ರಾಜಕೀಯ ಚೆಸ್ ಗೇಮ್ ಇದ್ದಂತೆ, ನನಗೂ ಚೆಕ್ ಕೊಡಲು ಬರುತ್ತೆ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

‘ರಾಜಕೀಯ ಫುಟ್ಬಾಲ್ ಆಟವಲ್ಲ. ಚೆಸ್ ಗೇಮ್ ಇದ್ದಂತೆ. ನನಗೂ ಚೆಕ್ ಕೊಡೋಕೆ ಬರುತ್ತೆ…’ ಇದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಪ್ರಸ್ತುತ ರಾಜ ರಾಜಕೀಯದಲ್ಲಿ ತಮ್ಮ ವಿರುದ್ಧ ಇಡಿ ತನಿಖಾ ಸಂಸ್ಥೆ ಮೂಲಕ ಕಟ್ಟಿಹಾಕುವ ಪ್ರಯತ್ನವನ್ನು ಬಣ್ಣಿಸಿದ ಪರಿ.

ಅಕ್ರಮ ಹಣ ಆರೋಪದ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಎಫ್ಐಆರ್ ದಾಖಲಿಸಿಕೊಂಡಿದೆ. ಶೀಘ್ರವೇ ಬಂಧಿಸಲಿದೆ ಎಂಬ ಮಾಧ್ಯಮಗಳ ವರದಿಗೆ ಪ್ರತಿಕ್ರಿಯೆ ನೀಡಿರುವ ಶಿವಕುಮಾರ್ ಅವರು ಹೇಳಿದ್ದಿಷ್ಟು…

‘ನಾನು ಯಾವುದೇ ತಪ್ಪು ಮಾಡಿಲ್ಲ. ಕ್ರಿಮಿನಲ್ ಕೂಡ ಅಲ್ಲ, ಇಡಿ ಪ್ರಕರಣದ ಹಿಂದೆ ಕೆಲ ನಾಯಕರ ಕೈವಾಡವಿದೆ. ಯಾವುದೇ ತನಿಖೆ ಎದುರಿಸಲು ನಾನು ಸಿದ್ಧನಿದ್ದೇನೆ. ನಾನು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ. ಇದುವರೆಗೆ ಜಾರಿ ನಿರ್ದೇಶನಾಲಯದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ದೆಹಲಿಯಲ್ಲಿ ಎರಡು ಮನೆಗಳಿವೆ. ಯಾವುದೇ ಅಕ್ರಮ ಆಸ್ತಿ ನನ್ನ ಬಳಿ ಇಲ್ಲ. ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು. ನಾನು ಹೋಗಿದ್ದೆ. ರಾಜಕೀಯದಲ್ಲಿ ಯಾರು ಪ್ರಬಲರಾಗಿರುತ್ತಾರೋ ಅಂತಹವರು ಟಾರ್ಗೆಟ್ ಆಗ್ತಾರೆ. ನಾನು ಕಿವಿಯಲ್ಲಿ ಹೂವಿಟ್ಟುಕೊಂಡು ಬೆಂಗಳೂರಿಗೆ ಬಂದಿಲ್ಲ, ರಾಜಕಾರಣ ಮಾಡುವುದಕ್ಕಾಗಿಯೇ ಬಂದಿದ್ದೇನೆ. ರಾಜಕೀಯದಲ್ಲಿ ಚೆಸ್ ಗೇಮ್ ಆಡಲು ನನಗೂ ಬರುತ್ತದೆ. ನನಗೂ ಚೆಕ್ ಕೊಡಲು ಬರುತ್ತದೆ. ಯಡಿಯೂರಪ್ಪ ಅವರ ಕೇಸ್‍ಗಳು ಕೋರ್ಟ್‍ಗಳಲ್ಲಿವೆ. ಇಡಿ ಪ್ರಕರಣದ ಬಗ್ಗೆ ವಕೀಲರ ಜತೆ ಚರ್ಚೆ ನಡೆಸುತ್ತೇನೆ. ಈ ವಿಚಾರವಾಗಿ ಹೈಕಮಾಂಡ್‍ ಜತೆ ಚರ್ಚೆ ನಡೆಸಿಲ್ಲ. ಮುಖ್ಯಮಂತ್ರಿ ಜತೆ ಚರ್ಚೆ ಮಾಡಬೇಕಿದೆ.’

Leave a Reply