ಮೋದಿ ಭಯ! ತೆಲಂಗಾಣ ಸರ್ಕಾರ ವಿಸರ್ಜಿಸಿದ ಕೆಸಿಆರ್!

ಡಿಜಿಟಲ್ ಕನ್ನಡ ಟೀಮ್:

ತೆಲಂಗಾಣದ ಪ್ರಸ್ತುತ ಸರ್ಕಾರದ ಅವಧಿ ಮುಕ್ತಾಯಕ್ಕೆ ಇನ್ನು ಹಲವು ತಿಂಗಳು ಬಾಕಿ ಇದ್ದರೂ ವಿಧಾನಸಭೆ ವಿಸರ್ಜಿಸಲು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಚಿಂತಿಸಿದ್ದಾರೆ.

ಆಂಧ್ರಪ್ರದೇಶದ ಭಾಗವಾಗಿದ್ದ ತೆಲಂಗಾಣ ಪ್ರಾಂತ್ಯ, ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕ ರಾಜ್ಯವಾಗಿ ರೂಪುಗೊಳ್ತು. ನಂತರ ನಡೆದ ಚುನಾವಣೆಯಲ್ಲಿ ಕೆ ಚಂದ್ರಶೇಖರ್​ ರಾವ್​ ನೇತೃತ್ವದ ಟಿಆರ್‌ಎಸ್ ಪಕ್ಷ ಅಧಿಕಾರ ಹಿಡಿದಿತ್ತು. ಈ ಸರ್ಕಾರದ ಅವಧಿ 2019ಕ್ಕೆ ಮುಗಿಯಲಿದೆ. ಇನ್ನು ಹಲವು ತಿಂಗಳು ಕಾಲಾವಕಾಶ ಇದ್ದರೂ ಕೆ ಚಂದ್ರಶೇಖರ್ ರಾವ್ ಮಂತ್ರಿಮಂಡಲ ಇಂದು ಸಭೆ ಸೇರಿ ಒಂದು ಸಾಲಿನ ನಿರ್ಣಯ ಕೈಗೊಂಡಿದ್ದು, ಬಳಿಕ ರಾಜಭವನಕ್ಕೆ ತೆರಳಿದ ಮುಖ್ಯಮಂತ್ರಿ ಕೆಸಿಆರ್ ರಾಜ್ಯಪಾಲ ನರಸಿಂಹನ್​ ಅವರಿಗೆ ಮಂತ್ರಿಮಂಡಲದ ನಿರ್ಣಯವನ್ನು ತಿಳಿಸಿ, ವಿಧಾನಸಭೆ ವಿಸರ್ಜನೆಗೆ ಮನವಿ ಮಾಡಿದರು. ರಾಜ್ಯಪಾಲ ನರಸಿಂಹನ್​ ಅವರೂ ಕೂಡ ಮಂತ್ರಿಮಂಡಲದ ನಿರ್ಧಾರವನ್ನು ಒಪ್ಪಿಕೊಂಡು ಅಂಗೀಕರಿಸಿ, ಮೊದಲ ವಿಧಾನಸಭೆ ವಿಸರ್ಜನೆಗೆ ಅನುಮೋದನೆ ನೀಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ನಿರ್ಧಾರ ಪ್ರಕಟಿಸಿರುವ ಕೆಸಿಆರ್, 105 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ನಾಲೆಯಿಂದಲೇ ಚುನಾವಣೆ ಪ್ರಚಾರ ನಡೆಸಲು ತೀರ್ಮಾನಿಸಿದ್ದಾರೆ. ಅದರೊಂದಿಗೆ ಕೆಸಿಆರ್ ಅವರೂ ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಾಕಷ್ಟು ಪೂರ್ವಸಿದ್ಧತೆ ನಡೆಸಿರುವುದು ಸ್ಪಷ್ಟವಾಗಿದೆ.

ಈ ಸರ್ಕಾರದ ಅವಧಿ ಮುಂದಿನ ವರ್ಷ ಲೋಕಸಭಾ ಚುನಾವಣೆವರೆಗೂ ಇದೆ. ಆದರೂ ಅವಧಿ ಪೂರ್ವ ಚುನಾವಣೆಗೆ ಹೋಗುತ್ತಿರೋದು ಯಾಕೆ ಅನ್ನೋ ಪ್ರಶ್ನೆ ರಾಜಕೀಯ ಮೂಡುವುದು ಸಹಜ ಅದಕ್ಕೆ ಕಾರಣ ಮೋದಿ ಹವಾ ಮೇಲಿನ ಭಯ!
ಕೆ.ಚಂದ್ರಶೇಖರ್ ರಾವ್ ಅವರು ಸಾಕಷ್ಟು ದೈವೀ ಭಕ್ತರಾಗಿದ್ದು, ವಾಸ್ತು, ಶಾಸ್ತ್ರ, ದೇವರು, ಜ್ಯೋತಿಷ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಕೆ. ಚಂದ್ರಶೇಖರ್ ಅವರ ಜಾತಕದ ಪ್ರಕಾತ 2019 ರಲ್ಲಿ ಚುನಾವಣೆಗೆ ಹೋಗುವುದಗಿಂತಲೂ 2018 ರಲ್ಲೇ ಚುನಾವಣೆ ನಡೆಸುವುದು ಸೂಕ್ತ ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ. ಹಾಗಾಗಿ 2018ರಲ್ಲಿ ಕೆಲವು ರಾಜ್ಯಗಳಲ್ಲಿ ಚುನಾವಣೆ ಬರುತ್ತಿದ್ದು, ಆ ರಾಜ್ಯಗಳ ಜೊತೆಯಲ್ಲೇ ಚುನಾವಣೆ ನೇಡೆಸಿದರೆ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಅನ್ನೋ ನಂಬಿಕೆಯಲ್ಲಿ ವಿಧಾನಸಭೆ ವಿಸರ್ಜಿಸಿದ್ದಾರೆ ಎನ್ನಲಾಗ್ತಿದೆ. ಇದು ಮೇಲ್ನೋಟಕ್ಕೆ ಹೇಳಲಾಗುತ್ತಿರುವ ಕಾರಣ. ಆದರೆ ಈ ನಿರ್ಧಾರದ ಹಿಂದೆ ಬೇರೆಯದೇ ರಾಜಕೀಯ ಲೆಕ್ಕಾಚಾರಗಳಿವೆ.

ಹೌದು, 2019ರಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರದ ಅವಧಿ ಅಂತ್ಯವಾಗಲಿದ್ದು ಚುನಾವಣೆ ಹೋಗಲಿದೆ. ಲೋಕಸಭಾ ಚುನಾವಣೆ ಜೊತೆ ತೆಲಂಗಾಣದಲ್ಲೂ ವಿಧಾನಸಭೆ ಚುನಾವಣೆ ನಡೆದರೆ ಟಿಆರ್‌ಎಸ್ ಪಕ್ಷಕ್ಕೆ ಲಾಭಕ್ಕಿಂತಲೂ ನಷ್ಟವೇ ಹೆಚ್ಚು ಅನ್ನೋದು ಕೆಸಿಆರ್ ಅವರ ಆತಂಕ. ಲೋಕಸಭೆ ಚುನಾವಣೆ ವೇಳೆ ದೇಶದಲ್ಲಿ ಮೋದಿ ಪರ ಒಂದು ಅಲೆ ಸೃಷ್ಟಿಯಾಗಿ ಮತ ಚಲಾವಣೆ ಆಗುವ ಸಾಧ್ಯತೆಗಳಿದ್ದು, ಇದು ತೆಲಂಗಾಣ ಚುನಾವಣೆ ಮೇಲೆ ಪ್ರಭಾವ ಬೀರಬಹುದು. ತೆಲಂಗಾಣ ಜನರ ಮನಸ್ಸಿಗೂ ಮೋದಿ ಅಲೆ ಬಡಿದರೆ ಆಮೇಲೆ ಚುನಾವಣೆ ಎದುರಿಸೋದು ಕಷ್ಟ. ಎಫೆಕ್ಟ್ ಆದರೆ ಮತ್ತೆ ಸರ್ಕಾರ ರಚನೆ ಕಷ್ಟವಾಗಲಿದೆ.

ಲೋಕಸಭೆ ಚುನಾವಣೆ ಜತೆಗೆ ವಿಧಾನಸಭಾ ಚುನಾವಣೆ ನಡೆದರೆ ಎರಡೂ ಪರೀಕ್ಷೆಗಳನ್ನು ಒಟ್ಟಿಗೆ ಎದುರಿಸಬೇಕಾಗುತ್ತದೆ. ಯಾವುದೇ ಚುನಾವಣೆಗೂ ಅಗತ್ಯ ಗಮನ ಹರಿಸಲು ಸಾಧ್ಯವಾಗುವುದಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಆ ಸಮಸ್ಯೆಗಲಿಲ್ಲ. ಈಗ ಜಂಜಾಟವಿಲ್ಲದೆ ವಿಧಾನಸಭೆ ಚುನಾವಣೆ ಮುಗಿಸಿಕೊಂಡು, ನಂತರ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ನಂತರ ಲೋಕಸಭೆ ಎದುರಿಸಲು ಆತ್ಮ ವಿಶ್ವಾಸ ಮೂಡಲಿದೆ.

Leave a Reply