ಡಿಜಿಟಲ್ ಕನ್ನಡ ಟೀಮ್:
ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಆರೋಗ್ಯ ವಿಚಾರಿಸಿದ್ದಾರೆ.
ಗುರುವಾರ ಮಲ್ಲೇಶ್ವರಂನ ಅಪೋಲೋ ಆಸ್ಪತ್ರೆಗೆ ತೆರಳಿದ ಸಿಎಂ ಬೇಗ ಗುಣಮುಖರಾಗುವಂತೆ ಶುಭಕೋರಿದರು. ಸಿಎಂ ಜತೆಗೆ ಸಚಿವ ಬಾಂಡೆಪ್ಪ ಕಾಶೆಂಪುರ ಅವರು ಜತೆಗಿದ್ದರು. ನಿನ್ನೆ ಕಾಂಗ್ರೆಸ್ ನಾಯಕರಾದ ರಮೇಶ್ ಜಾರಕಿಹೊಳಿ, ಬಾಲಕೃಷ್ಣ ಸೇರಿದಂತೆ ಇತರೆ ನಾಯಕರು ಆಸ್ಪತ್ರೆಗೆ ತೆರಳಿ ಡಿಕೆಶಿ ಅವರ ಆರೋಗ್ಯ ವಿಚಾರಿಸಿದ್ದರು. ಸಿಎಂ ಭೇಟಿಯ ಚಿತ್ರಗಳು ಹೀಗಿವೆ…