ಮಹಿಳೆಯರಲ್ಲಿ ಗರ್ಭನಿರೋಧಕದ ಪ್ರಾಮುಖ್ಯತೆ ಏನು? ವಿವಿಧ ವಿಧಾನಗಳು!

 ಡಾ.ಬಿ.ರಮೇಶ್

ಮಹಿಳೆಯರ ಜೀವನದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ಎಷ್ಟು ಮಹತ್ವದ್ದೊ, ಗರ್ಭನಿರೋಧಕಗಳು ಕೂಡ ಆಕೆಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಸಂತಾನೋತ್ಪತ್ತಿ ಆಕೆಯ ಜೀವನಕ್ಕೆ ಹೊಸ ಅರ್ಥ ಕೊಟ್ಟರೆ, ಗರ್ಭನಿರೋಧಕಗಳು ಆಕೆಯ ಜೀವನವನ್ನು ಸರಿಯಾಗಿ ಕಟ್ಟಿಕೊಡಲು ದಾರಿ ಮಾಡಿಕೊಡುತ್ತವೆ. ತನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ಗರ್ಭ ನಿರೋಧಕ ವಿಧಾನ ಬಳಸದ ಮಹಿಳೆ ಹುಡುಕಿದರೂ ಸಿಗಲಾರರು.

ಗರ್ಭ ನಿರೋಧಕಗಳನ್ನು ವಯಸ್ಸಿಗನುಗುಣವಾಗಿ, ಸಂದರ್ಭಕ್ಕನುಗುಣವಾಗಿ ತಮಗೆ ಯಾವುದು ಬೇಕೊ ಆ ವಿಧಾನವನ್ನು ಅನುಸರಿಸಬಹುದು. ಇದನ್ನು ವೈದ್ಯ ಭಾಷೆಯಲ್ಲಿ ಕೆಫೆಟೆರೆಯಾ ಅಪ್ರೋಚ್ಎಂದು ಹೇಳುತ್ತಾರೆ.

ಗರ್ಭನಿರೋಧಕಗಳನ್ನು ಏಕೆ ಬಳಸಬೇಕು?

ಕೆಲವು ಹುಡುಗಿಯರಿಗೆ ಹದಿವಯಸ್ಸಿನಲ್ಲಿ ಅಂದರೆ 20ಕ್ಕೂ ಮುಂಚೆಯೇ ಮದುವೆಯಾಗುತ್ತದೆ. ಮದುವೆಯ ಬಳಿಕ ಇನ್ನೂ ಓದಬೇಕೆಂದೊ ಅಥವಾ ಯಾವುದಾದರೂ ಉದ್ಯೋಗ ಮಾಡಬೇಕೆಂದೊ ಕನಸು ಕಂಡಿರುತ್ತಾರೆ. ಅಂಥವರು ತಮ್ಮ ಕನಸು ನನಸಾಗಿಸಿಕೊಳ್ಳಲು ಯಾವುದಾದರೊಂದು ಗರ್ಭನಿರೋಧಕ ವಿಧಾನ ಅನುಸರಿಸುವುದರ ಮೂಲಕ ಮೊದಲು ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು. ಕೆಲವು ವರ್ಷಗಳ ಬಳಿಕ ಮಗು ಪಡೆಯಬಹುದು.

ಬಗೆಬಗೆಯ ಗರ್ಭನಿರೋಧಕಗಳು

ಕಾಂಡೊಮ್‍ಗಳು: ಪುರುಷರು ಹಾಗೂ ಮಹಿಳೆಯರು ಬಳಸುವ ಎರಡೂ ಬಗೆಯ ಕಾಂಡೊಮ್‍ಗಳು ಲಭಿಸುತ್ತವೆ. ಪುರುಷರು ಉಪಯೋಗಿಸುವ ಕಾಂಡೊಮ್‍ಗಳೇ ಹೆಚ್ಚು ಜನಪ್ರಿಯ.

 • ಕಾಂಡೊಮ್ ಇದು ಸುಲಭ ಲಭ್ಯತೆಯ, ಅತ್ಯಂತ ಸುರಕ್ಷಿತ ವಿಧಾನ.
 • ಇದು ಕೇವಲ ಗರ್ಭನಿರೋಧಕ ಅಷ್ಟೇ ಅಲ್ಲ, ಹಲವು ಬಗೆಯ ಲೈಂಗಿಕ ರೋಗಗಳಿಂದ ರಕ್ಷಣೆ ನೀಡುತ್ತದೆ.
 • ಗನೋರಿಯಾ, ಹರ್ಪಿಸ್ ಇನ್‍ಫೆಕ್ಶನ್, ಎಚ್‍ಐವಿ ಹೆಪಟೈಟಿಸ್ ಈ ರೋಗಗಳು ಮಹಿಳೆಗೆ ಉಂಟಾಗದಂತೆ ಕಾಂಡೊಮ್ ರಕ್ಷಣೆ ನೀಡುತ್ತದೆ.
 • ಮಹಿಳೆಯರು ಬಳಸುವ ಕಾಂಡೋಮ್‍ಗಳು ಇದ್ದು, ಅದನ್ನು ಸರ್ವಿಕ್ಸ್‍ನಲ್ಲಿ ಕಪ್ ರೀತಿಯಲ್ಲಿ ಅಳವಡಿಸಲಾಗಿರುತ್ತದೆ. ಇದು ಕೂಡ ಪುರುಷ ಕಾಂಡೋಮ್‍ನ ಹಾಗೆ ಎಲ್ಲ ಬಗೆಯ ರೋಗಗಳಿಂದ ರಕ್ಷಣೆ ದೊರೆಯುತ್ತದೆ.

ಕಾಪರ್– ಟಿ:

 • ಇದೊಂದು ಟಿಆಕಾರದ ಸಾಧನವಾಗಿದ್ದು, ಗರ್ಭಾಶಯದೊಳಗೆ ಅದನ್ನು ಅಳವಡಿಸಲಾಗುತ್ತದೆ. ಹೆರಿಗೆಯಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೋಗುವಾಗ ಅಥವಾ ಹೆರಿಗೆ ಆದ 6 ವಾರಗಳ ಬಳಿಕ ಅಳವಡಿಸಿಕೊಳ್ಳಬಹುದು.
 • ಈ ಐಯುಡಿ ಸಾಧನ ಗರ್ಭಾಶಯದೊಳಗಡೆ ಅಳವಡಿಸಿದ ಬಳಿಕ ಅದು 10 ವರ್ಷದ ತನಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ.
 • ಗರ್ಭ ಧರಿಸಬೇಕೆಂಬ ಇಚ್ಛೆ ಆದಾಗ ಕಾಪರ್ – ಟಿ ತೆಗೆಯಿಸಿ ಪುನಃ ಗರ್ಭ ಧರಿಸಬಹುದಾಗಿದೆ.

ಗರ್ಭನಿರೋಧಕ ಮಾತ್ರೆಗಳು:

 • ಇವು ಇತರ ಯಾವುದೇ ಗರ್ಭನಿರೋಧಕಗಳಿಗಿಂತ ಹೆಚ್ಚು ಪರಿಣಾಮಕಾರಿ.
 • ಈ ಮಾತ್ರೆಗಳು ಅಂಡಾಣು ಬಿಡುಗಡೆ ಪ್ರಕ್ರಿಯೆಗೆ ತಡೆಯೊಡ್ಡಿ ಗರ್ಭಧಾರಣೆ ಆಗದಂತೆ ನೋಡಿಕೊಳ್ಳುತ್ತವೆ.
 • ಕೆಲವು ಮಾತ್ರೆಗಳನ್ನು 21 ದಿನಗಳ ಕಾಲ ತೆಗೆದುಕೊಳ್ಳಬೇಕಾಗುತ್ತದೆ. ಮತ್ತೆ ಕೆಲವು ಮಾತ್ರೆಗಳನ್ನು ತಿಂಗಳಪೂರ್ತಿ ತೆಗೆದುಕೊಳ್ಳಬೇಕಾಗುತ್ತದೆ.
 • ಪ್ರತಿದಿನ ನಿಗದಿತ ಸಮಯಕ್ಕೆ ಮಾತ್ರೆ ಸೇವಿಸಬೇಕಾಗುತ್ತದೆ. ಒಂದು ದಿನವೂ ತಪ್ಪಿಸಬಾರದು. ಹಾಗೇನಾದರೂ ಆದರೆ ಗರ್ಭ ನಿಲ್ಲುವ ಸಾಧ್ಯತೆ ಇರುತ್ತದೆ.
 • ನಿಮಗೆ ತೋಚಿದ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದು ಸರಿಯಲ್ಲ. ವೈದ್ಯರು ನಿಮ್ಮ ದೇಹಕ್ಕೆ ಸೂಕ್ತ ಎನಿಸುವಂತಹ ಮಾತ್ರೆಯನ್ನು ಶಿಫಾರಸು ಮಾಡುತ್ತಾರೆ.

ಗರ್ಭನಿರೋಧಕ ಚುಚ್ಚುಮದ್ದು: ಕಾಂಡೋಮ್ ಬಳಕೆ, ಗರ್ಭನಿರೋಧಕ ಮಾತ್ರೆಗಳ ಸೇವನೆ ಮಾಡುವುದು ಕಿರಿಕಿರಿ ಎನ್ನಿಸಿದರೆ ಅಂಥವರು ಗರ್ಭನಿರೋಧಕ ಚುಚ್ಚುಮದ್ದು ಹಾಕಿಕೊಂಡು 3 ತಿಂಗಳವರೆಗೆ ಗರ್ಭಧಾರಣೆ ಆಗುವುದನ್ನು ತಡೆಯಬಹುದಾಗಿದೆ. ಮಗು ಬೇಕೆಂದಾಗ ಮುಂದಿನ ಸಲ ಚುಚ್ಚುಮದ್ದು ಹಾಕಿಸಿಕೊಳ್ಳುವುದನ್ನು ನಿಲ್ಲಿಸಬೇಕು.

ಶಸ್ತ್ರಚಿಕಿತ್ಸೆ ವಿಧಾನ: ಇದು ಗರ್ಭ ನಿರೋಧಕದ ಖಾಯಂ ವಿಧಾನ. ಈ ವಿಧಾನದಲ್ಲಿ ಫೆಲೋಪಿಯನ್ ಟ್ಯೂಬ್‍ಗಳನ್ನು ಅಂದರೆ ಗರ್ಭನಾಳಗಳನ್ನು ಮುಚ್ಚಲಾಗುತ್ತದೆ.(ಟ್ಯುಬೆಕ್ಟಮಿ).

ಲ್ಯಾಪ್ರೋಸ್ಕೋಪಿ ಮೂಲಕ ಸಂತಾನಹರಣ ಶಸ್ತ್ರಚಿಕಿತ್ಸೆ (ಲ್ಯಾಪ್ರೋಸ್ಕೋಪಿ ಟ್ಯುಬೆಕ್ಟಮಿ) ಮಾಡುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಹೆಚ್ಚು ದಿನ ರಜೆ ಹಾಕಬೇಕಾದ ಅವಶ್ಯಕತೆ ಇರುವುದಿಲ್ಲ. ಮುಂಜಾನೆ ಬಂದು ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಸಂಜೆ ಮನೆಗೆ ಮರಳಬಹುದು. ಗಾಯ ಅಥವಾ ಸೋಂಕು ಉಂಟಾಗುವ ಸಾಧ್ಯತೆಯೂ ಇರುವುದಿಲ್ಲ. ಮುಂದೊಮ್ಮೆ ಮಗು ಬೇಕೆಂದಾಗ ಟೈ ಮಾಡಿದ ಗರ್ಭನಾಳಗಳನ್ನು ಜೋಡಿಸುವ ಸಾಧ್ಯತೆಯೂ ಇದೆ.

ನೆನಪಿಟ್ಟುಕೊಳ್ಳಬೇಕಾದ ಸಂಗತಿಗಳು

 • ದೇಶದ ಜನಸಂಖ್ಯೆ ತಡೆಗಟ್ಟಲು, ಆರೋಗ್ಯಕರ ಸಮಾಜ ನಿರ್ಮಾಣದ ದೃಷ್ಟಿಯಿಂದ ಇದೊಂದು ಉಪಯುಕ್ತ ನಿರ್ಧಾರ.
 • ಮದುವೆಯ ಬಳಿಕ ತಕ್ಷಣ ಗರ್ಭ ಧರಿಸಿದರೆ ಆರ್ಥಿಕ ಹೊರೆ ಅಧಿಕವಾಗುತ್ತದೆ. ಆರ್ಥಿಕ ಭದ್ರತೆ ಸಿಗುವತನಕ 2-3 ವರ್ಷ ಗರ್ಭಧಾರಣೆ ನಿರ್ಧಾರ ಮುಂದೂಡುವುದು ಸೂಕ್ತ ನಿರ್ಧಾರ.
 • ಆಕಸ್ಮಿಕವಾಗಿ ಗರ್ಭಧಾರಣೆಯಾಗಿ ಗರ್ಭಪಾತ ಮಾಡಿಸಿಕೊಳ್ಳುವುದಕ್ಕಿಂತ, ಗರ್ಭಧಾರಣೆ ಆಗದಂತೆ ಮುಂಚಿತವಾಗಿಯೇ ಗರ್ಭನಿರೋಧಕಗಳನ್ನು ಬಳಸುವುದು ಸೂಕ್ತ ನಿರ್ಧಾರ ಎನಿಸಿಕೊಳ್ಳುತ್ತದೆ. ಒಂದು ಸಲ ಗರ್ಭಪಾತ ಮಾಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಗರ್ಭ ಧರಿಸುವುದು ಕಷ್ಟವಾಗಬಹುದು.
 • ಗರ್ಭನಿರೋಧಕಗಳ ಬಳಕೆ ಗರ್ಭಧಾರಣೆ ತಡೆಯುವುದಷ್ಟೇ ಅಲ್ಲ, ಎರಡು ಮಕ್ಕಳ ನಡುವೆ 3-5 ವರ್ಷ ಅಂತರ ಇಡುವುದರಿಂದ ಮೊದಲ ಮಗುವಿನ ಬಗ್ಗೆ ಸಂಪೂರ್ಣ ಗಮನ ಕೊಡಲು ಸಾಧ್ಯವಾಗುತ್ತದೆ.

ಮಾಹಿತಿಗೆ :
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

altiushospital@yahoo.com, www.altiushospital.com

Leave a Reply