ಸರ್ಕಾರ ಬದಲಿಸುವ ಸಮಯ ಬಂದಿದೆ: ಭಾರತ್ ಬಂದ್ ವೇಳೆ ಮನಮೋಹನ್ ಮಾತುಗಳು

ಡಿಜಿಟಲ್ ಕನ್ನಡ ಟೀಮ್:

‘ಸರ್ಕಾರ ಬದಲಿಸುವ ಸಮಯ ಬಂದಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಈ ಕೇಂದ್ರ ಸರ್ಕಾರದ ಬಗ್ಗೆ ದೇಶದ ಬಹುತೇಕ ಜನರು ಯಾವ ರೀತಿ ಭಾವನೆ ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ…’ ಇದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರೀತಿ.

ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ದೇಶಾದ್ಯಂತ ಬಂದ್ ಗೆ ಕರೆ ನೀಡಿರುವ ಕಾಂಗ್ರೆಸ್ ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಿತು.

ಈ ಪ್ರತಿಭಟನೆಯಲ್ಲಿ ಮನಮೋಹನ್ ಸಿಂಗ್ ಜತೆಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ, ನ್ಯಾಷನಲ್ ಕಾಂಗ್ರೆಸ್ ನ ಮುಖಂಡ ಶರದ್ ಪವಾರ್, ಎಲ್ ಜೆಡಿ ಮುಖ್ಯಸ್ಥ ಶರದ್ ಯಾದವ್ ಭಾಗವಹಿಸಿದ್ದರು. ಕಾಂಗ್ರೆಸ್ ಕರೆದಿರುವ ಈ ಪ್ರತಿಭಟನೆಗೆ ಒಟ್ಟು 21 ಇತರೆ ಪಕ್ಷಗಳು ಬೆಂಬಲ ನೀಡಿವೆ.

ಈ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಹೇಳಿದ್ದಿಷ್ಟು…
‘ಕೇಂದ್ರ ಸರ್ಕಾರ ಜನರಿಗೆ ಸುಳ್ಳು ಭರವಸೆಗಳನ್ನಷ್ಟೇ ನೀಡಿದೆ. ಮೋದಿ ಅವರು ಈವರೆಗೂ ಕೈಗೊಂಡ ಬಹುತೇಕ ಎಲ್ಲ ನಿರ್ಧಾರಗಳು ದೇಶದ ಜನರ ಹಿತಕ್ಕೆ ವಿರುದ್ಧವಾಗಿದೆ. ಹೀಗಾಗಿ ಸರ್ಕಾರ ಬದಲಿಸುವ ಸಮಯ ಬಂದಿದ್ದು, ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ದೇಶದ ಜನರು ತಕ್ಕ ಪಾಠ ಕಲಿಸಲಿದ್ದಾರೆ.’

Leave a Reply