ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಸಮರ! ಸುದ್ದಿಗೋಷ್ಠಿಯಲ್ಲಿ ಮಾಡಿದ ಆರೋಪಗಳೇನು?

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ದ ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್‌ ಪ್ರಕರಣದ ಬಗ್ಗೆ ಆರೋಪ ಮಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿ ಸಮರ ಸಾರಿದೆ.

ಗುರುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಕಮಲ ನಾಯಕರು ಹಲವು ಹಗರಣಗಳ ಕುರಿತು ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ದಾರೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಮುಖ ನಾಯಕರಾದ ಆರ್‌.ಅಶೋಕ್‌, ಬಿ.ಜೆ.ಪುಟ್ಟಸ್ವಾಮಿ, ಗೋವಿಂದ ಕಾರಜೋಳ ಸೇರಿದಂತೆ ಇತರ ಮುಖಂಡರು ಎಚ್‌ಡಿಕೆ ವಿರುದ್ಧ ಮಾಡಿದ ಟೀಕಾ ಪ್ರಹಾರದ ಮುಖ್ಯ ಅಂಶ ಹೀಗೆವೆ…

  • ರಾಮನಗರದ ಕ್ಯಾತಗಾನಹಳ್ಳಿಯಲ್ಲಿ ಎಸ್‌ಸಿ/ಎಸ್‌ಟಿಗೆ ಮೀಸಲಾಗಿದ್ದ 46 ಎಕರೆ ಭೂಮಿಯನ್ನು ಎಚ್‌ಡಿಕೆ ಕುಟುಂಬ ಕಬಳಿಸಿದೆ.
  • ಚಿತ್ರದುರ್ಗದಲ್ಲಿ 80 ಹೆಕ್ಟೇರ್‌ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಅವಕಾಶ ನೀಡಿದ ಪ್ರಕರಣದಲ್ಲಿ ಎಚ್‌ಡಿಕೆ ಜಾಮೀನು ಪಡೆದಿದ್ದಾರೆ.
  • ಅದಿರು ಕಳ್ಳಸಾಗಾಣಿಕೆಗೆ ಭೂಗತ ಪಾತಕಿಯೊಂದಿಗೆ ನಂಟು ಹೊಂದಿದ್ದಾರೆ.
  • ಥಣಿಸಂದ್ರ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ.
  • 460 ಹೆಕ್ಟೇರ್‌ ಪ್ರದೇಶದಲ್ಲಿ ಆಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನು ಪಡೆದಿದ್ದಾರೆ.
  • ಕಾಂಗ್ರೆಸ್‌ ನಾಯಕ ಎ ಮಂಜು ಆರೋಪದಂತೆ ಸಚಿವ ರೇವಣ್ಣ ಪುತ್ರ ಪ್ರಜ್ವಲ್‌ ಭೂ ಕಬಳಿಕೆ ಮಾಡಿರುವುದು ನಿಜ. 54 ಎಕರೆ ಭೂಮಿ ಪ್ರಜ್ವಲ್‌ ಹೆಸರಲ್ಲಿ ರಿಜಿಸ್ಟರ್‌ ಆಗಿದೆ.
  • ಜನರು ದಂಗೆ ಮಾಡುವಂತೆ ಕರೆ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತಕ್ಷಣ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು. ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. ಇವರ ಹೇಳಿಕೆಯಿಂದ ಇಂದು ಕಾಂಗ್ರೆಸ್‌ನ ಕೆಲ ಗೂಂಡಾಗಳು ಯಡಿಯೂರಪ್ಪ ಅವರ ಮನೆಗೆ ನುಗ್ಗಿ ಅವರ ಪ್ರಾಣ ತೆಗೆಯಲು ಮುಂದಾಗಿದ್ದರು.
  • ಬಿಜೆಪಿ ಆಪರೇಷನ್‌ ಕಮಲಕ್ಕೆ ಯಾವುದೇ ಯತ್ನ ಮಾಡಿಲ್ಲ. ನಾವು ಯಾರನ್ನೂ ಕರೆದಿಲ್ಲ. ಕಾಂಗ್ರೆಸ್‌ ಶಾಸಕರೇ ಪಕ್ಷ ತೊರೆಯಲು ಮುಂದಾಗಿದ್ದಾರೆ.

Leave a Reply