ಶಿವನಲ್ಲಿ ರಾಹುಲ್ ಗಾಂಧಿ ಹರಕೆ! ಇದೇ 31ರಂದು ಹರಕೆ ತೀರಿಸಲು ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್:

ಚುನಾವಣೆ ಸಂದರ್ಭದಲ್ಲಿ ಟೆಂಪಲ್ ರನ್ ಮೂಲಕ ತಾನು ಹಿಂದೂ ದೇವರ ಭಕ್ತ ಎಂಬ ಸಂದೇಶ ರವಾನಿಸುವ ಪ್ರಯತ್ನ ಮಾಡುವ ರಾಹುಲ್ ಗಾಂಧಿ, ಈಗ ಮತ್ತೊಂದು ಅಚ್ಚರಿ ವಿಷಯ ತಿಳಿಸಿದ್ದಾರೆ. ಅದೇನೆಂದರೆ ಅವರು ಶಿವನಲ್ಲಿ ಹರಕೆ ಮಾಡಿಕೊಂಡಿದ್ದರು ಎಂಬ ವಿಚಾರ!

ಹೌದು, ಕರ್ನಾಟಕ ಚುನಾವಣೆ ಪ್ರಚಾರದ ವೇಳೆ ಹುಬ್ಬಳ್ಳಿಗೆ ವಿಮಾನದ ಮೂಲಕ ಪ್ರಯಾಣ ಬೆಳೆಸುವಾಗ ತಾಂತ್ರಿಕ ದೋಷ ಕಂಡು ಬಂದಿದ್ದು, ಭಾರಿ ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ರಾಹುಲ್ ಕೈಲಾಸ ಶಿವನ ಬಳಿ ರಕ್ಷಿಸುವಂತೆ ಬೇಡಿಕೊಂಡಿದ್ದು, ಕೈಲಾಸ ಶಿವನ ದೇವಾಲಯಕ್ಕೆ ಭೇಟಿ ನೀಡುವುದಾಗಿ ಮನದಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾಗಿ ರಾಹುಲ್ ತಿಳಿಸುದ್ದಾರೆ. ಹೀಗಾಗಿ ಆಗಸ್ಟ್ 31ರಂದು ರಾಹುಲ್ ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡಿ ಹರಕೆ ತೀರಿಸಲಿದ್ದಾರೆ.

ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದ 8 ಸಾವಿರ ಅಡಿ ದಿಢೀರನೆ ಕೇಳಗಿಳಿಯಿತು. ಆಗ ರಾಹುಲ್ ಶಿವನನ್ನು ನೆನೆದಿದ್ದರು. ನಂತರ ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದರು.

Leave a Reply