ಡಿಜಿಟಲ್ ಕನ್ನಡ ಟೀಮ್:
ಮಾತುಕತೆಗೆ ಆಹ್ವಾನ ನೀಡುತ್ತಲೇ ಗಡಿಯಲ್ಲಿ ಭಯೋತ್ಪಾದಕ ದಾಳಿ ನಡೆಸುತ್ತಿರುವ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆ ವಾರ್ಷಿಕ ಮಹಾಸಭೆಯಲ್ಲಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟೀಕಾ ಪ್ರಹಾರ ನಡೆಸಿದ್ದಾರೆ.
ಭಾರತದ ವಿರುದ್ಧ ಭಯೋತ್ಪಾದನೆ ಮೂಲಕ ಯುದ್ಧ ಸಾರುತ್ತಿರುವ ಪಾಕಿಸ್ತಾನದ ಸುಷ್ಮಾ ಸ್ವರಾಜ್ ಅವರ ಮಾತುಗಳು ಉಗ್ರ ರಾಷ್ಟ್ರದ ಜನ್ಮ ಜಾಲಾಡಿದವು. ಪಾಕಿಸ್ತಾನವನ್ನು ಅಮೆರಿಕದ ಸ್ನೇಹ ರಾಷ್ಟ್ರ ಎಂದು ಹೇಳುವ ಮೂಲಕ ಸುಷ್ಮಾ ಸ್ವರಾಜ್ ಅಮೆರಿಕಕ್ಕೂ ಪರೋಕ್ಷವಾಗಿ ಕುಟುಕಿದರು. ವಿಶ್ವಸಂಸ್ಥೆ ವೇದಿಕೆಯಲ್ಲಿ ಸುಷ್ಮಾ ಅವರ ತೀಕ್ಷ್ಣ ಮಾತುಗಳ ಮುಖ್ಯ ಅಂಶಗಳು ಹೀಗಿವೆ…
- ಅಮೆರಿಕದ ಆತ್ಮೀಯ ಸ್ನೆಹಿತ ಪಾಕಿಸ್ತಾನ 9/11ರ ದಾಳಿ ರೂವಾರಿ ಒಸಾಮ ಬಿನ್ ಲಾಡೆನ್ ಅನ್ನು ಬಚ್ಚಿಟ್ಟಿತ್ತು. 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನದಲ್ಲಿ ಸ್ವಾತಂತ್ರವಾಗಿ ಓಡಾಡುತ್ತಿದ್ದಾನೆ.
- ಯಾವ ದೇಶವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಆದರೆ ಭಾರತದ ದುರಾದೃಷ್ಟ ನೆರೆ ರಾಷ್ಟ್ರಗಳಿಂದ ಭಯೋತ್ಪಾದನೆ ದಾಳಿಯಾಗುತ್ತಲೇ ಇದೆ.
- ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಪಾಕಿಸ್ತಾನದ ಬೀದಿ ಬೀದಿಗಳಲ್ಲಿ ಆರಾಮಾಗಿ ಓಡಾಡಿಕೊಂಡಿರುವುದು ಪಾಕಿಸ್ತಾನದ ನಿಜ ಬಣ್ಣವನ್ನು ಬಯಲು ಮಾಡಿದೆ.
- ಮಾನವಹಕ್ಕು ಉಲ್ಲಂಘನೆ ಮಾಡುವವರು ಯಾರು?
ಭಯೋತ್ಪಾದನೆಗಿಂತ ಬೇರೆ ದೊಡ್ಡ ಮಾನವಹಕ್ಕು ಉಲ್ಲಂಘನೆ ಇದೆಯೇ? - ಅಮಾಯಕ ಜೀವಗಳನ್ನು ಬಲಿ ಪಡೆಯುವ ಭಯೋತ್ಪಾದಕರನ್ನು ಮಾನವ ಹಕ್ಕುಗಳ ಹೆಸರಿನಲ್ಲಿ ರಕ್ಷಿಸುವವರು ಅಮಾನವೀಯ ಕೃತ್ಯಕ್ಕೆ ಪ್ರೋತ್ಸಾಹ ನೀಡಿದಂತಾಗಲಿದೆ. ಇದು ಯಾವ ರೀತಿಯ ಮಾನವ ಹಕ್ಕು ರಕ್ಷಣೆ?
- ಪಾಕಿಸ್ತಾನ ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳುತ್ತಾ ಅಮಾಯಕರ ರಕ್ತಪಾತವನ್ನು ನೋಡಲು ಬಯಸುತ್ತಿದೆ.
- ಪಾಕಿಸ್ತಾನದ ಶಾಂತಿ ಮಾತುಕತೆಯ ನಡೆ ಕೇವಲ ನಾಟಕ.
- ಈ ಹಿಂದೆ ಸಾಕಷ್ಟು ಬಾರಿ ಮಾತುಕತೆಗೆ ನಾವು ಮುಂದಾಗಿದ್ದೇವೆ. ಈ ಮಾತುಕತೆಗಳು ಮುರಿದು ಬೀಳಲು ಪಾಕಿಸ್ತಾನದ ಇಬ್ಬಗೆಯ ನೀತಿ ಕಾರಣ.
- ಭಾರತವೂ ಮಾತುಕತೆಯನ್ನು ಬಯುತ್ತದೆ. ಆದರೆ ಪಾಕಿಸ್ತಾನ ನಮ್ಮ ಯೋಧರನ್ನು ಹತ್ಯೆ ಮಾಡುತ್ತಿರುವಾಗ ಮಾತುಕತೆ ಅಸಾಧ್ಯ.
- 1996ರಲ್ಲೇ ಭಾರತ ಸಿಸಿಐಟಿ ಪ್ರಸ್ತಾವನೆಯನ್ನು ವಿಶ್ವಸಂಸ್ಥೆ ಮುಂದಿಟ್ಟಿತ್ತು. ಇವತ್ತಿನವರೆಗೂ ಅದು ಪ್ರಸ್ತಾವನೆಯಾಗಿಯೇ ಉಳಿದಿದೆ.
- ಮೋದಿ ಅವರ ನಾಯಕತ್ವದಲ್ಲಿ ಭಾರತ ಆರ್ಥಿಕ ಸುಧಾರಣೆಯನ್ನು ಹಾಗೂ ಸಾಮಾಜಿಕ ಭದ್ರತೆಯನ್ನು ಕಂಡುಕೊಳ್ಳುತ್ತಿದೆ. ಇದರಿಂದ ಭಾರತ ಶೀಘ್ರದಲ್ಲೇ ತನ್ನು ಗುರಿ ಮುಟ್ಟಲಿದೆ.