ದೇಶದಲ್ಲಿ ಕರ್ನಾಟಕ ಶಾಸಕರೇ ಕುಬೇರರು!

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ ಕರ್ನಾಟಕದ ಎಷ್ಟು ಅಭಿವೃದ್ಧಿ ಹೊಂದಿದೆಯೋ ಗೊತ್ತಿಲ್ಲ. ಆದರೆ ನಮ್ಮ ಶಾಸಕರು ಮಾತ್ರ ಭರ್ಜರಿ ಅಭಿವೃದ್ಧಿ ಹೊಂದಿದ್ದು, ದೇಶದಲ್ಲೇ ಕರ್ನಾಟಕದ ಶಾಸಕರು ಅತಿ ಹೆಚ್ಚು ಶ್ರೀಮಂತರು ಎಂದು ಅಧ್ಯಯನ ವರದಿಯೊಂದು ಪ್ರಕಟಿಸಿದೆ.

ಹೌದು, ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ವರದಿಯ ಪ್ರಕಾರ ರಾಜ್ಯದ 203 ಶಾಸಕರ ವಾರ್ಷಿಕ ಸರಾಸರಿ ಆದಾಯ 1.1 ಕೋಟಿ ರೂ.ನಷ್ಟಿದೆ. ಅದರೊಂದಿಗೆ ಅತಿ ಹೆಚ್ಚು ವಾರ್ಷಿಕ ವರಮಾನ ಹೊಂದಿರುವ ಶಾಸಕರ ಪೈಕಿ ರಾಜ್ಯದವರು ಅಗ್ರಸ್ಥಾನದಲ್ಲಿನಿಂತಿದ್ದಾರೆ. ಈಶಾನ್ಯ ಭಾರತದ ಶಾಸಕರ ವಾರ್ಷಿಕ ವರಮಾನ ಕೇವಲ 8.5 ಲಕ್ಷ ರೂ. ಹಾಗೂ ಛತ್ತೀಸ್‍ಗಢದ 64 ಶಾಸಕರು ವಾರ್ಷಿಕ ಅತ್ಯಲ 5.4 ಲಕ್ಷ ಆದಾಯ ಹೊಂದಿದ್ದಾರೆ. ಅತಿ ಕಡಿಮೆ ಸಂಪತ್ತು ಹೊಂದಿರುವ ಶಾಸಕರಾಗಿದ್ದಾರೆ. ಇನ್ನು ಮಹಾರಾಷ್ಟ್ರದ 256 ಶಾಸಕರ ವಾರ್ಷಿಕ ಆದಾಯ 43.4 ಲಕ್ಷ ರೂ. ಇದೆ.

ಇನ್ನು ದೇಶದ ಶಾಸಕರ ವಿದ್ಯಾರ್ಹತೆಯನ್ನು ನೋಡುವುದಾದರೆ, ದೇಶದ 1,052 ಶಾಸಕರುಗಳಲ್ಲಿ ಕೆಲವರ ಶೈಕ್ಷಣಿಕ ಅರ್ಹತೆ 5ನೇ ಕ್ಲಾಸ್ ಪಾಸ್ ಆಗಿದ್ದಾರೆ. ಆದರೆ ಇವರ ವಾರ್ಷಿಕ ಸಂಪಾದನೆ 31.03 ಲಕ್ಷ ರೂ.ನಷ್ಟಿದೆ. ವಿಪರ್ಯಾಸ ಎಂದರೆ ಉನ್ನತ ಶಿಕ್ಷಣ ಪಡೆದಿರುವ 1,997 ಶಾಸಕರುಗಳ ವಾರ್ಷಿಕ ವರಮಾನ 20.87 ಲಕ್ಷ ರೂ. ಆಗಿದೆ.

Leave a Reply