ಡಿಜಿಟಲ್ ಕನ್ನಡ ಟೀಮ್:
ಜಿಮ್ ಟ್ರೇನರ್ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ ಪ್ರಕರಣದ ಆರೋಪಿಗಳಾದ ನಟ ದುನಿಯಾ ವಿಜಿ ಹಾಗೂ ಸಹಚರರ ಜೈಲುವಾಸ ಮತ್ತಷ್ಟು ವಿಸ್ತರಣೆ ಆಗಿದೆ.
ಮಾರುತಿಗೌಡ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆದ ಹಿನ್ನೆಲೆಯಲ್ಲಿ ದುನಿಯಾ ವಿಜಿ ಮತ್ತು ನಾಲ್ವರು ಸಹಚರರಿಗೆ ಜಾಮೀನು ಕೋರಿ 70ನೇ ಎಸಿಎಂಎಂ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಲಾಗಿತ್ತು. ಆದರೆ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 1 ಸೋಮವಾರಕ್ಕೆ ಮುಂದೂಡಿದ್ದು, ಆರೋಪಿಗಳಿಗೆ ಜೈಲೇ ಗತಿಯಾಗಿದೆ. ಆರೋಪಿಗಳ ಪರ ಎರಡನೇ ಬಾರಿಗೆ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು.
ಸೆ.23ರ ರಾತ್ರಿ ಮಾರುತಿಗೌಡರನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧನರಾಗಿದ್ದ ದುನಿಯಾ ವಿಜಿ ಕಳೆದ ಐದು ದಿನಗಳಿಂದ ಜೈಲಲ್ಲೇ ಇದ್ದು, ಜಾಮೀನು ಪಡೆಯಲು ಎರಡು ಬಾರಿ ಅರ್ಜಿ ಸಲ್ಲಿಸಿದ್ದರೂ ಬಿಡುಗಡೆಯಾಗಲು ಸಾಧ್ಯವಾಗಿಲ್ಲ.