ಮೋದಿ ಹತ್ಯೆಗೆ ಸಂಚು: ಮಾವೋ ಸೈದ್ಧಾಂತಿಕ ಬರಹಗಾರ ವರವರ ರಾವ್ ಸೇರಿ ಐವರ ಬಂಧನ!

ಡಿಜಿಟಲ್ ಕನ್ನಡ ಟೀಮ್:

ಭೀಮಾ- ಕೊರೆಗಾಂವ್ ಗಲಭೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಎಡಪಂಥೀಯ ಚಿಂತಕರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ದೇಶದ ವಿವಿಧೆಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ ಪುಣೆ ಪೊಲೀಸರು, ಖ್ಯಾತ ಬರಹಗಾರ ವರವರ ರಾವ್, ವೇರ್ನಾನ್ ಗೋಂಜಾಲ್ವಿಸ್, ಅರುಣ್ ಪೆರೇರ, ಸುಧಾ ಭಾರಧ್ವಾಜ್ ಅವರನ್ನು ಬಂಧಿಸಿದ್ದಾರೆ. ಇನ್ನು ಮತ್ತೊಬ್ಬ ಹೋರಾಟಗಾರ ಗೌತಮ್ ನವಲಖಾ ಬಂಧನಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ.

Leave a Reply