ದೇವೇಗೌಡರ ಗುಣಗಾನ ಮಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಗುಣಗಾನ ಮಾಡಿದ್ದಾರೆ.

ಸುತ್ತೂರು ಮಠದ ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು…

‘ಯಾರೂ ಕೂಡ ತಾವು ಹುಟ್ಟಿದ ಭೂಮಿಯನ್ನು ಮರೆಯಬಾರದು. ತಾವು ಹುಟ್ಟಿ ಬೆಳೆದ ಸ್ಥಳವನ್ನು ಕೂಡ ಬಿಡಬಾರದು. ಈ ವಿಚಾರದಲ್ಲಿ ನಾವೆಲ್ಲರೂ ಮಾಜಿ ಪ್ರಧಾನಿ ದೇವೇಗೌಡ ಅವರನ್ನೇ ನೋಡಿ ಕಲಿಯಬೇಕು. ಹುಟ್ಟಿ ಬೆಳೆದ ಸ್ಥಳವನ್ನು ಮರೆಯಬಾರದು ಎಂಬುದಕ್ಕೆ ದೇವೇಗೌಡರೇ ಉದಾಹರಣೆ, ಅವರು ಪ್ರಧಾನಿಯಾಗಿ ದೆಹಲಿಗೆ ಬಂದರೂ ತಮ್ಮ ಊರು ಹಾಸನವನ್ನು ಬಿಡಲೇ ಇಲ್ಲ. ಪ್ರತಿಯೊಬ್ಬರಿಗೂ ಮಾತೃಭಾಷೆ ಕಣ್ಣಿದ್ದಂತೆ. ಇತರ ಭಾಷೆಗಳು ಕನ್ನಡಕವಿದ್ದಂತೆ. ಕನ್ನಡಕಕ್ಕಿಂತಲೂ ಕಣ್ಣು ಹೆಚ್ಚು ಮುಖ್ಯ. ಹಾಗಾಗಿಯೇ ಮಾತೃಭಾಷೆಯನ್ನು ಬಳಸಬೇಕು, ಉತ್ತೇಜಿಸಬೇಕು.

ಕನ್ನಡ ಸುಂದರ ಭಾಷೆ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮನೆಯಲ್ಲಿ ಮಾತೃಭಾಷೆ ಬಳಸಿ,  ಅನ್ಯಭಾಷೆ ಬಳಸಿದರೆ ತೊಂದರೆ ಇಲ್ಲ.ಮನೆ ಹೊರಗೆ ಬೇರೆ ಭಾಷೆ ಬಳಸಿದರೆ ಉತ್ತಮ.’

Leave a Reply