62 ಜವಾನ ಹುದ್ದೆಗೆ ಬಂದವು 93 ಸಾವಿರ ಅರ್ಜಿ! ಸಾವಿರಾರು ಪಿಎಚ್’ಡಿದಾರರೂ ಆಕಾಂಕ್ಷಿಗಳು!

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಒಂದೆಡೆಯಾದರೆ ಸರಕಾರಿ ನೌಕರಿಯ ವ್ಯಾಮೋಹ ಮತ್ತೊಂದೆಡೆ. ಇವೆರಡರ ಪರಿಣಾಮ 5-12ನೇ ತರಗತಿ ವಿದ್ಯಾರ್ಹತೆ ಅಗತ್ಯವಿರುವ ಜವಾನ (ಪ್ಯೂನ್-ಮೆಸೆಂಜರ್) ಹುದ್ದೆಗೆ ಸಾವಿರಾರು ಮಂದಿ ಸ್ನಾತಕೋತ್ತರ ಪದವೀಧರರು ಹಾಗೂ ಅರ್ಜಿ ಹಾಕಿದ್ದಾರೆ.

ಹೌದು, ಉತ್ತರ ಪ್ರದೇಶದ ಪೊಲೀಸ್ ಇಲಾಖೆಯ ದೂರಸಂಪರ್ಕ ಘಟಕದ 62 ಜವಾನ ಹುದ್ದೆಗಳಿಗಾಗಿ ಒಟ್ಟು 93,000 ಅರ್ಜಿಗಳು ಬಂದಿವೆ. ಇದರಲ್ಲಿ 50,000ಕ್ಕೂ ಹೆಚ್ಚು ಪದವೀಧರರು, ಸುಮಾರು 28,000 ಸ್ನಾತಕೋತ್ತರ ಪದವೀಧರರು ಹಾಗೂ ಪಿಎಚ್‍ಡಿ ಪಡೆದ 3,700 ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಬಿಟೆಕ್, ಎಂಬಿಎ ಸೇರಿದಂತೆ ಇತರ ಸ್ನಾತಕೋತ್ತರ ಪದವಿಗಳನ್ನೂ ಪಡೆದವರೂ ಇದರಲ್ಲಿದ್ದಾರೆ. ಇನ್ನು ಈ ಹುದ್ದೆಗೆ ಅರ್ಹರಾಗಿರುವ ವಿದ್ಯಾಭ್ಯಾಸ (5 ಮತ್ತು 12ನೇ ತರಗತಿ ನಡುವಣ ವಿದ್ಯಾರ್ಹತೆ) ಮಾಡಿರುವ ಅರ್ಜಿದಾರರ ಸಂಖ್ಯೆ 7,400 ಮಾತ್ರ.

Leave a Reply