 2 ಸಾವಿರ ಜನರನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಅದರ ಪೈಕಿ ಭಾನುವಾರ 55 ಮಹಿಳೆಯರ ಖಾತೆ ಸೇರ್ಪಡೆಯಾಗಿದೆ.

ಕ್ರೀಡೆ, ಪತ್ರಿಕೋದ್ಯಮ, ಚಲನಚಿತ್ರ, ಉದ್ಯಮಿಗಳು ಸೇರಿದಂತೆ ವಿವಿಧ ರಂಗದಲ್ಲಿ ಸಾಧನೆ ಮಾಡಿದವರನ್ನು ಮೋದಿ ಫಾಲೋ ಮಾಡಲು ಆರಂಭಿಸಿದ್ದಾರೆ.

ಕ್ರೀಡೆಯಿಂದ ಮಹಿಳಾ ಬ್ಯಾಡ್ಮಿಂಟನ್ ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ಅಥ್ಲೆಟಿಕ್ಸ್ ಕೋಚ್ ಪಿ.ಟಿ ಉಷಾ, ಟೆನಿಸ್ ತಾರೆ ಸಾನಿಯಾ ಮಿರ್ಜಾ, ವೇಟ್ ಲಿಫ್ಟರ್ ಕರಣಂ ಮಲ್ಲೇಶ್ವರಿ, ಪತ್ರಿಕೋದ್ಯಮ ಕ್ಷೇತ್ರದಿಂದ ರೋಮನ ಇಸರ್ ಖಾನ್ ಸೇರಿದಂತೆ ಶ್ವೇತಾ ಸಿಂಗ್, ಪದ್ಮಜಾ ಜೋಶಿ, ಶೀಲಾ ಸಿಂಗ್, ಶಾಲಿನಿ ಸಿಂಗ್, ಮಾಜಿ ಮಿಸ್ ಇಂಡಿಯಾ ಹಾಗೂ ಮಕ್ಕಳ ಹಕ್ಕು ಹೋರಾಟಗಾರ್ತಿ ಸ್ವರೂಪ್ ಸೇರಿದಂತೆ ಭಾರತೀಯ ಜನತಾ ಪಕ್ಷದ ಮಹಿಳಾ ನಾಯಕಿಯರನ್ನು ಹಿಂಬಾಲಿಸಲು ಆರಂಭಿಸಿದ್ದಾರೆ.

Leave a Reply