ಹೆಂಡತಿ ತಲೆ ಕಡಿದು ಪೊಲೀಸ್ ಸ್ಟೇಷನ್‍ಗೆ ತಂದ ಭೂಪ!

ಡಿಜಿಟಲ್ ಕನ್ನಡ ಟೀಮ್:

ಅಕ್ರಮ ಸಂಬಂಧದ ಹೊಂದಿದ್ದ ಹೆಂಡತಿ ತಲೆ ಕಡಿದ ಪತಿ ತಲೆಯನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಪೊಲೀಸ್ ಠಾಣೆಗೆ ತಂದು ಶರಣಾಗಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್ ಬಳಿ ಈ ಘಟನೆ ನಡೆದಿದ್ದು, ಸತೀಶ್, ತನ್ನ ಹೆಂಡತಿ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ತಲೆ ಕಡಿದು ಕೊಂದಿದ್ದಾನೆ.

ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸತೀಶ್, ಪೊಲೀಸ್ ಠಾಣೆಗೆ ಆಗಮಿಸಿ ತಾನು ಹತ್ಯೆ ಮಾಡಿದ್ದನ್ನು ವಿವರಿಸಿದ್ದಾನೆ. ‘ಈಕೆ ನನ್ನ ಹೆಂಡತಿ. ಬೇರೊಬ್ಬನೊಂದಿಗೆ ಸಂಬಂಧ ಹೊಂದಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಹೀಗಾಗಿ ಆಕೆಯ ತಲೆ ಕಡಿದಿದ್ದೇನೆ. ನಾನು ಇವಳ ಗಂಡ ಆತ ಇವಳಿಗೆ ****. ಅವನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ’ ಎಂದಿದ್ದಾನೆ.

ಶಿವಾನಿ ರೈಲ್ವೆ ನಿಲ್ದಾಣ ಬಳಿ ಈ ಘಟನೆ ನಡೆದಿದ್ದು, ಅಲ್ಲಿಂದ 20 ಕಿ.ಮೀ ದೂರದ ಅಜಂಪುರದ ಪೊಲೀಸ್ ಠಾಣೆಗೆ ಬಸ್ ಮೂಲಕ ಹೆಂಡತಿ ತಲೆಯನ್ನು ಬಟ್ಟೆಯಲ್ಲಿ ಸುತ್ತಿಕೊಂಡು ತಂದಿದ್ದಾನೆ.

Leave a Reply