ಕನ್ನಡಿಗರೂ ಮೂರ್ಖರು ಎಂದ ಸುಬ್ರಮಣಿಯನ್ ಸ್ವಾಮಿ! ಇದಕ್ಕೆ ಅವರು ಕೊಟ್ಟ ಸಮರ್ಥನೆ ಏನು?

ಡಿಜಿಟಲ್ ಕನ್ನಡ ಟೀಮ್:

‘ತಮಿಳಿಗರಂತೆ ಕನ್ನಡಿಗರೂ ಮೂರ್ಖರೇ…’ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ಮಣಿಯನ್ ಸ್ವಾಮಿ ಅವರು ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮಿ ಅವರು, ‘ಹಿಂದಿ ಭಾಷೆಯನ್ನು ವಿರೋಧಿಸುವ ಕನ್ನಡ ಪರ ಹೋರಾಟಗಾರರು ತಮಿಳರಂತೆ ಮೂರ್ಖರು’ ಎಂದು ಹೇಳಿದ್ದಾರೆ.

ಹಿಂದಿ ಭಾಷೆ ಹೇರಿಕೆ ಹಾಗೂ ಅದರ ವಿರುದ್ಧದ ಪ್ರತಿಭಟನೆ ದಕ್ಷಿಣ ಭಾರತದಲ್ಲಿ ಸಾಮಾನ್ಯ. ತಮಿಳುನಾಡಿನಲ್ಲಿ ಅನೇಕ ದಶಕಗಳಿಂದ ಹಿಂದಿ ವಿರೋಧಿ ಧೋರಣೆ ನಡೆದುಕೊಂಡೇ ಬಂದಿದ್ದು, ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜಕೀಯ ಅಸ್ತ್ರವಾಗಿ ಈ ವಿಚಾರ ಬಳಕೆಯಾಗಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರ. ಹಿಂದಿ ಭಾಷೆ ವಿಚಾರವಾಗಿ ಈ ಹೇಳಿಕೆ ನೀಡಿರುವ ಸ್ವಾಮಿ ಅವರು ತಮ್ಮ ಹೇಳಿಕೆಗೆ ಸಮರ್ಥನೆಯನ್ನೂ ನೀಡಿದ್ದಾರೆ. ಅದೇನೆಂದರೆ…

‘ಸಂವಿಧಾನದಲ್ಲಿ ಹಿಂದಿ ಕೂಡ ಒಂದು ಭಾಷೆ. ಹಿಂದಿ ಬೆಳೆಯುವುದರಿಂದ ಕನ್ನಡ ಕೆಳಗೆ ಇಳಿಯುತ್ತದೆ ಎಂಬ ಭಾವನೆ ಬೇಕಿಲ್ಲ. ಹಿಂದಿ ಭಾಷೆ ವಿರೋಧಿಸುವವರು ತಮಿಳುನಾಡಿನ ಜನರಂತೆ ಮೂರ್ಖರು, ತಮಿಳರು ಮಾಡಿದಂತೆ ಕನ್ನಡಿಗರು ಮಾಡುತ್ತಿದ್ದಾರೆ. ಹಿಂದಿ ಭಾಷೆಯನ್ನು ವಿರೋಧಿಸಿ ತಮಿಳಿಗರು ಇಂದು ಉದ್ಯೋಗಾವಕಾಶ ಇಲ್ಲದೆ ಬಳಲುತ್ತಿದ್ದಾರೆ. ಇನ್ನು ದೇಶಾದ್ಯಂತ ತಿರುಗಾಡಲಾಗದ ಸ್ಥಿತಿಯಲ್ಲಿದ್ದಾರೆ. ತಮಿಳುನಾಡಿನ ಜನರು ಮಾಡಿದ ಮೂರ್ಖ ಕೆಲಸವನ್ನು ಕನ್ನಡಿಗರು ಮಾಡದಿರಲಿ.’

ಹಿಂದಿ ಭಾಷೆ ನಿರ್ಲಕ್ಷ್ಯದಿಂದಾಗುವ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಸುಬ್ರಮಣಿಯನ್ ಸ್ವಾಮಿ ಈ ಹೇಳಿಕೆ ನೀಡಿದ್ದರೂ ಅವರ ಈ ಹೇಳಿಕೆ ವ್ಯಾಪಕ ಟೀಕೆಗೆ ಒಳಗಾಗಿದೆ. ಅದರಲ್ಲೂ ಕನ್ನಡ ಪರ ಹೋರಾಟಗಾರರು ಕಣ್ಣು ಕೆಂಪಾಗಿಸಿದೆ. ಸ್ವಾಮಿ ಅವರ ಹೇಳಿಕೆ ಖಂಡಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, ‘ಸುಬ್ರಮಣಿಯನ್ ಸ್ವಾಮಿ ಅವರು ಮಾನಸಿಕ ಸೀಮಿತ ಕಳೆದುಕೊಂಡಿದ್ದಾರೆ’ ಎಂದು ಜರಿದಿದ್ದಾರೆ.

Leave a Reply