ಬಾಡಿಗೆಗೆ ಸಿಗ್ತಾರೆ ಬಾಯ್ ಫ್ರೆಂಡ್ಸ್! ಭಾರತದಲ್ಲೂ ಇದು ಸಾಧ್ಯವಾ? ಅನ್ನೋರು ಈ ಸುದ್ದಿ ನೋಡಿ!

ಡಿಜಿಟಲ್ ಕನ್ನಡ ಟೀಮ್:

ಬಾಡಿಗೆಗೆ ಬಾಯ್ ಫ್ರೆಂಡ್… ಸಿನಿಮಾಗೆ ಮಾತ್ರ ಸೀಮಿತವಾಗಿದ್ದ ಈ ಪರಿಕಲ್ಪನೆ ಈಗ ವಾಸ್ತವಿಕ ಜೀವನದಲ್ಲೂ ನಿಜವಾಗಿದೆ. ಹೌದು, ನಂಬಲು ಕಷ್ಟ ಅನಿಸಿದರೂ ಇದು ನಿಜ.

ಮುಂಬೈ ಮೂಲದ ‘ರೆಂಟ್ ಎ ಬಾಯ್ ಫ್ರೆಂಡ್’ (RABF) ಎಂಬ ಆಪ್ ವೊಂದು ಬಾಡಿಗೆಗೆ ಬಾಯ್ ಫ್ರೆಂಡ್ಸ್ ಗಳನ್ನು ನೀಡುವ ಸೇವೆ ಆರಂಭಿಸಿದೆ. ಇನ್ನು ಒಂದು ಪ್ರಮುಖ ವಿಷಯ ಏನೆಂದರೆ ಖಿನ್ನತೆಯನ್ನು ದೂರ ಮಾಡುವ ಉದ್ದೇಶದೊಂದಿಗೆ ಈ ಆಪ್ ಆರಂಭವಾಗಿದೆ. ಬಾಯ್ ಫ್ರೆಂಡ್ ಗಳಿಂದ ಖಿನ್ನತೆ ದೂರವಾಗುತ್ತಾ? ಇವೆರಡಕ್ಕೂ ಸಂಬಂಧ ಇದೆಯಾ? ಬಾಡಿಗೆಗೆ ಬಾಯ್ ಫ್ರೆಂಡ್ ಪರಿಕಲ್ಪನೆ ಭಾರತದಲ್ಲಿ ಸಾಧ್ಯವೇ? ಈ ಆಪ್ ಹೇಗೆ ನಡೆಯುತ್ತದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…

ಆಗಸ್ಟ್ 15ರಂದು ಭಾರತದಲ್ಲಿ ಈ ಆಪ್ ಆರಂಭವಾಗಿದ್ದು, ಬಾಯ್ ಫ್ರೆಂಡ್ ನನ್ನು ಬಾಡಿಗೆಗೆ ನೀಡುತ್ತಿದೆ. 29 ವರ್ಷದ ಕೌಶಲ್ ಪ್ರಕಾಶ್ ಈ ಆಪ್ ಸೇವೆ ಆರಂಭಿಸಿದ್ದು, ಈತ ಹೇಳುವ ಪ್ರಕಾರ, ಈತ ಸುಮಾರು 3 ವರ್ಷಗಳ ಕಾಲ ಖಿನ್ನತೆಗೆ ಒಳಗಾಗಿದ್ದನಂತೆ. ಅಪ್ ನ ಸಾಮಾಜಿಕ ಜಾಲತಾಣಗಳಲ್ಲಿ ಈ ಆಪ್ ಬಗ್ಗೆ ಈತ ಹೇಳಿಕೊಂಡಿರುವುದಿಷ್ಟು…
‘ಆರ್ ಎಬಿಎಫ್ ಸೇವೆ ಹುಡುಗ ಹಾಗೂ ಹುಡುಗಿಯರಿಬ್ಬರಿಗೂ ಸಿಗಲಿದ್ದು, ಒಪ್ಪಂದದ ಮೇರೆಗೆ ಪುಣೆ ಹಾಗೂ ಮುಂಬೈ ನಗರದಲ್ಲಿ ಸೇವೆ ದೊರೆಯಲಿದೆ. ದೇಶದಲ್ಲಿ ಖಿನ್ನತೆ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಪುರುಷರಿಗೆ ಉದ್ಯೋಗ ಕಲ್ಪಿಸಲು ಈ ಆಪ್ ವೇದಿಕೆಯಾಗಲಿದೆ. ಇದರ ಮೂಲಕ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಮತ್ತಷ್ಟು ಆತ್ಮ ವಿಶ್ವಾಸದಿಂದ ಎದುರಿಸಬಹುದು.’

https://www.instagram.com/p/Bmisxqih1UM/?utm_source=ig_share_sheet&igshid=wgdxh3jge83l

ಒಂಟಿತನ ಹಾಗೂ ಖಿನ್ನತೆಗೆ ಒಳಗಾಗಿರುವವರು ಬಾಡಿಗೆಗೆ ಬಾಯ್ ಫ್ರೆಂಡ್ ಗಳನ್ನು ಪಡೆದು ಅವರೊಂದಿಗೆ ಸುತ್ತಾಟ, ಫನ್ ಆಕ್ಟಿವಿಟಿ, ಊಟ, ಕಾಫಿಯನ್ನು ಸೇವಿಸಿ ತಮ್ಮ ಚಿಂತೆಯನ್ನು ಮರೆಯಬಹುದು ಎನ್ನುತ್ತಾರೆ ಈ ಆಪ್ ತಂಡದ ಸದಸ್ಯರು.

ಸದ್ಯ ಈ ಆಪ್ ತಂಡದಲ್ಲಿ 22 ವರ್ಷದಿಂದ 25 ವರ್ಷದೊಳಗಿನ ಆರು ಹುಡುಗರಿದ್ದು, ಇವರು ಬಾಡಿಗೆ ಬಾಯ್ ಫ್ರೆಂಡ್ ಆಗಲಿದ್ದಾರೆ. ಸದ್ಯಕ್ಕೆ ಪುಣೆ ಮತ್ತು ಮುಂಬೈನಲ್ಲಿ ಮಾತ್ರ ಈ ಬಾಡಿಗೆ ಬಾಯ್ ಫ್ರೆಂಡ್ ಸೇವೆ ದೊರೆಯಲಿದ್ದು, ಈ ಆಪ್ ನಲ್ಲಿ ಮೂರು ವಿಭಾಗದ ಆಯ್ಕೆಗಳಿವೆಯಂತೆ.

  • ಮೊದಲನೆಯದು ಎ ವಿಭಾಗ. ಇಲ್ಲಿ ಪ್ರತಿ ಗಂಟೆಗೆ ₹3000ಕ್ಕೆ ಸೆಲೆಬ್ರಿಟಿಗಳು ಬಾಡಿಗೆ ಬಾಯ್ ಫ್ರೆಂಡ್ ಆಗುತ್ತಾರೆ.
  • ಎರಡನೆಯದು ಬಿ ವಿಭಾಗ. ಇಲ್ಲಿ ಪ್ರತಿಗಂಟೆಗೆ ₹ 2000ಕ್ಕೆ ಪುರುಷ ರೂಪದರ್ಶಿಗಳು ಬಾಡಿಗೆ ಬಾಯ್ ಫ್ರೆಂಡ್ ಆಗಿ ಸಿಗುತ್ತಾರೆ.
  • ಮೂರನೆಯ ವಿಭಾಗದಲ್ಲಿ ಸಾಮಾನ್ಯ ಯುವಕರು ಪ್ರತಿ ಗಂಟೆಗೆ ₹ 300- 400ಕ್ಕೆ ಬಾಡಿಗೆ ಬಾಯ್ ಫ್ರೆಂಡ್ ಆಗುತ್ತಾರೆ.

ಈ ಆಪ್ ಟಾಲ್ ಫ್ರೀ ದೂರವಾಣಿ ಸಂಖ್ಯೆ ಹೊಂದಿದ್ದು, ಇಲ್ಲಿಗೆ ಕರೆ ಮಾಡಿದರೆ ಮನೋತಜ್ಞರು ಮಾರ್ಗದರ್ಶನ ನೀಡುತ್ತಾರಂತೆ. ಇದಕ್ಕಾಗಿ ಪ್ರತಿ ಗಂಟೆಗೆ ₹500 ಶುಲ್ಕ ವಿಧಿಸುತ್ತಾರೆ.

Leave a Reply