ಕೊಡಗು ಪ್ರವಾಹಕ್ಕೆ ಹರಿದು ಬಂದ ಆರ್ಥಿಕ ನೆರವು ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಕೊಡಗು, ಮಡಿಕೇರಿ ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿನ ಪ್ರಾಕೃತಿಕ ವಿಕೋಪಕ್ಕೆ ರಾಜ್ಯದ ಜನರು ಉತ್ತಮವಾಗಿ ಸ್ಪಂದಿಸಿದ್ದು, ಬುಧವಾರ (ಆ.29)ದವರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು ₹36,02,81,858.90 ಹರಿದು ಬಂದಿದೆ.

ಈವರೆಗೂ ಒಟ್ಟು 490 ಧನಾದೇಶ/ ಡಿ.ಡಿ ಗಳ ಮೂಲಕ ₹24,33,93,958.00 ಬಂದಿದೆ. ಇನ್ನು ಪೇಟಿಎಂ ಸೇರಿದಂತೆ ಇದರೆ ಆನ್ ಲೈನ್ ಬ್ಯಾಂಕಿಂಗ್ ಮೂಲಕ ₹11,68,87,900,90 ಬಂದಿರುವುದಾಗಿ ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.

ಸಂತ್ರಸ್ತರಿಗೆ ಸಹಾಯ ಮಾಡುವ ದಾನಿಗಳು ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ 2018ರ ಖಾತೆಗೆ ದೇಣಿಗೆ ಸಲ್ಲಿಸಲು ಈ ಖಾತೆಗೆ ಹಣ ಹಾಕಬಹುದು.

ಖಾತೆ ಹೆಸರು: ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ 2018.
ಬ್ಯಾಂಕ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಶಾಖೆ : ವಿಧಾನ ಸೌಧ
ಖಾತೆ ಸಂಖ್ಯೆ : 37887098605
ಐ.ಎಫ್.ಎಸ್.ಸಿ. ಕೋಡ್ : ಎಸ್ಬಿಐಎನ್ 0040277
ಎಂ.ಐ.ಸಿ.ಆರ್. ಸಂಖ್ಯೆ : 560002419

Leave a Reply