ಜು ಯಿಂಗ್ ಗೆ ಸುಲಭ ತುತ್ತಾದ ಪಿ.ವಿ ಸಿಂಧು, ಬೆಳ್ಳಿಗೆ ತೃಪ್ತಿ

ಡಿಜಿಟಲ್ ಕನ್ನಡ ಟೀಮ್:

ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಮತ್ತೊಮ್ಮೆ ಪ್ರಶಸ್ತಿ ಸುತ್ತಿನಲ್ಲಿ ಎಡವಿದ್ದಾರೆ. ಏಷ್ಯನ್ ಗೇಮ್ಸ್ ನ ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ ಸುತ್ತಿನಲ್ಲಿ ಚೈನೀಸ್ ತೈಪೇನ ಜು ಯಿಂಗ್ ವಿರುದ್ಧ 0-2 ಗೇಮ್ ಗಳ ಅನಂತರದಲ್ಲಿ ಸೋಲನುಭವಿಸಿದ್ದಾರೆ. ಇದರೊಂದಿಗೆ ಈ ಕ್ರೀಡಾಕೂಟದಲ್ಲಿ ಬೆಳ್ಳಿ ಪಡೆದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಇತಿಹಾಸ ಬರೆದಿದ್ದಾರೆ.

ಮಂಗಳವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಿಂಧು ವಿರುದ್ಧ ಮತ್ತೊಮ್ಮೆ ಪ್ರಾಬಲ್ಯ ಮೆರೆದ ಯಿಂಗ್ 21-13, 21-16 ಅಂತರದಿಂದ ಗೆದ್ದಿದ್ದಾರೆ. ಇದರೊಂದಿಗೆ ಸಿಂಧು ವಿರುದ್ಧ ಆಡಿದ ಒಟ್ಟಾರೆ ಪಂದ್ಯಗಳ ಪೈಕಿ ಯಿಂಗ್ 10-3 ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಸಿಂಧು ಬೆಳ್ಳಿ ಪದಕ ಸೇರಿದಂತೆ ಭಾರತಕ್ಕೆ ಮಂಗಳವಾರ ಮಧ್ಯಾಹ್ನದವರೆಗೂ ಒಟ್ಟು 3 ಬೆಳ್ಳಿ ಪದಕ ಬಂದಿದೆ. ಉಳಿದ ಎರಡು ಪದಕಗಳು ಆರ್ಚರಿ ಟೀಮ್ ಕಾಂಪೌಂಡ್ ವಿಭಾಗದಲ್ಲಿ ಬಂದಿವೆ.

ಮಹಿಳೆಯ ಹಾಗೂ ಪುರುಷರ ವಿಭಾಗದಲ್ಲಿ ವಿಭಾಗದಲ್ಲಿ ಭಾರತ ತಂಡ ಕೊರಿಯಾ ರಿಪಬ್ಲಿಕ್ ವಿರುದ್ಧ ಪರಾಭವಗೊಂಡು ಸ್ವರ್ಣ ವಂಚಿತವಾದವು.

Leave a Reply