‘ಕಿಚ್ಚು’ ಮರೆತು ಸ್ನೇಹ ಹಸ್ತ ಚಾಚಿದ ‘ಕಿಚ್ಚ’..!

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್​ವುಡ್​ನಲ್ಲಿ ದಚ್ಚು-ಕಿಚ್ಚ ಅಂದ್ರೆ ಕುಚಿಕು ಗೆಳಯರು ಅನ್ನೋ ಮಾತಿತ್ತು. ವಿಷ್ಣು ಅಂಬಿ ಬಳಿಕ ಕಾಣಿಸಿಕೊಂಡ ಸ್ನೇಹಿತರು ಅಂದ್ರೆ ಸುಳ್ಳಲ್ಲ. ಒಂದು ಕಾಲದ ಜಿಗರಿ ದೋಸ್ತುಗಳಾಗಿದ್ದ ದರ್ಶನ್ – ಸುದೀಪ್​ ಮೇಲೆ ಅದ್ಯಾರ ಕಣ್ಣು ಬಿತ್ತೋ, ಸಣ್ಣ ಕಾರಣದಿಂದ ಇಬ್ಬರಲ್ಲೂ ಮನಸ್ತಾಪ ಶುರುವಾಗಿತ್ತು. ಬಳಿಕ ನೀನು ನನ್ನ ಸ್ನೇಹಿತ ಅಲ್ಲ ಅಂತ ದರ್ಶನ್ ಟ್ವೀಟ್ ಕೂಡ ಮಾಡಿದ್ರು. ಆದ್ರೀಗ, ಎಲ್ಲವನ್ನೂ‌ ಮರೆತು ಕುಚುಕು ಗೆಳಯನ ಅಪಘಾತ ಸುದ್ದಿ ಕೇಳಿ ಸುದೀಪ್​ ಟ್ವೀಟ್ ಮಾಡಿದ್ದಾರೆ. ಅಪಘಾತ ಸುದ್ದಿ ಕೇಳಿ ಆತಂಕವಾಗಿತ್ತು. ಆರೋಗ್ಯದಿಂದ ಇರುವೆ ಅನ್ನೋ‌ ಮಾಹಿತಿ ಬಳಿಕ ಸಮಾಧಾನ ಆಯ್ತು ಆದಷ್ಟು‌ ಬೇಗ ಗುಣಮುಖವಾಗು ಎಂದು ಹಾರೈಸಿದ್ದಾರೆ.

ಈ ಮೂಲಕವಾದರೂ ಕಿಚ್ಚ ಸುದೀಪ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಹೊಂದಾಗ್ತಾರಾ..? ಯಾವುದೇ ಹೋರಾಟ ಸಭೆ‌ ಸಮಾರಂಭಗಳಲ್ಲಿ‌ ಕೈ ಕೈ ಹಿಡಿದು ಭಾಗವಹಿಸ್ತಾರಾ ಅನ್ನೋ‌ ಕುತೂಹಲಕಾರಿ ಸಂಗತಿಯ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡ್ತಿದ್ದಾರೆ. ಸುದೀಪ್‌ ತನ್ನೆಲ್ಲಾ‌ ಅಹಂ ಬಿಟ್ಟು ಸ್ನೇಹದ ಹಸ್ತ ಚಾಚಿದ್ದಾರೆ. ಇದೀಗ ದರ್ಶನ್ ಯಾವ ರೀತಿ ರಿಯಾಕ್ಟ್ ಮಾಡ್ತಾರೆ‌ ಅನ್ನೋದ್ರು ಮೇಲೆ‌ ಸ್ನೇಹದ ಕೊಂಡಿ‌ ಮರು ಜೋಡಣೆಯ ಸಾಧ್ಯತೆ‌ ನಿಂತಿದೆ. ಆ ಬಳಿಕವಷ್ಟೇ ವೇದಿಕೆ ಸಮಾರಂಭ.. ಈ ಪರಿಸ್ಥಿಯಲ್ಲೇ‌ ಸ್ನೇಹಿತರಿಬ್ಬರನ್ನು ಒಂದು ಮಾಡಿಸುವ ಬಗ್ಗೆ ಇಬ್ಬರಿಗೂ ಸ್ನೇಹಿತರಾದವರು ಪ್ರಯತ್ನ ಮಾಡಿದ್ರೆ‌ ಒಳ್ಳೇದು.

Leave a Reply