ಮೈಸೂರಲ್ಲೊಬ್ಬ ಕಾಮಿಸ್ವಾಮಿಯಿಂದ ವಿವಾಹಿತೆ ಮೇಲೆ ಅತ್ಯಾಚಾರ

ಡಿಜಿಟಲ್ ಕನ್ನಡ ಟೀಮ್:

ಮೈಸೂರಲ್ಲೊಬ್ಬ ಕಾಮಿ ಸ್ವಾಮಿ ಪೂಜೆ ನೆಪದಲ್ಲಿ ವಿವಾಹಿತೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಕುವುಂಪುನಗರದ ಮಹಾಕಾಳಿ ಚಕ್ರೇಶ್ವರಿ ತ್ರಿಧಾಮ ಕ್ಷೇತ್ರದ ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಈ ನೀಚ ಕೃತ್ಯ ಎಸಗಿದ್ದು, ಕುವೆಂಪುನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಹಾರಿಹೋಗಿರುವ ‘ಹಂಸ’ದ ಬಂಧನಕ್ಕೆ ಬಲೆ ಬೀಸಿದ್ದಾರೆ. ‘ಪೂಜೆ’ಗೆಂದು ಪತ್ನಿಯನ್ನು ಸ್ವಾಮಿ ಬಳಿ ಬಿಟ್ಟು ಹೋಗಿದ್ದ ಗಂಡನ ವಿರುದ್ಧವೂ ಕೇಸು ಜಡಿದಿದ್ದಾರೆ.

ತನ್ನ ಬಳಿ ‘ಏಕಾಂತ ಪೂಜೆ’ ಮಾಡಿದರೆ ಸಕಲ ಪಾಪ ಪರಿಹಾರವಾಗಿ, ಸರ್ವರೀತಿ ಏಳ್ಗೆ ಆಗುವುದೆಂದು ಸ್ವಾಮಿ ನಂಬಿಸಿದ್ದ. ಏಕಾಂತಪೂಜೆ ಅಂದಾಗಲೇ ಮಹಿಳೆ ಬೇಡ ಅಂದಿದ್ದಾರೆ. ಆದರೆ ಗಂಡ ಬಲವಂತವಾಗಿ ಕರೆದೊಯ್ದು, ಸ್ವಾಮಿ ಬಳಿ ಬಿಟ್ಟು ಹೋಗಿದ್ದಾನೆ. ಅಂದರೆ ಆತ ಕೂಡ ಈ ಕೃತ್ಯದಲ್ಲಿ ಷಾಮೀಲಾಗಿದ್ದಾನೆ. ಸ್ವಾಮಿ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾನೆ.

Leave a Reply